ಉನ್ನತ ಹುದ್ದೆಯಲ್ಲಿದ್ದರೂ ಬೇಸಾಯದಲ್ಲಿ ಸಕ್ರಿಯ | ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ

ತಾನು ಯಾವುದೇ ಸ್ಥಾನವನ್ನು ಏರಿದರೂ ತಾನು ಬೆಳೆದುಬಂದ ಹಾದಿಯನ್ನು ಮರೆಯಬಾರದು ಎಂಬ ಮಾತಿಗೆ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್​ ಜನರಲ್​ ಕೆ.ಎಂ. ನಟರಾಜ್​ ಅವರು ಉದಾಹರಣೆಯಾಗಿ ಕಾಣುತ್ತಾರೆ.

ಕಾರಣ ಅವರು ತಾನು ಈ ಹಿಂದೆ ಬೆಳೆದು ಬಂದ ಕೃಷಿ ಪರಂಪರೆಯನ್ನು ಈಗಲೂ ನಡೆಸುತ್ತಿರುವುದು.

ಈಗ ಕೋರ್ಟಿಗೆ ಬೇಸಿಗೆ ರಜೆ ಇರುವುದರಿಂದ ನಟರಾಜ್​ ಅವರು ತನ್ನ ಊರಾದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲದಲ್ಲಿ ವೃತ್ತಿಯ ವಿಶ್ರಾಂತಿಯಲ್ಲಿದ್ದಾರೆ.

Ad Widget


Ad Widget

ಅವರು ವೃತ್ತಿಯಲ್ಲಿ ವಿಶ್ರಾಂತಿ ಪಡೆದರೆ ಪ್ರವೃತಿಯಲ್ಲಿ ವಿಶ್ರಾಂತಿ ಪಡೆದಿಲ್ಲ‌.

ತನ್ನ ಬಾಲ್ಯದ ದಿನಗಳಲ್ಲಿ ಕಣ್ತುಂಬಿಸುತ್ತಿದ್ದ ಭತ್ತದ ಬೇಸಾಯವನ್ನು ತನ್ನ ರಜಾ ಅವಧಿಯಲ್ಲಿ ನಡೆಸುತ್ತಿದ್ದಾರೆ.

ತನ್ನ ರಜೆಯ ಅವಧಿಯಲ್ಲಿ ಕೃಷಿಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಕೆ.ಎಂ. ನಟರಾಜ್ ಅವರು ಟಿಲ್ಲರ್​ ಹಿಡಿದು ಗದ್ದೆಯನ್ನು ಉಳುಮೆ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಈ ಮೂಲಕ ತಾನೇಷ್ಟೆ ಎತ್ತರಕ್ಕೆ ಎರಿದ್ದರೂ ತನ್ನ ಮೂಲ ಕೃಷಿ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ.

1 thought on “ಉನ್ನತ ಹುದ್ದೆಯಲ್ಲಿದ್ದರೂ ಬೇಸಾಯದಲ್ಲಿ ಸಕ್ರಿಯ | ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ”

Leave a Reply

Ad Widget
error: Content is protected !!
Scroll to Top
%d bloggers like this: