Day: June 18, 2021

ದಕ್ಷಿಣ ಕನ್ನಡ ಕೊರೊನಾ ರಣಕೇಕೆ | ಒಂದೇ ದಿನ 1006 ಮಂದಿಗೆ ಪಾಸಿಟಿವ್,15 ಮಂದಿ ಸಾವು

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಂದು 1006 ಮಂದಿಗೆ ಕೊರೊನಾ ದೃಢಪಟ್ಟಿದೆ. ಕೊರೊನಾದಿಂದಾಗಿ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಒಂದು ದಿನದಲ್ಲಿ 15 ಮಂದಿ ಸಾವನ್ನಪ್ಪಿದ್ದಾರೆ. ಜೂ.18ರ ಶುಕ್ರವಾರದಂದು 665 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 1024 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಶುಕ್ರವಾರದಂದು ಶೇ.10.07 ಪಾಸಿಟಿವಿಟಿ ದರ ದಾಖಲಾಗಿದೆ. 23 ಕಡೆ ಕಂಟೈನ್‌ಮೆಂಟ್‌ ವಲಯದಕ್ಷಿಣ ಕನ್ನಡ ಜಿಲ್ಲೆಯ 23 ಕಡೆಗಳಲ್ಲಿ ಶುಕ್ರವಾರ ಕಂಟೈನ್‌ಮೆಂಟ್‌ ವಲಯವನ್ನಾಗಿ ಘೋಷಣೆ ಮಾಡಲಾಗಿದೆ. ಮಂಗಳೂರಿನ 7, ಬೆಳ್ತಂಗಡಿ …

ದಕ್ಷಿಣ ಕನ್ನಡ ಕೊರೊನಾ ರಣಕೇಕೆ | ಒಂದೇ ದಿನ 1006 ಮಂದಿಗೆ ಪಾಸಿಟಿವ್,15 ಮಂದಿ ಸಾವು Read More »

ಸರ್ವೆ ಕಲ್ಪನೆ ಶಾಲಾ ಮೈದಾನದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಕ್ರಿಕೆಟ್ | 8 ಬೈಕ್ ಸೀಜ್ ಮಾಡಿದ ಸಂಪ್ಯ ಪೊಲೀಸರು

ಪುತ್ತೂರು : ಕೋವಿಡ್ ಸರಪಳಿಯನ್ನು ತುಂಡರಿಸುವ ಸಲುವಾಗಿ ಸರಕಾರ ಹಾಗೂ ಜಿಲ್ಲಾಡಳಿತದ ವಿಧಿಸಿದ್ದ ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಮುಂಡೂರು ಗ್ರಾ.ಪಂ.ವ್ಯಾಪ್ತಿಯ ಸರ್ವೆ ಕಲ್ಪನೆ ಶಾಲಾ ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಸಂಪ್ಯ ಪೊಲೀಸರು ದಾಳಿ ನಡೆಸಿ ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಕ್ರಿಕೆಟ್ ಆಟವಾಡುವ ಸಂದರ್ಭದಲ್ಲಿ ದಾಳಿ ನಡೆಸಿದ ಸಂಪ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ 8 ಬೈಕ್ ಗಳನ್ನು ಸೀಜ್ ಮಾಡಿದ್ದಾರೆ ಎನ್ನಲಾಗಿದೆ.

ಹೊಸಕನ್ನಡ ವರದಿಯ ಇಂಪಾಕ್ಟ್..ರಸ್ತೆಯಲ್ಲೇ ಇದ್ದ ಮರದ ಕೊಂಬೆಗಳನ್ನು ತೆರವುಗೊಳಿಸಿದ ಮೆಸ್ಕಾಂ ಇಲಾಖೆ

ಕಡಬದ ಮುಖ್ಯ ರಸ್ತೆ ಬದಿಯಲ್ಲಿ ಮೆಸ್ಕಾಂ ವತಿಯಿಂದ ಕಡಿದು ಹಾಕಿದ ಮರದ ಕೊಂಬೆಗಳು ಹಾಗೇ ಉಳಿದಿದ್ದು, ಈ ಬಗ್ಗೆ ಹೊಸಕನ್ನಡವು ‘ನಿದ್ದೆಯಲ್ಲಿದ್ದಾರೆಯೇ ಅಧಿಕಾರಿಗಳು?’ಎಂಬ ಶೀರ್ಷಿಕೆಯಡಿ ವರದಿ ಮಾಡಿತ್ತು. ಹೊಸಕನ್ನಡದ ಈ ವರದಿಯ ಬಳಿಕ ಎಚ್ಚೆತ್ತ ಕಡಬ ಮೆಸ್ಕಾಂ ಇಲಾಖೆಯು ಮರದ ಕೊಂಬೆಗಳನ್ನು ರಸ್ತೆ ಬದಿಯಿಂದ ತೆರವುಗೊಳಿಸಿದ್ದು, ವಾಹನ ಸವಾರರಿಗೆ, ದಾರಿಹೋಕರಿಗೆ ಆಗುತ್ತಿರುವ ತೊಂದರೆಯು ತಪ್ಪಿದಂತಾಗಿದೆ.

ಅನ್ಯಜಾತಿಯ ಹುಡುಗನನ್ನು ಪ್ರೀತಿಸಿದ ಮಗಳನ್ನೇ ಹತ್ಯೆ ಮಾಡಿದ ಅಪ್ಪ

ಅನ್ಯ ಜಾತಿಯ ಹುಡುಗನನ್ನ ಪ್ರೀತಿಸಿದ್ದಾಳೆ ಎಂಬ ಕಾರಣಕ್ಕೆ ತಂದೆಯೋರ್ವ ತನ್ನ ಮಗಳನ್ನೇ ಹತ್ಯೆ ಮಾಡಿರುವ ಘಟನೆ ಜೂನ್ 18ರಂದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ನಡೆದಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಮಹದೇಶ್ವರ ದೇವಸ್ಥಾನದ ಬೀದಿಯಲ್ಲಿಯೇ ತಂದೆ ಇಂತಹ ಘನಘೋರ ಕೃತ್ಯ ನಡೆಸಿದ್ದಾನೆ. ತಂದೆಯಿಂದ ಹತ್ಯೆಯಾದ ಯುವತಿಯನ್ನು ಗಾಯತ್ರಿ (18) ಎಂದು ಗುರುತಿಸಲಾಗಿದೆ. ಜಯಣ್ಣ ಕೊಲೆಗೈದ ಆರೋಪಿ ತಂದೆ. ಈತ ಮಗಳನ್ನು ಹತ್ಯೆಗೈದು ಪೊಲೀಸರಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಹುಣಸೂರು ಡಿವೈಎಸ್ಪಿ ರವಿಪ್ರಸಾದ್ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಕಡಬ ತಾ. : ಕೊರೊನಾ ನಿರ್ವಹಣೆಯಲ್ಲಿ ಪಿಡಿಓ,ಅಧಿಕಾರಿಗಳು ಫೈಲ್ | ಕೆಲಸ ಮಾಡಲು ಆಗದಿದ್ದರೆ ರಾಜಿನಾಮೆ ಕೊಟ್ಟು ಹೋಗಿ | ಅಧಿಕಾರಿಗಳ ಚಳಿ ಬಿಡಿಸಿದ ಸಿಇಒ ಡಾ.ಕುಮಾರ್

ಕಡಬ: ಗ್ರಾಮದಲ್ಲಿ ಎಷ್ಟು ಕೊರೋನಾ ಸೋಂಕು ಪೀಡಿತರಿದ್ದಾರೆ? ಎಷ್ಟು ಜನ ಹೋಂ ಐಸೋಲೇಶನ್‌ನಲ್ಲಿದ್ದಾರೆ? ಅವರ ಪ್ರಾಥಮಿಕ ಸಂಪರ್ಕದವರು ಎಷ್ಟು ಜನರಿದ್ದಾರೆ? ಅವರನ್ನು ಸ್ಲಾಬ್ ಟೆಸ್ಟ್ ಮಾಡಲಾಗಿದೆಯೇ? ಕೊರೋನಾ ನಿರ್ವಹಣೆಯ ಬಗ್ಗೆ ಯಾವಆಪ್‌ನಲ್ಲಿ ನೋಂದಾಣಿ ಮಾಡಬೇಕು? ಎಂಬಿತ್ಯಾದಿ ಪ್ರಶ್ನೆಗಳು ಅಲ್ಲದೆ ಸ್ವಚ್ಚ ಭಾರತ ಮತ್ತು ನರೇಗಾ ಯೋಜನೆ, 15ನೇ ಹಣಕಾಸು ಯೋಜನೆಯ ನಿರ್ವಹಣೆ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಕಡಬ ತಾಲೂಕಿನ ಗ್ರಾ.ಪಂ. ಅಭಿವೃದ್ದಿ ಅಧಿಕಾರಿಗಳು ಉತ್ತರಿಸಿದೆ ಇದ್ದಾಗ ಗರಂಗೊಂಡ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ| ಕುಮಾರ್ ಅವರು ಕಡಬ …

ಕಡಬ ತಾ. : ಕೊರೊನಾ ನಿರ್ವಹಣೆಯಲ್ಲಿ ಪಿಡಿಓ,ಅಧಿಕಾರಿಗಳು ಫೈಲ್ | ಕೆಲಸ ಮಾಡಲು ಆಗದಿದ್ದರೆ ರಾಜಿನಾಮೆ ಕೊಟ್ಟು ಹೋಗಿ | ಅಧಿಕಾರಿಗಳ ಚಳಿ ಬಿಡಿಸಿದ ಸಿಇಒ ಡಾ.ಕುಮಾರ್ Read More »

ಸುಬ್ರಹ್ಮಣ್ಯ:ಪಿಡಿಓ ಗೆ ಬೆದರಿಕೆ ಒಡ್ಡಿದ ಯುವಕನ ವಿರುದ್ಧ ಪ್ರಕರಣ ದಾಖಲು

ಸುಬ್ರಹ್ಮಣ್ಯ :ಕೊರೋನ ಪಾಸಿಟಿವ್ ಬಂದ ಯುವಕನೋರ್ವನನ್ನು ಪಂಚಾಯತ್ ಸದಸ್ಯರು ಒತ್ತಾಯಪೂರ್ವಕವಾಗಿ ಕೋವಿಡ್ ಸೆಂಟರ್ ಗೆ ಸೇರಿಸಿದ್ದರು. ಇದರಿಂದ ಅಸಮಾಧಾನಗೊಂಡ ಯುವಕ ಪಿಡಿಓ ಗೆ ಬೆದರಿಕೆ ಒಡ್ದಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಯುವಕನೋರ್ವನಿಗೆ ಕೊರೋನ ಪಾಸಿಟಿವ್ ಬಂದಿದ್ದು, ಹೋಂ ಐಸೋಲೇಷನ್ ನಲ್ಲಿರುವ ಸಂದರ್ಭದಲ್ಲಿ ಹೊರಗಡೆ ತಿರುಗಾಡುವುದನ್ನು ಸಾರ್ವಜನಿಕರು ಗಮನಿಸಿ ಪಂಚಾಯತ್ ಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯುವಕನ ಮನೆಗೆ ದೇವಚಳ್ಳ ಪಿಡಿಓ ಗುರುಪ್ರಸಾದ್, ತಾಲೂಕು ಆಡಳಿತ ಅಧಿಕಾರಿಗಳು ಹಾಗೂ …

ಸುಬ್ರಹ್ಮಣ್ಯ:ಪಿಡಿಓ ಗೆ ಬೆದರಿಕೆ ಒಡ್ಡಿದ ಯುವಕನ ವಿರುದ್ಧ ಪ್ರಕರಣ ದಾಖಲು Read More »

ಕಡಬದ ಮುಖ್ಯ ರಸ್ತೆ ಬದಿಯಲ್ಲೇ ಇದೆ ಮೆಸ್ಕಾಂ ವತಿಯಿಂದ ಕಡಿದು ಹಾಕಿದ ಮರದ ಗೆಲ್ಲುಗಳು..ಇನ್ನೂ ತೆರವುಗೊಳಿಸದೇ ನಿದ್ದೆಯಲ್ಲಿದ್ದಾರೆಯೇ ಮೆಸ್ಕಾಂ ಅಧಿಕಾರಿಗಳು

ಕಡಬ ಪೇಟೆಯ ಮುಖ್ಯ ರಸ್ತೆಯ ಫುಟ್ ಪಾತ್ ನಲ್ಲೇ ಇನ್ನೂ ತೆರವುಗೊಳಿಸದೇ ಉಳಿದಿದೆ ಮೆಸ್ಕಾಂ ವತಿಯಿಂದ ಕಡಿದು ಹಾಕಿದ ಮರದ ಗೆಲ್ಲುಗಳು.ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಗಳು ಹರಿದಾಡುತ್ತಿವೆ, ಆದರೂ ಅಧಿಕಾರಿಗಳ ಗಮನಕ್ಕೆ ಬರಲಿಲ್ಲ ಎಂಬುವುದೇ ವಿಪರ್ಯಾಸ. ಮುಂಜಾನೆ ಹೊತ್ತಿಗೆ ಕಡಬ ಪೇಟೆಗೆ ದಿನಸಿ ಸಾಮಗ್ರಿಗಳನ್ನು ಕೊಂಡೊಯ್ಯಲು ಹೆಚ್ಚು ವಾಹನಗಳು, ಜನರು ಬರುತ್ತಿರುವುದರಿಂದ ಈ ರೀತಿ ರಸ್ತೆ ಬದಿ ಮರದ ಗೆಲ್ಲುಗಳು ವಾಹನ ಸವಾರರಿಗೆ ಅಡಚಣೆಯುಂಟುಮಾಡುತ್ತಿದೆ.ಈ ಬಗ್ಗೆ ತಕ್ಷಣ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು, …

ಕಡಬದ ಮುಖ್ಯ ರಸ್ತೆ ಬದಿಯಲ್ಲೇ ಇದೆ ಮೆಸ್ಕಾಂ ವತಿಯಿಂದ ಕಡಿದು ಹಾಕಿದ ಮರದ ಗೆಲ್ಲುಗಳು..ಇನ್ನೂ ತೆರವುಗೊಳಿಸದೇ ನಿದ್ದೆಯಲ್ಲಿದ್ದಾರೆಯೇ ಮೆಸ್ಕಾಂ ಅಧಿಕಾರಿಗಳು Read More »

ರಾಜ್ಯದಲ್ಲಿ 100ಕ್ಕೂ ಅಧಿಕ ಪತ್ರಕರ್ತರು ಕೋವಿಡ್‌ಗೆ ಬಲಿಯಾಗಿದ್ದಾರೆ -ಶಿವಾನಂದ ತಗಡೂರು

ಮಂಗಳೂರು ಜೂ.18:ರಾಜ್ಯದಲ್ಲಿ 100 ಕ್ಕೂ ಅಧಿಕ ಮಂದಿ ಪತ್ರಕರ್ತರು ಕೊರೋನಾ ಸಂಕಷ್ಟದ ಎರಡು ಅಲೆಗಳ ಸಂದರ್ಭದಲ್ಲಿ ಸಾವಿಗೀಡಾ ಗಿದ್ದಾರೆ ಎಂದು ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ ರಾ ಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ. ಅವರು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿಂದು ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯ ರನ್ನು ಭೇಟಿ ಮಾಡಿ. ಅಗಲಿದ ಪತ್ರಕರ್ತರಿಗೆ ಸಂತಾಪ ಸೂಚಿಸಿ ಮಾತನಾಡುತ್ತಿದ್ದರು. ಕೊರೋನಾ ಸಂದರ್ಭದಲ್ಲಿ ವ್ರತ್ತಿನಿರತ ಪತ್ರಕರ್ತರು ಸವಾಲುಗಳ ಮಧ್ಯೆ ಕಾರ್ಯ ನಿರ್ವಹಿಸಿದ್ದಾರೆ.ಈ ನಡುವೆ …

ರಾಜ್ಯದಲ್ಲಿ 100ಕ್ಕೂ ಅಧಿಕ ಪತ್ರಕರ್ತರು ಕೋವಿಡ್‌ಗೆ ಬಲಿಯಾಗಿದ್ದಾರೆ -ಶಿವಾನಂದ ತಗಡೂರು Read More »

ಕಾಣಿಯೂರು : ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲದಿಂದ ಬಾಳಿಗೊಂದು ಆಸರೆ ಮನೆ ಹಸ್ತಾಂತರ

ಕಾಣಿಯೂರು : ಯುವಕರು ಮನಸ್ಸು ಮಾಡಿದರೆ ಇಡೀ ಸಮಾಜವನ್ನು ನಿರ್ಮಾಣ ಮಾಡಬಲ್ಲರು, ಮನುಷ್ಯನ ಕಷ್ಟಕ್ಕೆ ಕೈ ಜೋಡಿಸಬಲ್ಲರು ಎಂಬುದಕ್ಕೆ ಕಾಣಿಯೂರಿನ ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲ ಸಾಕ್ಷಿಯಾಗಿದೆ. ಸೇವಾ ಪ್ರತಿಫಲ ಬಯಸದೇ ಸಾಮಾಜಿಕ ಸೇವಾ ಕಳಕಳಿಯನ್ನು ಹೊಂದಿರುವ ಅದೆಷ್ಟೋ ಅನನ್ಯ ಉತ್ಸಾಹಿ ಯುವ ತರುಣ ಸಂಘಟನೆಗಳಿವೆ. ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಎಲುವೆ ಬೊಮ್ಮಿ ಎಂಬವರು ತಮ್ಮ ಜೀವನ ನಿರ್ವಹಣೆಗೆ ಕೂಲಿ ಮಾಡಿ ತನ್ನ ದಣಿವನ್ನು ಆರಿಸಿಕೊಳ್ಳಲು ಜೋಪಡಿ ಸೇರಿಕೊಳ್ಳೋಣವೆಂದರೆ ಮೂಲ ಸೌಕರ್ಯಗಳೇ ಇಲ್ಲದ ಮನೆ ಇವತ್ತೋ.. …

ಕಾಣಿಯೂರು : ಶ್ರೀ ಲಕ್ಷ್ಮೀ ನರಸಿಂಹ ಯುವಕ ಮಂಡಲದಿಂದ ಬಾಳಿಗೊಂದು ಆಸರೆ ಮನೆ ಹಸ್ತಾಂತರ Read More »

ಜೂ.19 : ಸಚಿವ ಎಸ್.ಅಂಗಾರ ಅವರಿಂದ ಕಾಣಿಯೂರು,ಬೆಳಂದೂರು,ಪೆರಾಬೆ,ಆಲಂಕಾರು,ಸವಣೂರು ಗ್ರಾ.ಪಂ.ನಲ್ಲಿ ಕೊವಿಡ್ ಕಾರ್ಯಪಡೆ ಸಭೆ | ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ

ಸವಣೂರು :ಜೂ.19ರಂದು ಸಚಿವ ಎಸ್.ಅಂಗಾರ ಅವರಿಂದ ಕಾಣಿಯೂರು,ಬೆಳಂದೂರು,ಪೆರಾಬೆ,ಆಲಂಕಾರು,ಸವಣೂರು ಗ್ರಾ.ಪಂ.ನಲ್ಲಿ ಕೊವಿಡ್ ಕಾರ್ಯಪಡೆ ಸಭೆ ನಡೆಸಲಿದ್ದಾರೆ.ಬೆಳಿಗ್ಗೆ 10 ಗಂಟೆಗೆ ಕಾಣಿಯೂರು ಗ್ರಾ.ಪಂ,12 ಗಂಟೆಗೆ ಬೆಳಂದೂರು,ಮಧ್ಯಾಹ್ನ 1 ಗಂಟೆಗೆ ಪೆರಾಬೆ ಗ್ರಾ.ಪಂ,2 ಗಂಟೆಗೆ ಆಲಂಕಾರು ಗ್ರಾ.ಪಂ,ಮಧ್ಯಾಹ್ನ 3.30 ಗಂಟೆಗೆ ಸವಣೂರು ಗ್ರಾ.ಪಂ.ನಲ್ಲಿ ಸಭೆ ನಡೆಯಲಿದೆ. ಇದೇ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರಿಗೆ ಕಾರ್ಯಪಡೆ ಸಭೆಗಳಲ್ಲಿ ಕಿಟ್ ವಿತರಣೆ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top