ಯಕ್ಷಗಾನ ಮೇಳ ನಡೆಸುವ ದೇವಸ್ಥಾನಗಳಿಂದಲೇ ಕಲಾವಿದರಿಗೆ ವೇತನ ನೀಡಲು ಸೂಚನೆ – ಸಚಿವ ಕೋಟ

ಯಾವ ದೇವಸ್ಥಾನದ ಮೂಲಕ ಯಕ್ಷಗಾನ ಮೇಳ ನಡೆಸಲ್ಪಡುತ್ತದೆಯೋ ಅದೇ ದೇವಸ್ಥಾನದ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಯಕ್ಷಗಾನ ಕಲಾವಿದರಿಗೆ ಪೂರ್ಣಾವಧಿಯ ಸಂಭಾವನೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಧಾರ್ಮಿಕ ದತ್ತಿ ಇಲಾಖೆ ಹಾಗೂ ದ.ಕ.ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮ ಪಂಚಾಯತ್ ನಲ್ಲಿ ನಡೆದ ವಿಶೇಷ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

ಕೆಲವು ದೇವಸ್ಥಾನಗಳಲ್ಲಿ ಕಲಾವಿದರ ಬಳಿ ಅಗ್ರಿಮೆಂಟ್ ಮಾಡಿಕೊಳ್ಳುವಾಗಲೇ ಮಧ್ಯದಲ್ಲೇ ಆಟ ನಿಂತರೆ, ಸಂಭಾವನೆ ಕಡಿತಗೊಳಿಸಲು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ ಎಂಬ ಮಾಹಿತಿ ದೊರೆತಿದ್ದು, ಅಂತಹ ಅಗ್ರಿಮೆಂಟ್ ಏನೆ ಇದ್ದರೂ, ಯಾವ ದೇವಸ್ಥಾನದ ಮೂಲಕ ಯಕ್ಷಗಾನ ಮೇಳ ನಡೆಯುತ್ತದೆಯೋ ಆ ದೇವಸ್ಥಾನದ ಸಂಪನ್ಮೂಲಗಳಲ್ಲಿ ಕಲಾವಿದರಿಗೆ ಪೂರ್ಣ ವೇತನ ಕೊಡುವಂತೆ ಎಂದು ಸರಕಾರ ಆದೇಶಿಸಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Leave A Reply

Your email address will not be published.