ಮೂರು ದಿನಗಳ ಅಂತರದಲ್ಲಿ ತಾಯಿ- ಮಗಳು ಕೊರೋನದಿಂದ ಮೃತ್ಯು

ಮೂರು ದಿನಗಳ ಅಂತರದಲ್ಲಿ ತಾಯಿ ಮತ್ತು ಮಗಳು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.

ಶಿವಮೊಗ್ಗದ ಮಲವಗೊಪ್ಪದಲ್ಲಿ ವಾಸವಾಗಿದ್ದ ತಾಯಿ, ಮಗಳು ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮಲವಗೊಪ್ಪದ ರಾಜೇಶ್ವರಿ, ಅವರ ಮಗಳು ಸುಷ್ಮಾ ಮೃತಪಟ್ಟವರು.

ಮೊದಲು ಸುಷ್ಮಾಗೆ ಸೋಂಕು ತಗಲಿದ್ದು, ಕೂಡಲೇ ಅವರು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ರಾಜೇಶ್ವರಿ ಅವರಿಗೂ ಸೋಂಕು ತಗಲಿರುವುದು ಗೊತ್ತಾಗಿದೆ.

ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಸುಷ್ಮಾ ಮೃಪಟ್ಟಿದ್ದರೆ, ಶುಕ್ರವಾರ ರಾತ್ರಿ ರಾಜೇಶ್ವರಿ ಅವರು ಕೊನೆಯುಸಿರೆಳೆದಿದ್ದಾರೆ.

Leave A Reply

Your email address will not be published.