Ad Widget

ಕಡಬ ಸಮುದಾಯ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಗೊಂದಲ ನಿವಾರಣೆಗೂ ಪ್ರಯತ್ನಿಸಿದರೂ ಅಸಹಕಾರ ನೀಡುವ ಸಿಬ್ಬಂದಿ | ವಾರ್ ರೂಮ್ ಕಾರ್ಯಕರ್ತರು, ಸಿಬ್ಬಂದಿ ನಡುವೆ ಮಾತಿನ ಚಕಮಕಿ

ಕಡಬ: ಇಲ್ಲಿನ ಸಮುದಾಯ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ನೀಡುವಲ್ಲಿ ಈ ಹಿಂದೆ ಗೊಂದಲ ನಡೆದಿದ್ದು ಬಳಿಕ ಸಚಿವ ಎಸ್. ಅಂಗಾರ ಅವರ ಸೂಚನೆ ಮೇರೆಗೆ ವಾರ್ ರೂಮ್ ಕಾರ್ಯಕರ್ತರ ಮಾರ್ಗದರ್ಶನದಲ್ಲಿ ಆಸ್ಪತ್ರೆಗೆ ಆಗಮಿಸಿದ ಎಲ್ಲ ಸಾರ್ವಜನಿಕರಿಗೆ ವ್ಯವಸ್ಥಿತವಾಗಿ ವ್ಯಾಕ್ಸಿನ್ ನೀಡಲು ಸಹಕರಿಸಲಾಗಿತ್ತು.ಅಂತೆಯೇ ಇಂದು ವ್ಯಾಕ್ಸಿನ್ ನೀಡುವ ಮಾಹಿತಿ ಹಿನ್ನಲೆಯಲ್ಲಿ ಸಚಿವರ ವಾರ್ ರೂಮ್ ಕಾರ್ಯಕರ್ತರು ಚಯರ್ ಗಳನ್ನು ಹಾಕಿ ಸಾರ್ವಜನಿಕರನ್ನು ವ್ಯವಸ್ಥಿತವಾಗಿ ಕುಳ್ಳಿರಿಸಿದರೂ ಅಲ್ಲಿನ ಡಿ ದರ್ಜೆಯ ಸಿಬ್ಬಂದಿಯೋರ್ವರ ಅಸಹಕಾರದಿಂದ ಗೊಂದಲ ಉಂಟಾಗಿದ್ದು ಈ ಹಿನ್ನಲೆಯಲ್ಲಿ ವಾರ್ ರೂಮ್ ಕಾರ್ಯಕರ್ತರು ಹಾಗೂ ಸಿಬ್ಬಂದಿಯ ನಡುವೆ ಮಾತಿನ ಚಕಮಕಿ ನಡೆದ ಘಟನೆ ಜೂ.11ರಂದು ನಡೆದಿದೆ.


ಇಂದು ಬೆಳಿಗ್ಗೆ ವ್ಯಾಕ್ಸಿನ್ ಗಾಗಿ ಸಾರ್ವಜನಿಕರು ಬಂದಿದ್ದು ಅವರನ್ನು ಸಚಿವರ ವಾರ್ರೂಮ್ ಕಾರ್ಯಕರ್ತರು ಚಯರ್ ಗಳನ್ನು ಹಾಕಿ ವ್ಯವಸ್ಥಿತವಾಗಿ ಕುಳ್ಳಿರಿಸಿದ್ದರು.

Ad Widget Ad Widget Ad Widget

ಕಳೆದ ಬಾರಿ ಯಾವುದೇ ಗೊಂದಲ ಏರ್ಪಡದೆ ಯಾವುದೇ ಭ್ರಷ್ಟಚಾರ ನಡೆಯದೆ ಲಸಿಕೆ ನೀಡಬೇಕೆಂದು ಆಸ್ಪತ್ರೆಯವರಿಗೆ ಕೃಷ್ಣ ಶೆಟ್ಟಿ ಎಚ್ಚರಿಕೆ ಕೊಟ್ಟಿದ್ದು ಬಳಿಕ ಸಾರ್ವಜನಿಕರು ಚಯರ್ ನಲ್ಲಿ ಕುಳಿತಲ್ಲಿಗೆ ಹೋಗಿ ಅವರ ನೋಂದಣಿ ಮಾಡಬೇಕೆಂದು ಸೂಚಿಸಿ, ಅದರಂತೆ ಕುಳಿತಲ್ಲಿಗೆ ಸಿಬ್ಬಂದಿ ತೆರಳಿ ವ್ಯಾಕ್ಸಿನ್ ನೊಂದಾಣಿ ಮಾಡಿಕೊಂಡು ಅತ್ಯಲ್ಪ ಸಮಯದಲ್ಲಿ ಯಾವುದೇ ಗೊಂದಲ ಇಲ್ಲದೆ 125 ಮಂದಿಗೆ ವ್ಯಾಕ್ಸಿನ್ ನೀಡಲಾಗಿತ್ತು. ಆದರೆ ಇಂದು ವ್ಯಾಕ್ಸಿನ್ ಪಡೆಯುವ ಸಲುವಾಗಿ ಸಾರ್ವಜನಿಕರನ್ನು ಕುಳ್ಳಿರಿಸಿದರೂ ನೊಂದಾಣಿ ಮಾಡಲು ತಾನು ಕುಳಿತಲ್ಲಿಯೇ ಬರಬೇಕೆಂದು ಸಿಬ್ಬಂದಿ ಹೇಳಿದಾಗ ಕ್ಯೂ ಬಿಟ್ಟು ಎಲ್ಲರೂ ಬಂದಾಗ ಮತ್ತೆ ಗೊಂದಲ ಏರ್ಪಟ್ಟಿದೆ. ಈ ಸಂದರ್ಭದಲ್ಲಿ ವಾರ್ ರೂಮ್ ಕಾರ್ಯಕರ್ತರು ಮತ್ತು ಸಿಬ್ಬಂದಿಯ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು-ಕೃಷ್ಣ ಶೆಟ್ಟಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣ ಶೆಟ್ಟಿ ಅವರು, ಕಡಬ ಸಮುದಾಯ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ನೀಡುವಲ್ಲಿ ಗೊಂದಲಗಳು ಉಂಟಾದ ಹಿನ್ನಲೆಯಲ್ಲಿ ಸಚಿವರ ಸೂಚನೆ ಮೇರೆಗೆ ಆಸ್ಪತ್ರೆಗೆ ಆಗಮಿಸಿದ ಎಲ್ಲರಿಗೂ ಯಾವುದೇ ತಾರತಮ್ಯ ಮಾಡದೆ ವ್ಯಾಕ್ಸಿನ್ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೆವೆ, ಆದರೆ ಅಚ್ಚುಕಟ್ಟಾಗಿ ವ್ಯವಸ್ಥೆಗಳು ನಡೆಯಬೇಕಾದರೆ ಅಲ್ಲಿನ ಸಿಬ್ಬಂದಿಗಳ ಸಹಕಾರ ಬೇಕಾಗುತ್ತದೆ, ಅವರಿಗೆ ಆ ರೀತಿಯ ಭಾವನೆ ಬರದಿದ್ದರೆ ನಾವೇನು ಮಾಡಲು ಸಾಧ್ಯವಿಲ್ಲ, ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿಕೆ ನೀಡಿದ್ದಾರೆ

Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: