Day: June 6, 2021

ಧಾರ್ಮಿಕ ಸೇವಾ ಸಮಿತಿ ಪಂಜಿಮೊಗರು ವತಿಯಿಂದ ದಿನಸಿ ಸಾಮಗ್ರಿಗಳ ವಿತರಣೆ…ಕೆಲಸವಿಲ್ಲದೆ ತೊಂದರೆಗೊಳಗಾದ ಕುಟುಂಬಗಳ ಕಷ್ಟಕ್ಕೆ ಮರುಗಿದ ಸಮಿತಿಯ ಪದಾಧಿಕಾರಿಗಳು

ಸದಾ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಧಾರ್ಮಿಕ ಸೇವಾ ಸಮಿತಿ ಪಂಜಿ ಮೊಗರು ಇದರ ವತಿಯಿಂದ ಕೂಳೂರು ಬೀಡಿನ ಪರಿಸರದ ಮನೆಗಳಿಗೆ ದಿನಸಿ ಸಾಮಗ್ರಿ ವಿತರಿಸಲಾಯಿತು.ಲಾಕ್ ಡೌನ್ ಸಮಯದಲ್ಲಿ ಕೆಲಸವಿಲ್ಲದೆ ತೊಂದರೆಗೆ ಒಳಗಾದ ಸುಮಾರು 40 ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿಯವರ ನೇತೃತ್ವದಲ್ಲಿ ವಿತರಿಸಿ ಮಾನವೀಯತೆಗೆ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ಸಮಿತಿಯ ಕೋಶಾಧಿಕಾರಿಗಳಾದ ಭಾಸ್ಕರ್ ಕೋಟ್ಯಾನ್, ವಿವೇಕಾನಂದ ಸುವರ್ಣ, ಸದಸ್ಯರುಗಳಾದ ಲೋಕೇಶ ಕೋಟ್ಯಾನ್, ಚಂದ್ರಹಾಸ ಸುವರ್ಣ, ಗಿರಿಧರ ಸುವರ್ಣ, ಶಶಿಧರ್ ಶೆಟ್ಟಿ, ಮಧುರಾಜ್ ಶೆಟ್ಟಿ, …

ಧಾರ್ಮಿಕ ಸೇವಾ ಸಮಿತಿ ಪಂಜಿಮೊಗರು ವತಿಯಿಂದ ದಿನಸಿ ಸಾಮಗ್ರಿಗಳ ವಿತರಣೆ…ಕೆಲಸವಿಲ್ಲದೆ ತೊಂದರೆಗೊಳಗಾದ ಕುಟುಂಬಗಳ ಕಷ್ಟಕ್ಕೆ ಮರುಗಿದ ಸಮಿತಿಯ ಪದಾಧಿಕಾರಿಗಳು Read More »

ಬೆಳ್ತಂಗಡಿಯ ಕಳೆಂಜ | ನೆರಿಯ ನದಿಯಲ್ಲಿ ಈಜಲು ಹೋದ ಕೊಯ್ಯೂರಿನ ಯುವಕ ನೀರಿನಲ್ಲಿ ಮುಳುಗಿ ಸಾವು

ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಮಾನಿಂಗೆರಿ ಕೂಟೇಲು ಎಂಬಲ್ಲಿ ನದಿಯಲ್ಲಿ ಈಜಲು ಹೋದ ಹುಡುಗ ನೀರು ಪಾಲಾಗಿದ್ದಾನೆ. ಶಿಬಿನ್ ಎಂಬ 19 ವರ್ಷದ ಹುಡುಗ ತನ್ನ ನೆಂಟರ ಮನೆಗೆ ಬಂದಿದ್ದ. ಆತನ ಸ್ವಂತ ಊರು ಕೊಯ್ಯೂರು. ಹಾಗೆ ಬಂದವನು ನೆಂಟರ ನಾಲ್ಕು ಜನ ಮನೆಯವರ ಜೊತೆ ಅಲ್ಲಿನ ನೆರಿಯ ನದಿಗೆ ಈಜು ಹೊಡೆಯಲು ಹೋಗಿದ್ದರು. ಆ ಸಂದರ್ಭ ಆತ ನೀರಿನ ಸೆಳೆತಕ್ಕೆ ಸಿಕ್ಕಿಕೊಂಡು ಬಿಟ್ಟಿದ್ದಾನೆ. ನೀರಿನ ಸೆಳೆತ ಆತನನ್ನು 50 ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿತ್ತು. ಜೊತೆಗಿದ್ದ …

ಬೆಳ್ತಂಗಡಿಯ ಕಳೆಂಜ | ನೆರಿಯ ನದಿಯಲ್ಲಿ ಈಜಲು ಹೋದ ಕೊಯ್ಯೂರಿನ ಯುವಕ ನೀರಿನಲ್ಲಿ ಮುಳುಗಿ ಸಾವು Read More »

ದ.ಕ.ಉಸ್ತುವಾರಿ ಸಚಿವ ಕೋಟ ಅವರಿಂದ ಕೇಂದ್ರ ಸಚಿವ ಡಿ.ವಿ.ಎಸ್ ಭೇಟಿ | ಕೋವಿಡ್ ಲಸಿಕೆ ಸರಬರಾಜು ಹೆಚ್ಚಳಕ್ಕೆ ಮನವಿ

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರಿಂದ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ ವಿ ಸದಾನಂದ ಗೌಡರನ್ನು ಭೇಟಿ. ಜಿಲ್ಲೆಯಲ್ಲಿ ಕೋವಿಡ್ – 19 ಲಸಿಕೆ ಕೊರತೆ ಕುರಿತು ಚರ್ಚೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೋವಿಡ್ – 19 ಲಸಿಕೆ ಕೊರತೆ ಹಿನ್ನಲೆಯಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ ವಿ ಸದಾನಂದ ಗೌಡರನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ …

ದ.ಕ.ಉಸ್ತುವಾರಿ ಸಚಿವ ಕೋಟ ಅವರಿಂದ ಕೇಂದ್ರ ಸಚಿವ ಡಿ.ವಿ.ಎಸ್ ಭೇಟಿ | ಕೋವಿಡ್ ಲಸಿಕೆ ಸರಬರಾಜು ಹೆಚ್ಚಳಕ್ಕೆ ಮನವಿ Read More »

ಬಿಜೆಪಿ ಶಾಸಕ ಹರೀಶ್ ಪೂಂಜಾರನ್ನೇ ಹಾಡಿ ಹೊಗಳಿ ಅಭಿನಂದಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ತಮ್ಮ | ಈ ನಡೆಗೆ ಮಾಜಿ ಶಾಸಕ ವಸಂತ ಬಂಗೇರ ಕೆಂಡಾಮಂಡಲ

ಬಿಜೆಪಿ ಶಾಸಕನನ್ನೇ ಹೊಗಳಿ ಅಭಿನಂದಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ತಮ್ಮ. ಹೌದು ಶಾಸಕ ಹರೀಶ್ ಪೂಂಜಾ ಅವರು ಶಾಸಕರಾಗಿ ಮೂರು ವರ್ಷ ಪೂರೈಸಿರುವ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಅವರ‌ ಸಹೋದರ ಕಾಂಗ್ರೆಸ್ ನಾಯಕ ಯೋಗೀಶ್ ಕುಮಾರ್ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿ ಅಭಿನಂದನೆ ಸಲ್ಲಿಸಿದ್ದರು. ಆದರೆ ಅವರ ಈ ನಡೆಯು ಕಾಂಗ್ರೆಸ್ ಮಾಜಿ ಶಾಸಕ ವಸಂತ ಬಂಗೇರ ಅವರನ್ನು ಕೆರಳಿಸಿ ಕೆಂಡವಾಗಿಸಿದೆ. ಹರೀಶ್ ಕುಮಾರ್ ಅವರ ಸೋದರ ಮಾತ್ರವಲ್ಲದೆ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪೀತಾಂಬರ ಹೆರಾಜೆ, ಹಿರಿಯ …

ಬಿಜೆಪಿ ಶಾಸಕ ಹರೀಶ್ ಪೂಂಜಾರನ್ನೇ ಹಾಡಿ ಹೊಗಳಿ ಅಭಿನಂದಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ತಮ್ಮ | ಈ ನಡೆಗೆ ಮಾಜಿ ಶಾಸಕ ವಸಂತ ಬಂಗೇರ ಕೆಂಡಾಮಂಡಲ Read More »

ಕಡಬ : ಪಕ್ಷದ ಸಭೆಯಲ್ಲ ,ಕೊರೋನಾ ವಿಚಾರದಲ್ಲಿ ಪ್ರಮುಖರ ಸಭೆ,ನಿಯಮ ಉಲ್ಲಂಘನೆ ಆಗಿಲ್ಲ -ಸಚಿವ ಎಸ್.ಅಂಗಾರ

ಕಡಬ: ಇಲ್ಲಿನ ಸರಸ್ವತಿ ವಿದ್ಯಾಲಯದಲ್ಲಿ ಸುಳ್ಯ ಶಾಸಕ ಹಾಗೂ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಕೋವಿಡ್ ಕುರಿತಾಗಿ ವಾರ್‌ರೂಂ ಹಾಗೂ ಸೇವಾ ಭಾರತಿ ಪ್ರಮುಖರ ಸಭೆ ನಡೆಯಿತು. ಸಭೆಯಲ್ಲಿ ಕೊವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂಬ ವರದಿಯ ಕುರಿತು ಸಚಿವ ಎಸ್.ಅಂಗಾರ ಅವರು ಅಲ್ಲಗಳೆದಿದ್ದು ಕೊರೋನಾ ವಿಚಾರವಾಗಿ ತುರ್ತು ಪ್ರಮುಖರ ಸಭೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಜೂ.6ರಂದು ಕಡಬದ ಸರಸ್ವತೀ ವಿದ್ಯಾಲಯದಲ್ಲಿ ಸಚಿವ ಎಸ್.ಅಂಗಾರ ನೇತೃತ್ವದಲ್ಲಿ ಸಭೆ ನಡೆದಿದ್ದು ಈ ಸಭೆಗೆ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಿ ನೂರಾರು …

ಕಡಬ : ಪಕ್ಷದ ಸಭೆಯಲ್ಲ ,ಕೊರೋನಾ ವಿಚಾರದಲ್ಲಿ ಪ್ರಮುಖರ ಸಭೆ,ನಿಯಮ ಉಲ್ಲಂಘನೆ ಆಗಿಲ್ಲ -ಸಚಿವ ಎಸ್.ಅಂಗಾರ Read More »

ಸುಳ್ಯ ಸಚಿವ ಅಂಗಾರ ನೇತೃತ್ವದಲ್ಲಿ ವಾರ್ ರೂಂ, ಸೇವಾ ಭಾರತಿ ಪ್ರಮುಖರ ಸಭೆ

ಸುಳ್ಯ : ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಸಚಿವ ಎಸ್.ಅಂಗಾರ ರವರ ನೇತೃತ್ವದಲ್ಲಿ ಸಚಿವರ ವಾರ್ ರೂಮ್ ಹಾಗೂ ಸೇವಾಭಾರತಿ ಕಾರ್ಯಕರ್ತರ ಸಭೆ ಸೇರಿ, ಕೋವಿಡ್ 19 ತುರ್ತು ನಿರ್ವಹಣೆ ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸುವ ಸಭೆ ಜೂ.6ರಂದು ನಡೆಯಿತು. ಬೆಂಗಳೂರಿನ ವಾಸವಿ ಹಾಸ್ಪಿಟಲ್ ನ ಹೋಮಿಯೋಪತಿ ಔಷಧಿಯನ್ನು ಎಲ್ಲಾ ಮನೆಗಳಿಗೂ ತಲುಪಿಸಿ ಸುಳ್ಯವನ್ನು ಕೊರೋನಾ ಮುಕ್ತವಾಗಿಸ ಬೇಕೆಂದು ಸಚಿವರು ಕರೆ ನೀಡಿದರು.ಬೆಂಗಳೂರಿನ ವಾಸವಿ ಹಾಸ್ಪಿಟಲ್ ನ ಐಸಿಯು ವಿಶೇಷ ತಜ್ಞರಾದ ಡಾಕ್ಟರ್ ರವೀಂದ್ರ ರೆಡ್ಡಿ ಮತ್ತು …

ಸುಳ್ಯ ಸಚಿವ ಅಂಗಾರ ನೇತೃತ್ವದಲ್ಲಿ ವಾರ್ ರೂಂ, ಸೇವಾ ಭಾರತಿ ಪ್ರಮುಖರ ಸಭೆ Read More »

‘ ನನ್ನನ್ನು ಅವಮಾನ ಮಾಡಿ ಕೆಳಗಿಳಿಸಿದರೆ ಬಗ್ಗಲ್ಲ ‘ – ವಿರೋಧಿಗಳಿಗೆ ಯಡಿಯೂರಪ್ಪ ಖಡಕ್ ಖಾರದ ಸಂದೇಶ

ಬೆಂಗಳೂರು: ಇದೇ ಮೊದಲ ಬಾರಿಗೆ ಸಿಎಂ ಯಡಿಯೂರಪ್ಪ ನಾನು ರಾಜೀನಾಮೆ ಸಿದ್ಧ ಎಂಬುದನ್ನು ಬಹಿರಂಗವಾಗಿಯೇ ಹೇಳಿದ್ದಾ ರೆ. ಅದರ ಜತೆಗೆ ಒಂದು ಬಲವಾದ ಎಚ್ಚರಿಕೆಯನ್ನು ಕೂಡ ತನ್ನ ವಿರೋಧಿಗಳಿಗೆ ಯಡಿಯೂರಪ್ಪನವರು ನೀಡಿದ್ದಾರೆ. ನನಗೆ ಯಾವ ಮಾವನ ಮಾಡಿ ಕೆಳಕ್ಕೆ ಹೇಳಲು ಪ್ರಯತ್ನಿಸಿದರೆ ಬಗ್ಗಲ್ಲ ಎಂಬ ಸ್ಟ್ರಾಂಗ್ ಡೋಸ್ ಅನ್ನು ಯಡಿಯೂರಪ್ಪ ಅವರು ನೀಡಿದ್ದು ಇದು ವಿರೋಧಿ ಪಾಳಯದ ಬಾಯಿ ಮುಚ್ಚಿಸುವುದಂತೂ ಗ್ಯಾರಂಟಿ.ನಾಯಕತ್ವ ಬದಲಾವಣೆ ವಿಚಾರ ಹಲವು ತಿಂಗಳಿನಿಂದ ಚರ್ಚೆಯಾಗುತ್ತಿದೆ. ಹೀಗಿದ್ದರೂ ಈ ಬಗ್ಗೆ ಬಹಳ ಗಂಭೀರವಾದ ಹೇಳಿಕೆ …

‘ ನನ್ನನ್ನು ಅವಮಾನ ಮಾಡಿ ಕೆಳಗಿಳಿಸಿದರೆ ಬಗ್ಗಲ್ಲ ‘ – ವಿರೋಧಿಗಳಿಗೆ ಯಡಿಯೂರಪ್ಪ ಖಡಕ್ ಖಾರದ ಸಂದೇಶ Read More »

ಮನೆ ಮನೆಗೆ 4000 ಕೋಳಿಗಳ ಮಾಂಸ ಹಂಚಿದ ಕಾಂಗ್ರೆಸ್ ನಾಯಕ

ಕೊರೊನಾದ ಸಂಕಷ್ಟ ಕಾಲದಲ್ಲಿ ಅನೇಕರು ಹಲವು ರೀತಿಯ ಕಿಟ್ ಗಳನ್ನು ವಿತರಣೆ ಮಾಡುವುದನ್ನು ನಾವು ನೋಡಿದ್ದೇವೆ. ತರಕಾರಿ, ಹಣ್ಣು, ಮೆಡಿಸಿನ್ ದಿನಸಿ ಇತ್ಯಾದಿ ಕಿಟ್‌ಗಳನ್ನು ವಿತರಣೆ ಮಾಡುತ್ತಿರುವುದನ್ನು ನೋಡಿ ದ್ದೇವೆ. ಇಲ್ಲೊಬ್ಬ ನಾಯಕರು ಮತ್ತೊಂದಷ್ಟು ದೂರ ಮುಂದೆ ಹೋಗಿ ಕೋಳಿ ಮಾಂಸವನ್ನೇ ವಿತರಿಸಿದ್ದಾರೆ. ಇವತ್ತು ಆನೇಕಲ್ ತಾಲೂಕಿನ ಬೊಮ್ಮನಹಳ್ಳಿಯ ಮಂಗಮ್ಮನಪಾಳ್ಯ ನಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಬೀಗರ ಊಟ. ಇಂದು ಭಾನುವಾರವಾಗಿರುವುದರಿಂದ ಜನರು ಬಾಡೂಟ ಮಾಡಲಿ ಎಂದು ಅಲ್ಲಿನ ಕಾಂಗ್ರೆಸ್ ನಾಯಕರೊಬ್ಬರು ಕೋಳಿ ಮಾಂಸವನ್ನೇ ವಿತರಿಸಿದ್ದಾರೆ. ಬೊಮ್ಮನಹಳ್ಳಿ ಮಾಜಿ …

ಮನೆ ಮನೆಗೆ 4000 ಕೋಳಿಗಳ ಮಾಂಸ ಹಂಚಿದ ಕಾಂಗ್ರೆಸ್ ನಾಯಕ Read More »

ಕಡಬದಲ್ಲಿ ಜಿಲ್ಲಾಡಳಿತದ ನಿಯಮ ಮುರಿದು ಸಚಿವ ಅಂಗಾರರ ಸಭೆ ಆರೋಪ | ಪತ್ರಕರ್ತರ ಮೇಲೆ ದರ್ಪ ತೋರಿದ ಕಾರ್ಯಕರ್ತರು

ಕಡಬದ ವಿದ್ಯಾನಗರದಲ್ಲಿರುವ‌ ಸರ ಸ್ವತಿ ಶಾಲೆಯಲ್ಲಿ ಬಂದರು ಹಾಗೂ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರ ನೇತೃತ್ವದಲ್ಲಿ ಸಚಿವರ ವಾರ್ ರೂಂ ಹಾಗೂ ಸೇವಾ ಭಾರತಿ ಕಾರ್ಯಕರ್ತರ ಸಭೆ ಆರೆಸ್ಸೆಸ್ ನಾಯಕರ ಉಪಸ್ಥಿತಿಯಲ್ಲಿ ಬೃಹತ್ ಸಭೆ ನಡೆದಿದೆ. ರಸ್ತೆಯ ಎರಡೂ ಬದಿಗಳಲ್ಲಿಯೂ ಅಧಿಕ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಿ ಸಭೆ ನಡೆಸಲಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಮಾಹಿತಿ ತಿಳಿದು ತಡವಾಗಿ ಸ್ಥಳಕ್ಕೆ ಆಗಮಿಸಿದ ಮಾಧ್ಯಮದವರು ರಸ್ತೆ ಬದಿ ನಿಂತು ವೀಡಿಯೋ ಚಿತ್ರೀಕರಣ …

ಕಡಬದಲ್ಲಿ ಜಿಲ್ಲಾಡಳಿತದ ನಿಯಮ ಮುರಿದು ಸಚಿವ ಅಂಗಾರರ ಸಭೆ ಆರೋಪ | ಪತ್ರಕರ್ತರ ಮೇಲೆ ದರ್ಪ ತೋರಿದ ಕಾರ್ಯಕರ್ತರು Read More »

ಅಜೀಮ್ ಪ್ರೇಮ್ಜಿ ಲೋಕೋಪಕಾರಿ ಉಪಕ್ರಮ ಮತ್ತು ಗುಲ್ಬರ್ಗ ಧರ್ಮಕ್ಷೇತ್ರದ ಸಮಾಜಸೇವಾ ಅಭಿವೃದ್ಧಿ ಸಂಸ್ಥೆಗಳಿಂದ ಬಡಕುಟುಂಬಗಳಿಗೆ ಹಂಚಲು ಆಹಾರ ಧಾನ್ಯಗಳ ಸಿದ್ಧತೆ

ಅಜೀಮ್ ಪ್ರೇಮ್ಜಿ ಲೋಕೋಪಕಾರಿ ಉಪಕ್ರಮ (ಎಪಿಪಿಐ) ಮತ್ತು ಗುಲ್ಬರ್ಗ ಧರ್ಮಕ್ಷೇತ್ರದ ಸಮಾಜಸೇವಾ ಅಭಿವೃದ್ಧಿ ಸಂಸ್ಥೆಗಳಾದ ಸೇವಾ ಸಂಗಮ, ಕಲಬುರಗಿ ಹಾಗೂ ಆರ್ಬಿಟ್ ಸಂಸ್ಥೆ, ಬೀದರ್ ಇವರ ಜಂಟಿ ಆಶ್ರಯದಲ್ಲಿ ಒಂದು ಸಾವಿರ ರೂಪಾಯಿ ಮೌಲ್ಯದ ಆಹಾರಧಾನ್ಯದ ಕಿಟ್ ಗಳನ್ನು ಸುಮಾರು 17,500 ಬಡ ಕುಟುಂಬಗಳಿಗೆ ಹಂಚಲು ಸಿದ್ಧತೆ ನಡೆಸಲಾಯಿತು. ಗುರುಗಳು, ಕನ್ಯಾ ಭಗಿನಿಯರು, ಭಕ್ತ ವಿಶ್ವಾಸಿಗಳು ಹಾಗೂ ನಲವತ್ತಕ್ಕಿಂತ ಅಧಿಕ ಸ್ವಯಂ ಸೇವಾ ಸಂಘಗಳು ಸ್ವಇಚ್ಛೆಯಿಂದ ಸೇವೆ ಸಲ್ಲಿಸಲು ಭಾಗಿಯಾಗಿಯಾದರು. ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳ ಸಂಯೋಗದೊಂದಿಗೆ …

ಅಜೀಮ್ ಪ್ರೇಮ್ಜಿ ಲೋಕೋಪಕಾರಿ ಉಪಕ್ರಮ ಮತ್ತು ಗುಲ್ಬರ್ಗ ಧರ್ಮಕ್ಷೇತ್ರದ ಸಮಾಜಸೇವಾ ಅಭಿವೃದ್ಧಿ ಸಂಸ್ಥೆಗಳಿಂದ ಬಡಕುಟುಂಬಗಳಿಗೆ ಹಂಚಲು ಆಹಾರ ಧಾನ್ಯಗಳ ಸಿದ್ಧತೆ Read More »

error: Content is protected !!
Scroll to Top