ಸುಳ್ಯ ಸಚಿವ ಅಂಗಾರ ನೇತೃತ್ವದಲ್ಲಿ ವಾರ್ ರೂಂ, ಸೇವಾ ಭಾರತಿ ಪ್ರಮುಖರ ಸಭೆ

ಸುಳ್ಯ : ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಸಚಿವ ಎಸ್.ಅಂಗಾರ ರವರ ನೇತೃತ್ವದಲ್ಲಿ ಸಚಿವರ ವಾರ್ ರೂಮ್ ಹಾಗೂ ಸೇವಾಭಾರತಿ ಕಾರ್ಯಕರ್ತರ ಸಭೆ ಸೇರಿ, ಕೋವಿಡ್ 19 ತುರ್ತು ನಿರ್ವಹಣೆ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಸಭೆ ಜೂ.6ರಂದು ನಡೆಯಿತು.

ಬೆಂಗಳೂರಿನ ವಾಸವಿ ಹಾಸ್ಪಿಟಲ್ ನ ಹೋಮಿಯೋಪತಿ ಔಷಧಿಯನ್ನು ಎಲ್ಲಾ ಮನೆಗಳಿಗೂ ತಲುಪಿಸಿ ಸುಳ್ಯವನ್ನು ಕೊರೋನಾ ಮುಕ್ತವಾಗಿಸ ಬೇಕೆಂದು ಸಚಿವರು ಕರೆ ನೀಡಿದರು.
ಬೆಂಗಳೂರಿನ ವಾಸವಿ ಹಾಸ್ಪಿಟಲ್ ನ ಐಸಿಯು ವಿಶೇಷ ತಜ್ಞರಾದ ಡಾಕ್ಟರ್ ರವೀಂದ್ರ ರೆಡ್ಡಿ ಮತ್ತು ಡಾಕ್ಟರ್ ವೇಣುಗೋಪಾಲ್ ರವರು ಕೋವಿಡ್ ಪಾಸಿಟಿವ್ ಬರದಂತೆ ತಡೆಯುವ ಹೋಮಿಯೋಪತಿ ಔಷಧಿಯ ಬಗ್ಗೆ ಮಾಹಿತಿ ನೀಡಿ, ಬಹಳಷ್ಟು ಪ್ರಮಾಣದ ಔಷಧಿಯನ್ನು ಒದಗಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖರಾದ ಶ್ರೀ ನ.ಸೀತಾರಾಮ ರವರು ಮಾತನಾಡಿ ನಮ್ಮ ದೇಶದ ಕೌಟುಂಬಿಕ ಪದ್ಧತಿಯಿಂದಾಗಿ ಯಾವುದೇ ಸಂಕಷ್ಟ ಬಂದರೂ, ನಾವೆಲ್ಲರೂ ಪರಸ್ಪರ ಧೈರ್ಯಶಾಲಿ ಗಳಾಗಿ ಬದುಕುತ್ತಿದ್ದೇವೆ.

ಆದ್ದರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವು ಕರೆ ನೀಡಿರುವಂತೆ, ನಮ್ಮ ಭಾಗದ ಹೆಚ್ಚಿನ ಮನೆಗಳಲ್ಲಿ ದಿನಾಂಕ 8-6-2021 ನೇ ಮಂಗಳವಾರದಂದು, ಗೃಹಮಿಲನ ಎನ್ನುವ ವಿಶೇಷ ಕಾರ್ಯಕ್ರಮವನ್ನು ನಡೆಸಲು ಮಾಹಿತಿ ನೀಡಿದರು.
ಭಾರತೀಯ ಜನತಾ ಪಾರ್ಟಿಯ ಮಂಡಲ ಅಧ್ಯಕ್ಷರಾದ ಶ್ರೀ ಹರೀಶ್ ಕಂಜಿಪಿಲಿ ಯವರು ಕಾರ್ಯಕ್ರಮದ ಪ್ರಾರಂಭದಲ್ಲಿ ಸ್ವಾಗತಿಸಿದರು. ಸುಳ್ಯ ನಗರ ಪಂಚಾಯತ್ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್ ಕಂದಡ್ಕ ಕಾರ್ಯಕ್ರಮದ ಕೊನೆಗೆ ವಂದನಾರ್ಪಣೆ ಗೈದರು. ಮಂಡಲ ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ ಕಾರ್ಯಕ್ರಮ ನಿರ್ವಹಿಸಿದರು.

Leave A Reply

Your email address will not be published.