ಪುತ್ತೂರು: ಮುಳಿಯ ಪ್ರತಿಷ್ಠಾನದ ವತಿಯಿಂದ ಸಾರ್ವಜನಿಕರಿಗೆ ಪೇಪರ್ ಆರ್ಟ್ಸ್ & others ವಿನೂತನ ಸ್ಪರ್ಧೆ

ಪುತ್ತೂರು: ಮನೆಯಲ್ಲೇ ಕುಳಿತು ಮಕ್ಕಳಿಗೆ, ಪೋಷಕರಿಗೆ ಲಾಕ್‌ಡೌನ್‌ನಿಂದಾಗಿ ಸಮಯ ಕಳೆಯುವುದು ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಅದಕ್ಕೊಂದು ಉಪಾಯ ಮುಳಿಯ ಪ್ರತಿಷ್ಠಾನ ವತಿಯಿಂದ ತಲೆಗೆ ಚಿಗುರು ಮೂಡಿಸುವ ಸ್ಪರ್ಧೆಯನ್ನು ಸಾರ್ವಜನಿಕರಿಗೆ ಏರ್ಪಡಿಸಿದೆ. ಪೇಪರ್ ಜ್ಯುವೆಲ್ಲರಿ ಆರ್ಟ್ & Others ಎಂಬ ತಲೆಗೆ ಒಂದಷ್ಟು ಚಿಗುರುವ ಕೆಲಸ ಎಂಬ ವಿನೂತನ ರೀತಿಯ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಒಟ್ಟು ಎರಡು ವಿಭಾಗಗಳಾಗಿ ಸ್ಪರ್ಧೆ ನಡೆಯಲಿದೆ 21 ವರ್ಷ ಕೆಳಗಿನವರಿಗೆ ಮತ್ತು 21 ವರ್ಷ ಮೇಲ್ಪಟ್ಟವರಿಗೆ. ಸ್ಪರ್ಧಿಗಳು ಹೂವು, ಹಣ್ಣು, ಎಲೆ, ಬೀಜ, ಕ್ಲೇ, ಸಣ್ಣ ಕಲ್ಲುಗಳು, ಹಳೆ ಪ್ಲಾಸ್ಟಿಕ್ ಸಾಮಾಗ್ರಿಗಳು ಹಾಗೂ ಇನ್ನಿತರ ಹಳೆ ಬಿಡಿಭಾಗಗಳಿಂದ ಆಭರಣವನ್ನು ತಯಾರಿಸಬಹುದು, ವಾಟರ್ ಕಲರ್ ಇತ್ಯಾದಿಗಳನ್ನು ಬಳಸಬಹುದು.

ಅತ್ಯುತ್ತಮ 3 ರಚನೆಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳು , ಉತ್ತಮ 10 ರಚನೆಗಳಿಗೆ ಪ್ರೋತ್ಸಾಹಕರ ಬಹುಮಾನಗಳು ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಪ್ರಮಾಣಪತ್ರ ನೀಡಲಾಗುವುದು.
ಆಯ್ಕೆಯಾದ ಮಾದರಿಗಳನ್ನು ಮುಳಿಯ ಪ್ರಚಾರದಲ್ಲಿ ಬಳಸಿಕೊಳ್ಳಲಾಗುವುದು.

ನೊಂದಾವಣೆಗಾಗಿ & ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 9379202916,9379922916.

ಸ್ಪರ್ಧಿಗಳು ತಮ್ಮ ರಚನೆಯನ್ನು ದಿನಾಂಕ ಜೂನ್ 15ರ ಒಳಗೆ, 11 ಗಂಟೆಯ ಮೊದಲು ವಾಟ್ಸಪ್ ಮೂಲಕ ಕಳುಹಿಸಬೇಕು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave A Reply

Your email address will not be published.