ದ.ಕ.ಸಹಿತ 8 ಜಿಲ್ಲೆಗಳಲ್ಲಿ ಜೂ.21ರವರೆಗೆ ಲಾಕ್‌ಡೌನ್ ವಿಸ್ತರಣೆ

ದಕ್ಷಿಣಕನ್ನಡ ಮೈಸೂರು ಮಂಡ್ಯ ತುಮಕೂರು ಬೆಳಗಾವಿ ಚಿಕ್ಕಮಗಳೂರು ಹಾಸನ ಶಿವಮೊಗ್ಗ ಈ ಎಂಟು ಜಿಲ್ಲೆಗಳ ಡಿಸಿಗಳ ಜೊತೆ ಇಂದು ಮಧ್ಯಾಹ್ನ ಮುಖ್ಯಮಂತ್ರಿ ಯಡಿಯೂರಪ್ಪನವರು ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದರು.

ಅದರಂತೆ ದಕ್ಷಿಣ ಕನ್ನಡ ಸೇರಿದಂತೆ ಈ ಮೇಲಿನ ಎಂಟು ಜಿಲ್ಲೆಗಳಲ್ಲಿ ಲಾಕ್ ಡೌನ್ ಅನ್ನು ವಿಸ್ತರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಜಿಲ್ಲೆಗಳಲ್ಲಿ ಲಾಕ್ಡೌನ್ ಜೂನ್ 21 ರವರೆಗೆ ಮುಂದುವರಿಯಲಿದೆ. ಈ ಸಂಬಂಧ ಸಂಜೆಯ ಹೊತ್ತಿಗೆ ಮಾರ್ಗಸೂಚಿ ಪ್ರಕಟವಾಗುವ ನಿರೀಕ್ಷೆ ಇದೆ. ಈ ಎಂಟು ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ 10 ಕ್ಕೂ ಅಧಿಕವಾಗಿ ಇರುವುದು ಒಂದು ಕಾರಣವಾದರೆ, ಸೋಂಕಿತರ ಸಂಖ್ಯೆ ಅಂದುಕೊಂಡ ವೇಗದಲ್ಲಿ ಈ ಜಿಲ್ಲೆಗಳಲ್ಲಿ ಇಳಿಯುತ್ತಿಲ್ಲ. ಆದುದರಿಂದ ಈ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಸಿದರೆ ಮತ್ತಷ್ಟು ಪಾಸಿಟಿವ್ ಕೇಸುಗಳು ಹೆಚ್ಚಳವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಆದುದರಿಂದ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿಯವರನ್ನು ಲಾಕ್ ಡೌನ್ ಅನ್ನು ವಿಸ್ತರಿಸಬೇಕೆಂದು ಒತ್ತಾಯ ಮಾಡಿದ್ದರು.

ಉಳಿದ ಜಿಲ್ಲೆಗಳಲ್ಲಿ ಜೂನ್14ರ ನಂತರ ಸೆಮಿ ಲಾಕ್ಡೌನ್ ಜಾರಿಗೆ ಬರಲಿದೆ.

ಡಿಸಿಗಳ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂವಾದ ನಡೆಸಿದ ನಂತರ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಲಾಕ್ಡೌನ್ ಅನ್ನೋ ವಿಸ್ತರಿಸಲು ಕೇಳಿಕೊಂಡಿದ್ದರು. ಅದರಂತೆ ಎಂಟು ಜಿಲ್ಲೆಗಳಲ್ಲಿ ಲಾಕ್ ಡೌನ್ ನ್ನು ಮುಂದುವರಿಸಲು ನಿರ್ಧರಿಸಲಾಗಿದೆ.

ಉಳಿದ 22 ಜಿಲ್ಲೆಗಳಲ್ಲಿ ಅನ್ ಲಾಕ್ ಮಾಡುವ ಉದ್ದೇಶ ಇಟ್ಟುಕೊಂಡಿರುವ ಸರ್ಕಾರವು, ಒಟ್ಟು ಐದು ಹಂತಗಳಲ್ಲಿ ಅನ್ ಲಾಕ್ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ. ಬೆಂಗಳೂರಿಗೆ ಪ್ರತ್ಯೇಕ ಅನ್ ಲಾಕ್ ಮಾರ್ಗಸೂಚಿ ಬರಲಿದೆ.

ಅನ್ಲಾಕ್ ಮಾಡಲು ಹೊರಟಿರುವ ಜಿಲ್ಲೆಗಳಲ್ಲಿ ಫಿಫ್ಟಿ ಪರ್ಸೆಂಟ್ ಮಾದರಿಯಲ್ಲಿ ಹಂತ-ಹಂತವಾಗಿ ಜಾರಿಗೆ ಬರಲಿದೆ ಎನ್ನಲಾಗಿದೆ. ದಿನ ಬಿಟ್ಟು ದಿನ ಅಂಗಡಿ ತೆರೆಯಲು ಅವಕಾಶ ಅಥವಾ ಸಮ ಬೆಸ ದಿನಗಳಲ್ಲಿ ಕಾರ್ಯಾಚರಿಸಲು ಅವಕಾಶ ಮುಂತಾದ ಸಾಧ್ಯತೆಗಳು ಸರಕಾರದ ಮುಂದಿದ್ದು ಇವತ್ತು ಸಂಜೆ ಮಂತ್ರಿಗಳ 8ಸಭೆಯ ನಂತರ ಒಂದು ಸ್ಪಷ್ಟ ಚಿತ್ರಣ ದೊರೆಯಲಿದೆ.

ಕೆಲ ವಲಯಗಳಿಗೆ ರಿಯಾಯಿತಿ ಕೊಡಲು ನಾಳೆ ಸಂಸದರು, ಶಾಸಕರ ಸಭೆ ಮಾಡಲಿದ್ದೇವೆ. ಕೂಲಿ ಮಾಡುವವರು ಮತ್ತು ಕೈಗಾರಿಕಾ ಕಾರ್ಮಿಕರಿಗೆ‌ ನೆರವಾಗುವ ನಿಟ್ಟಿನಲ್ಲಿ ಕೆಲವು ನಿಯಮಗಳನ್ನು ಸಡಿಲಿಕೆ ಮಾಡಲಾಗುವುದು. ಆ ಬಗ್ಗೆ ‌ನಾಳೆ ಸಭೆ ನಡೆಸಿ ಚರ್ಚೆ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

Leave A Reply

Your email address will not be published.