ಅರ್ಜೆಂಟಾಗಿ ಬುದ್ಧಿಜೀವಿಯಾಗಲು ಹೊರಟಿರುವ ಜಾಬ್ ಲೆಸ್ ನಟ ಚೇತನ್ ವಿರುದ್ಧ ಬ್ರಾಹ್ಮಣ ಸಂಘದಿಂದ ದೂರು, ಎಫ್ಐಆರ್ ದಾಖಲು !

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚೇತನ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಕನ್ನಡದ ಖ್ಯಾತ ನಟ, ಸದ್ಯಕ್ಕೆ ಜಾಬ್ ಲೆಸ್ ಆಗಿರುವ ಚೇತನ್ ರಾಜ್ಯಾದ್ಯಂತ ಕೊರೊನಾ ಸೋಂಕಿತರು, ಕೊರೊನಾ ವಾರಿಯರ್ಸ್, ಲಾಕ್ ಡೌನ್ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಕಾರ್ಯದಲ್ಲಿ ನಿರತರಾಗಿದ್ದ. ಆತನನ್ನು ನಟನಾಗಿ ಈಗ ಯಾರೂ ತೆಗೆದುಕೊಳ್ಳುತ್ತಿಲ್ಲ. ಲಾಕ್ ಡೌನ್ ಕಿಟ್ ಹಂಚಿ ಒಂದಿಷ್ಟು ಚಿಲ್ಲರೆ ಪ್ರಚಾರ ಪಡೆದುಕೊಂಡ. ಆತನಿಗೆ ಈಗ ಅರ್ಜೆಂಟಾಗಿ ಬುದ್ಧಿಜೀವಿ ಆಗಬೇಕಿದೆ. ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನು ಆತ ಮಾಡಿಕೊಳ್ಳುತ್ತಿದ್ದಾರೆ. ಬುದ್ಧ ಬಸವ ಅಂಬೇಡ್ಕರ್ ಮುಂತಾದವರನ್ನು ಹೊಗಳುವ ನೆಪದಲ್ಲಿ ಹಿಂದೂ ಸಂಸ್ಕೃತಿಯನ್ನು ಅವಮಾನಿಸುವುದು ಆತನ full-time ಕಾಯಕ.

ಮೊನ್ನೆ ಬ್ರಾಹ್ಮಣರಿಗೆ ಪ್ರತ್ಯೇಕವಾಗಿ ಆಹಾರ ವಿತರಣೆ ಮಾಡಿದ ನಟರೊಬ್ಬರ ಬಗ್ಗೆ ಮನುಷ್ಯ ಚೇತನ್ ಟೀಕಿಸಿದ್ದರು. ಟೀಕಿಸಿ ವಿಡಿಯೋ ಮಾಡುವಾಗ ಕೂಡ ಶೋ ಅಪ್ ಕೊಡುವುದು ಆತನ ಖಯಾಲಿ. ತನ್ನ ಹಿಂದೆ ದೊಡ್ಡ ಬುಕ್ಕುಗಳನ್ನು ಪೇರಿಸಿ ಇಟ್ಟ ರ್ಯಾಕ್ ಕಾಣುವಂತೆ ಆತ ವಿಡಿಯೋ ತೆಗೆಸಿಕೊಳ್ಳುತ್ತಾರೆ. ತನ್ನನ್ನು ಬುದ್ಧಿಜೀವಿ ಎಂದು ಬಿಂಬಿಸಿ ಕೊಳ್ಳುವ ಪ್ರಯತ್ನ ಆತನದು. ಇಂತಹ ನಟ ಚೇತನ್, ಮೊನ್ನೆ ಬ್ರಾಹ್ಮಣರನ್ನು ಕೇವಲ ಟೀಕಿಸಿದ್ದು ಮಾತ್ರವಲ್ಲ, ಬ್ರಾಹ್ಮಣ್ಯವನ್ನು ದೂರಿದ್ದಾರೆ, ಅವಮಾನಿಸಿದ್ದಾರೆ ಎನ್ನುವುದು ವಿಪ್ರ ಸಂಘದ ದೂರು.

ಹೀಗಾಗಿ ನಟ ಚೇತನ್ ಹೇಳಿಕೆಗೆ ಕೆಂಡಾಮಂಡಲವಾಗಿದ್ದ ಬ್ರಾಹ್ಮಣ ಸಮುದಾಯ ಸಿಡಿದೆದ್ದು ದೂರು ಕೊಟ್ಟಿದೆ. ಆಯಾ ಧರ್ಮದ ಆಯಾ ಜಾತಿಯ ಆಯಾ ಪಂಗಡದ ವ್ಯಕ್ತಿಗಳಿಗೆ ಅವರವರು ಸಂಘ ಕಟ್ಟಿಕೊಂಡು ಪರಸ್ಪರ ಸಹಾಯ ಮಾಡುವುದು ಸಾಮಾನ್ಯ ಸಂಗತಿ. ಅದರಲ್ಲಿ ಕೂಡಾ ತಪ್ಪು ಹುಡುಕಿದ ಮಾಜಿ ನಟ ಚೇತನ್, ಸನಾತನ ಹಿಂದೂ ಸಮುದಾಯದ ಭದ್ರ ಬುನಾದಿಗೆ ಅಪಮಾನ ಉಂಟು ಮಾಡಿ , ಸಮಾಜದಲ್ಲಿ ಸ್ವಾಸ್ಥ್ಯವನ್ನು ಹಾಳುಮಾಡಿ, ಜನರನ್ನು ಎತ್ತಿಕಟ್ಟುವ ರೀತಿ ಚೇತನ್ ಹೇಳಿಕೆ ನೀಡಿದ್ದಾರೆ.

ಬ್ರಾಹ್ಮಣ ಹಾಗೂ ಬ್ರಾಹ್ಮಣ್ಯದ ಕುರಿತು ಹೇಳಿಕೆ ನೀಡಿದ್ದು, ಬ್ರಾಹ್ಮಣರ ಕುರಿತು ವ್ಯಂಗ್ಯವಾಗಿ ಮಾತಾಡಿದ್ದಾರೆ. ಇಂಥ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಬ್ರಾಹ್ಮಣರು ಭಯೋತ್ಪಾದಕರು ಎಂದು ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ವಿಪ್ರ ಯುವ ವೇದಿಕೆಯಿಂದ ಬಸವನಗುಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಗಿದೆ.

ಸದ್ಯ ದೂರಿನ ಆಧಾರದ ಮೇಲೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ನಟ ಚೇತನ್ ವಿರುದ್ದ ಎಫ್ ಐ ಆರ್ ದಾಖಲಾಗಿದ್ದು, ಐಪಿಸಿ 153(ಬಿ) 295(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.