ಅನ್ ಬಿಲೀವೇಬಲ್ ಲವ್ ಸ್ಟೋರಿ | ತನ್ನ ಮನೆಯವರಿಗೂ ಗೊತ್ತಿಲ್ಲದಂತೆ ಒಂದೇ ಕೋಣೆಯಲ್ಲಿ ಆ ಜೋಡಿ 11 ವರ್ಷ ಸಂಸಾರ ಮಾಡಿತ್ತು !!

ಕೇರಳದಲ್ಲಿ ನಡೆದ ಈ ಘಟನೆಗೆ ಪ್ರೀತಿ ಎನ್ನಬೇಕೋ ಅಥವಾ ಬೇರೆನಾದ್ರೋ ಹೆಸರಲ್ಲಿ ಕರೀಬೇಕೊ ಎಂದು ಗೊತ್ತಾಗದ ಅಯೋಮಯ.

ಇದು ತಾನು ಪ್ರೀತಿಸಿದ ಹುಡುಗಿಯನ್ನು ತನ್ನ ಮನೆಗೆ ಕರೆದುಕೊಂಡು ಬಂದು ಸುದೀರ್ಘ ಹತ್ತು ವರ್ಷಗಳ ಅಧಿಕ ಕಾಲ ತನ್ನ ರೂಮಿನಲ್ಲಿ ಯಾರಿಗೂ ಗೊತ್ತಾಗದಂತೆ ಅಡಗಿಸಿಟ್ಟ ವ್ಯಕ್ತಿಯೊಬ್ಬನ ಕಥೆ.

ಇತ್ತೀಚೆಗೆ, ಅಂದರೆ ಮೂರು ತಿಂಗಳ ಹಿಂದಷ್ಟೆ ಯುವಕ ತನ್ನ ಮನೆಯಿಂದ ನಾಪತ್ತೆಯಾಗಿದ್ದ. ಆತಂಕಗೊಂಡ ಪಾಲಕರು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಅಷ್ಟರಲ್ಲಿ ಆ ಯುವಕ ತನ್ನ ಸಹೋದರನ ಕಣ್ಣಿಗೆ ಬಿದ್ದಿದ್ದ. ಪೊಲೀಸರಿಗೆ ಈ ವಿಷಯ ಗೊತ್ತಾಗುತ್ತಿದ್ದಂತೆ ಯುವಕನನ್ನು ಬಂಧಿಸಿ ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗ ಬಯಲಾಗಿತ್ತು ಸುದೀರ್ಘ ಹತ್ತು ವರ್ಷಗಳ ಕಾಲ ಅಡಗಿಸಿಟ್ಟುಕೊಂಡಿದ್ದ ನಿಗೂಢ ಪ್ರೇಮಕಥೆ.

ಅವರಿಬ್ಬರೂ ಒಂದೇ ಗ್ರಾಮದವರು. ಅದು ಹೇಗೋ ಆ ಯುವಕ-ಯುವತಿಯ ಮದ್ಯೆ ಪ್ರೇಮ ಪಲ್ಲವಿಸಿತ್ತು. ಪ್ರೀತಿ ಮೊಗ್ಗೊಡೆದು ಅರಳಿ ಒಂದು ಹಂತಕ್ಕೆ ಬರುವಷ್ಟರಲ್ಲಿ ಎದುರಿಗೆ ದೊಡ್ಡದಾಗಿ ಬಂದು ನಿಂತಿತ್ತು ಅವರಿಬ್ಬರ ಜಾತಿ.

ತಮ್ಮಿಬ್ಬರ ಮನೆಯಲ್ಲೂ ಪರಸ್ಪರ ಮನೆಯವರು ಒಪ್ಪುವುದಿಲ್ಲ. ಎಲ್ಲಿಯಾದರೂ ಓಡಿ ಹೋಗೋಣ ಎಂದು ಪ್ರೇಮಿಗಳು ಮೊದಲು ಯೋಚಿಸಿದ್ದಾರೆ. ಆದರೆ ಬಾರಿಗೆ ಹಣದ ಮುಗ್ಗಟ್ಟು ಕಣ್ಣೆದುರು ಬಂದು ನಿಂತಿದೆ. ಹಣವಿಲ್ಲದೆ ಹೋದರೆ, ದೂರದ ಊರಿಗೆ ಓಡಿ ಹೋಗಿ ಅಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿಕೊಂಡು ದುಡಿದು ಬದುಕುವ ತಾಕತ್ತು ಆತನಿಗೆ ಇರಲಿಲ್ಲ. ಈಗ ಆತ ವಾಸಿಸುತ್ತಿರುವ ತನ್ನ ಮನೆಯ ಪಕ್ಕದಲ್ಲಿ ಆತನಿಗೆ ಉದ್ಯೋಗ ಸಿಕ್ಕಿತ್ತು. ಉಂಡುಟ್ಟು ಬದುಕುವುದಕ್ಕೆ ದೊಡ್ಡ ತೊಂದರೆ ಏನೂ ಇರಲಿಲ್ಲ. ಹಾಗಾಗಿ ಅಮರ ಪ್ರೇಮಿಗಳು ಓಡಿ ಹೋಗದೇ ತಾವು ಇರುವ ಈ ಊರಿನಲ್ಲಿಯೇ ಇರಲು ನಿರ್ಧರಿಸಿದ್ದಾರೆ.

ಹಾಗಂತ ತಾವು ಮಾಡಿದ ಪ್ರೀತಿಯನ್ನು ಕೊಂದುಕೊಂಡು ದೂರವಾಗಿ ಬಿಡುವುದು ಅವರಿಬ್ಬರಿಗೆ ಇಷ್ಟವಿರಲಿಲ್ಲ. ಅದಕ್ಕಾಗೇ ಆ ಯುವಕ ಒಂದು ಹೊಸ ಯೋಜನೆ ರೂಪಿಸಿದ್ದ.
ಕೈಯಲ್ಲಿ ಸಾಕಷ್ಟು ಹಣವಿಲ್ಲದ ಅವರು, ಈಗ ಆತ ವಾಸಿಸುತ್ತಿರುವ ಯುವಕನ ರೂಮಿನಲ್ಲಿಯೇ ಸಂಸಾರ ಹೂಡಲು ನಿರ್ಧರಿಸಿದ್ದಾರೆ.

ಅದೊಂದು ದಿನ ಊರಿಗೆ ಹೋದೆ ಮಲಗಿರುವಾಗ ಆತ ತನ್ನ ಪ್ರೇಯಸಿಯನ್ನು ಆತನ ರೂಮಿಗೆ ಕರೆತಂದಿದ್ದ. ಹಾಗೆ ಬಲಗಾಲಿಟ್ಟು ಆತನ ರೂಮಿನೊಳಕ್ಕೆ ಬಂದ ಹುಡುಗಿ ಮತ್ತೆಂದೂ ಆ ರೂಮಿನ ಬಾಗಿಲು ದಾಟಿ ಹೊರಕ್ಕೆ ಬರಲಿಲ್ಲ.
ಸುದೀರ್ಘ ಹತ್ತು ವರ್ಷಗಳ ಕಾಲ ಆ ಪ್ರೇಮಿಗಳು ರಹಸ್ಯ ಕೋಣೆಯಲ್ಲೇ ಬಚ್ಚಿಟ್ಟುಕೊಂಡು ಲವ್ ಕಹಾನಿ ಮುಂದುವರಿಸಿದ್ದಾರೆ. ಆಕೆ ಮನೆಯಿಂದ ಕಳ್ಳ ಕಿಟಕಿಯ ಮೂಲಕ ಹೊರಕ್ಕೆ ಬಂದು, ಮನೆಯವರೆಲ್ಲ ಮಲಗಿ ನಿದ್ದೆ ಹೊಡೆಯುವ ಮಧ್ಯರಾತ್ರಿಯ ಹೊತ್ತಲ್ಲಿ ಶೌಚ ಸ್ನಾನ ಎಲ್ಲವನ್ನು ಮುಗಿಸಿಕೊಂಡು ಮತ್ತೆ ರೂಮು ಸೇರಿಸಿಕೊಳ್ಳುತ್ತಿದ್ದಳು. ತಾನು ಕೋಣೆಯಲ್ಲೇ ಊಟ ಮಾಡುವೆ ಎಂದು ತಟ್ಟೆಗೆ ಊಟ ಹಾಕಿಕೊಂಡು ಹೋಗುತ್ತಿದ್ದವ ತನ್ನ ಪ್ರೇಯಸಿಗೆ ಕೊಡುತ್ತಿದ್ದ. ತನ್ನ ಕೋಣೆಯೊಳಗೆ ಯಾರಿಗೂ ಪ್ರವೇಶ ನೀಡುತ್ತಿರಲಿಲ್ಲ. ಮನೆಯವರು ಏಕೆ? ಏನು ಪ್ರಶ್ನಿಸುವುದನ್ನು ತಪ್ಪಿಸಲು ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಹಾಗಾಗಿ ಮನೆಯವರೂ ಅವನತ್ತ ಹೆಚ್ಚು ಸುಳಿಯುತ್ತಿರಲಿಲ್ಲ. ಕೆಲಸಕ್ಕೆ ಹೋದವ ಬೇಗ ಮನೆಗೆ ಬಂದು ಕೋಣೆ ಸೇರಿಕೊಳ್ಳುತ್ತಿದ್ದ. ಪ್ರೇಯಸಿಯೊಂದಿಗೆ ಕಾಲ ಕಳೆಯುತ್ತಿದ್ದ.

ಆ ಮುಚ್ಚಿದ ಬಾಗಿಲುಗಳ ರೂಮ್ ನೇ ಆಕೆಯ ಸರ್ವಸ್ವ. ಅದರೊಳಗೆ ಆಕೆ ತನ್ನ ಜೀವಮಾನದ ಹತ್ತು ವರ್ಷಗಳನ್ನು ಆತನ ಪ್ರೀತಿಯಲ್ಲಿ ಅಪ್ಪುಗೆಯಲ್ಲಿ ಮತ್ತು ಮುಂದೊಂದು ದಿನ ತಾನು ಕೂಡ ಎಲ್ಲರಂತೆ ಮನೆ ಮಾರ್ಕೆಟ್ಟು ಎಂದು ಓಡಾಡುತ್ತಾ ಸಂಸಾರ ಮಾಡುವ ನಿರೀಕ್ಷೆಯಲ್ಲೇ ಆಕೆ ನಿಶಾಚರಲಾಗಿ ಕಳೆದಿದ್ದಾಳೆ.

ಬಹುಶಹ ಆ ನಿಗೂಢ ಕೋಣೆಯಿಂದ ಹೊರಕ್ಕೆ ಬಂದು ಎಲ್ಲರಂತಾಗಲು, ಅದಕ್ಕೆ ಕಾಲ ಕೂಡಿ ಬರಲು ಹತ್ತು ವರ್ಷಗಳು ಆಕೆ ಕಾಯಬೇಕಿತ್ತೆನೋ. ಇತ್ತೀಚಿಗೆ ಒಂದು ರಾತ್ರಿ ವೇಳೆ ಆಕೆಯನ್ನ ಮನೆಯಿಂದ ಹೊರ ಕರೆದೊಯ್ದು ಮದುವೆ ಮಾಡಿಕೊಂಡು ವಿಥಾನಸ್ಸೆರಿ ಗ್ರಾಮದಲ್ಲಿ ಆತ ವಾಸವಿದ್ದ.

ಯಾವಾಗ ಯುವಕ ಮನೆಯಿಂದ ಮಿಸ್ಸಿಂಗ್ ಆದರೂ ಆತನ ಪಾಲಕರು ಪೊಲೀಸರ ಮೊರೆ ಹೋಗಿದ್ದಾರೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ವಿಚಾರಣೆಯ ವೇಳೆ ನಿಗೂಢ ಕೊನೆಯ ಸುದೀರ್ಘ 11 ವರ್ಷಗಳ ಪ್ರೇಮಕಥೆ ಬೆಳಕು ಕಂಡಿದೆ.

ಇನ್ನು ರಹಸ್ಯ ಕೋಣೆಯ ಕಿಟಕಿ ಮೂಲಕ ಯುವತಿ ತನ್ನ ತಂದೆ ತಾಯಿಯನ್ನ ಎರಡು ಮೂರು ಬಾರಿ ನೋಡಿದ್ದರೂ ಮಾತನಾಡಿಸುವ ಗೋಜಿಗೆ ಹೋಗಿರಲಿಲ್ಲವಂತೆ. ಕೆಮ್ಮು ಬಂದರೂ ಕೆಮ್ಮದ ಸೀನಿದರೂ ಕೇಳಿಸದಂತೆ, ಮೈ ಮತ್ತು ಮನಸ್ಸನ್ನು ಅದುಮಿಟ್ಟುಕೊಂಡು ಆಕೆ ಅಲ್ಲಿ ಜೀವನ ಸಾಗಿಸಿದ್ದಾಳೆ. ಯುವಕನಿಗಾದರೂ, ಕೆಲಸಕ್ಕೆಂದು ಹೊರಗೆ ಹೋಗಿ ಬರುತ್ತಿದ್ದ ಕಾರಣ ಆತನಿಗೆ ಒಂದಷ್ಟು ರಿಲಕ್ಸೇಶನ್ ಆದರೂ ಸಿಗುತ್ತಿತ್ತು.

ಆದರೆ ಇದೀಗ ಆ ಕೋಣೆಯ ರಹಸ್ಯ ಬಯಲಾಗಿದೆ. ಆ ಅಮರ ಪ್ರೇಮಿಗಳು, ಕೇರಳದ ಪಾಲಕ್ಕಾಡ್ ಜಿಲ್ಲೆಯ ಅರಿಯೂರು ಸಮೀಪದ ಕರೈಕ್ಕಟ್ಟುಪರಂಬು ಗ್ರಾಮದವರು. 2010ರ ಫೆಬ್ರವರಿ 2ರಂದು 19 ವರ್ಷದ ಯುವತಿಯೊಬ್ಬಳು ನಾಪತ್ತೆಯಾಗಿದ್ದಳು. ಮಗಳಿಗಾಗಿ ಈಕೆಯ ಪಾಲಕರು ಹುಡುಕಿದ ಜಾಗವಿಲ್ಲ. ಪೊಲೀಸ್ ಠಾಣೆಯಲ್ಲಿ ಯುವತಿ ನಾಪತ್ತೆ ಕೇಸ್ ಕೂಡ ದಾಖಲಾಗಿತ್ತು. ಪೊಲೀಸರು ಹುಡುಕಾಡಿದರೂ ಪತ್ತೆಯಾಗಲಿಲ್ಲ.
ಆದರೆ, ಆ ಯುವತಿ ಅದೇ ಗ್ರಾಮದ ತನ್ನ ಪ್ರಿಯಕರನ ಮನೆಯಲ್ಲೇ ಇದ್ದಳು. ಯುವತಿ ಮತ್ತು ಯುವಕನ ಮನೆ ಕೇವಲ 100 ಮೀಟರ್ ಅಂತರದಲ್ಲಿದ್ದರೂ ಯಾರೊಬ್ಬರಿಗೂ 11 ವರ್ಷ ಕಾಲ ಗೊತ್ತೇ ಆಗಿಲ್ಲ.

ಇದೀಗ ಇವರ 11 ವರ್ಷದ ಪ್ರೇಮ ಕಹಾನಿಯನ್ನು ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಆ ಮನೆಯಲ್ಲಿದ್ದ ಕುಟುಂಬಸ್ಥರಿಗೂ ಮಗನ ಪ್ರೇಯಸಿ ತಮ್ಮ ಮನೆಯಲ್ಲಿರೋದು ಗೊತ್ತೇ ಇರಲಿಲ್ಲ. ನೆರೆಹೊರೆಯವರಿಗೂ ಒಂದು ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಅಷ್ಟು ಗಪ್ ಚುಪ್ ಆಗಿ ಅವರು ಕೋಳಿ ಗೂಡಿನಂತಹ ಸಣ್ಣ ರೂಮಿನಲ್ಲಿ ಬದುಕಿದ್ದರೆಂದರೆ, ಅವರಿಬ್ಬರ ಮಧ್ಯೆ ಇರುವ ಪ್ರೀತಿ ನಂಬಿಕೆ ಮತ್ತು ಅಂಡರ್ಸ್ಟ್ಯಾಂಡಿಂಗ್ ಯಾವ ಮಟ್ಟಕ್ಕೆ ಇದ್ದಿರಬಹುದು, ಯೋಚಿಸಿ. ಅದಷ್ಟೇ ನಾವು ಈ ನಿಗೂಢ ಪ್ರೇಮಕಥೆಯಿಂದ ಪಡೆದುಕೊಳ್ಳುವ ಪಾಠ !!

Leave A Reply

Your email address will not be published.