ಬ್ಯಾಂಕ್ ಆಫ್ ಬರೋಡಾ ಸಾಲದ ಬಡ್ಡಿಯಲ್ಲಿ ಕೊಂಚ ಇಳಿಕೆ | ಜೂ.1ರಿಂದ ಅನ್ವಯವಾಗುವಂತೆ ಸಾಲದ ಬಡ್ಡಿ ಇಳಿಕೆ

ಆರ್‌ಬಿಐ ತನ್ನ ಸಾಲ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲದೆ ಹೋದರೂ ಅನೇಕ ಸಾರ್ವಜನಿಕ ವಲಯದ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಅಗ್ಗದ ಸಾಲವನ್ನು ಕೊಡುತ್ತಿವೆ. ವಿಜಯಾ ಬ್ಯಾಂಕ್ ಮತ್ತು ದೇನ ಬ್ಯಾಂಕ್ ಗಳನ್ನು ತನ್ನೊಳಗೆ ತುಂಬಿಕೊಂಡು ಕುಳಿತಿರುವ ಬ್ಯಾಂಕ್ ಆಫ್ ಬರೋಡಾವು, ತನ್ನ ಸಾಲದ ದರವನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.

ಅದು ತನ್ನ ಎಂಸಿಎಲ್‌ಆರ್ ಶೇಕಡಾ 0.05 ರಷ್ಟು ಕಡಿತಗೊಂಡಿದೆ.

ಬ್ಯಾಂಕ್ ಆಫ್ ಬರೋಡಾ ಜೂನ್ 1 ರಿಂದ ಅನ್ವಯವಾಗುವಂತೆ ಸಾಲದ ದರವನ್ನು ಕಡಿತಗೊಳಿಸಿದೆ. ಈ ಕಡಿತದ ನಂತರ ಬ್ಯಾಂಕ್ ಆಫ್ ಬರೋಡಾದ 1 ವರ್ಷದ ಎಂಸಿಎಲ್‌ಆರ್ ಶೇಕಡಾ 7.35 ರಷ್ಟಾಗಿದೆ. ಪಿಎನ್ಸಿ 6 ತಿಂಗಳು ಹಾಗೂ ಮೂರು ತಿಂಗಳ ಎಂಸಿಎಲ್ ಆರ್ ದರವನ್ನು ಶೇಕಡಾ 0.10ರಷ್ಟು ಇಳಿಸಲಾಗಿದೆ. ಇದರ ನಂತರ ಬಡ್ಡಿ ದರ ಶೇಕಡಾ 7 ರಿಂದ ಶೇಕಡಾ 6.80 ರಷ್ಟು ಇಳಿಕೆಯಾಗಿದೆ.

ಕೆನರಾ ಬ್ಯಾಂಕ್, ಎಂಸಿಎಲ್‌ಆರ್ ಮತ್ತು ರೆಪೊ ಲಿಂಕ್
ಲೆಂಡಿಂಗ್ ರೇಟ್ ಗಳ ಮಾರ್ಜಿನಲ್ ವೆಚ್ಚದಲ್ಲಿ
ಬದಲಾವಣೆ ಮಾಡಿದೆ. ಹೊಸ ದರಗಳು ಮೇ 21ರಿಂದ
ಜಾರಿಗೆ ಬಂದಿವೆ. ಕೆನರಾ ಬ್ಯಾಂಕ್ ಗ್ರಾಹಕರಿಗೆ ಕಡಿಮೆ
ದರದಲ್ಲಿ ಸಾಲ ನೀಡುತ್ತಿದೆ. ಕೆನರಾ ಎಂಸಿಎಲ್‌ಆರ್ ಆಧಾರಿತ ಸಾಲವನ್ನು ಶೇಕಡಾ 7.35 ಕ್ಕೆ ನೀಡುತ್ತಿದೆ. ಒಟ್ಟಾರೆ ಗೃಹ ಸಾಲ ಸ್ವಲ್ಪ ಅಗ್ಗವಾಗಿದೆ.

Leave A Reply

Your email address will not be published.