ಅಕ್ರಮ-ಸಕ್ರಮ ಉಳಿದಿರುವ ಅರ್ಜಿಗಳನ್ನು ಜು.31ರೊಳಗೆ ಅಪ್‌ಲೋಡ್ | 94ಸಿ,94ಸಿಸಿ ಅರ್ಜಿ ಸಲ್ಲಿಕೆಗೆ ಮಾರ್ಚ್ 2022ರವರೆಗೆ ಅವಕಾಶ

ಬೆಂಗಳೂರು : ರಾಜ್ಯದಲ್ಲಿ ಬಗರ್ ಹುಕುಂ ಸಾಗುವಳಿ ಭೂಮಿಯ ಅಕ್ರಮ ಸಕ್ರಮ‌ ವಿಚಾರಕ್ಕೆ ಸಂಬಂಧಿಸಿದಂತೆ ಅಪ್‌ಲೋಡ್ ಆಗದೇ ಉಳಿದಿರುವ 4.83 ಲಕ್ಷ ಅರ್ಜಿಗಳನ್ನು ಜುಲೈ 31 ರೊಳಗಾಗಿ ತಂತ್ರಾಶಕ್ಕೆ ಅಪ್‌ಲೋಡ್ ಮಾಡಲಾಗುತ್ತದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ಅಲ್ಲದೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸರಕಾರಿ ಜಮೀನಿನಲ್ಲಿ 2015 ರ ಜನವರಿ 1 ಕ್ಕೂ ಮೊದಲೇ ಅನಧಿಕೃತ ನಿರ್ಮಾಣದ ವಾಸದ ಮನೆಗಳ ಸಕ್ರಮಕ್ಕೆ ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ‌ವನ್ನು ಮಾರ್ಚ್ 31, 2022 ವರೆಗೆ ವಿಸ್ತರಣೆ ಮಾಡಲಾಗಿದೆ.

ಆ ಬಳಿಕ ಅರ್ಜಿಗಳ ಪರಿಶೀಲನೆ ನಡೆಸಿ 2023 ರ ಮಾರ್ಚ್ 31 ರೊಳಗಾಗಿ ಹಕ್ಕು ಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ.

Leave A Reply

Your email address will not be published.