ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಸ್ಟೋರೇಜ್ ಫುಲ್ ಆಗಿದೆಯೇ? ಪರಿಹಾರ ಇಲ್ಲಿದೆ ನೋಡಿ

ಪ್ರಸ್ತುತ ಸ್ಮಾರ್ಟ್‌ಫೋನ್ ನಮ್ಮಜೀವನದ ಪ್ರಮುಖ ಭಾಗವಾಗಿದೆ. ಫೋನ್ ಸಹಾಯದಿಂದ, ನಮ್ಮ ದೈನಂದಿನ ಜೀವನದ ಕಾರ್ಯಗಳು ಶುರುವಾಗುತ್ತವೆ. ಅದು ಬ್ಯಾಂಕಿಂಗ್ ಕೆಲಸ ಆಗಿರಬಹುದು,ದಿನಸಿ ಶಾಪಿಂಗ್ ಅಥವಾ ಅಗತ್ಯ ಅಪ್ಲಿಕೇಶನ್‌ಗಳೇ ಆಗಿರಲಿ ಅವುಗಳನ್ನ ಫೋನ್‌ನಲ್ಲಿಯೇ ಮಾಡಲಾಗುತ್ತದೆ. ಇದಲ್ಲದೆ, ನಮ್ಮಫೋಟೋಗಳು, ವೀಡಿಯೊಗಳನ್ನು ಸಹ ಫೋನ್‌ನಲ್ಲಿ ಸೇವ್ ಮಾಡಲಾಗುತ್ತದೆ. ಮೇಲ್ ನಲ್ಲಿ ಬರುವ ದಾಖಲೆಗಳನ್ನು ಸಹ ಫೋನ್‌ನಲ್ಲಿ ಸೇವ್ ಮಾಡುತ್ತವೆ.

ಹೀಗೆ ಅನೇಕ ಕೆಲಸಗಳನ್ನು ಮೊಬೈಲ್ ನಲ್ಲಿ ಮಾಡುವುದರಿಂದ ಮತ್ತು ಎಲ್ಲಾ ಫೈಲ್ ಗಳನ್ನ ಉಳಿಸುವುದರಿಂದ, ಫೋನ್‌ನ ಸ್ಟೋರೇಜ್ ಸಾಮರ್ಥ್ಯವು ಕಡಿಮೆಯಾಗುತ್ತದೆ ಮತ್ತು ಇದು ಫೋನ್‌ನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮಫೋನ್‌ನ ಸಾಮರ್ಥ್ಯವನ್ನು ನೀವು ಯಾವ ರೀತಿಯಲ್ಲಿ ಹೆಚ್ಚಿಸಬಹುದು ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ಅದಕ್ಕೆ ಪರಿಹಾರಗಳು.

ಸ್ಟೋರೇಜ್ ಮೆಮೊರಿಯನ್ನು(Cache Memory) ಡಿಲೀಟ್ ಮಾಡಿ:
ಸ್ಟೋರೇಜ್ ನಲ್ಲಿ ಅನೇಕ ಫೈಲ್
ಉಳಿಸಲಾಗಿರುವುದರಿಂದ ಕೆಲವೇ ದಿನಗಳಲ್ಲಿ ಸ್ಟೋರೇಜ್ ತುಂಬುತ್ತದೆ. ಲೋಡ್ ಮಾಡುವ ಸಮಯವನ್ನು ಕಡಿಮೆ ಮಾಡಲು ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳು ಸಾಕಷ್ಟು ಡೇಟಾವನ್ನು ಸಂಗ್ರಹಿಸುತ್ತವೆ. ಸಂಗ್ರಹ ಮೆಮೊರಿಯಲ್ಲಿರುವ ಬೇಡವಾದ ಫೈಲ್ ಗಳನ್ನ ಡಿಲೀಟ್ ಮಾಡಿ. ಹೀಗೆ ಮಾಡುವುದರಿಂದ ನಿಮ್ಮ ಸ್ಟೋರೇಜ್ ಉಳಿಯುತ್ತದೆ.

ಡೌನ್‌ಲೋಡ್ ಫೈಲ್ಸ್ ಗಳನ್ನ ಡಿಲೀಟ್ ಮಾಡಿ:
ನಾವು ಆಗಾಗ್ಗೆ ಫೋನ್‌ನಲ್ಲಿರುವ ಫೈಲ್‌ಗಳನ್ನು ಮೇಲ್ ಮೂಲಕ ಡೌನ್‌ಲೋಡ್ ಮಾಡುತ್ತಲೇ ಇರುತ್ತೇವೆ. ಡೌನ್‌ಲೋಡ್ ಮಾಡಿದ ನಂತರ, ಅದು ಎಲ್ಲೋ ಸೇವ್ ಆಗಿರುತ್ತೆ ಎಂಬುದನ್ನು ನಾವು ಮರೆಯುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಫೋನ್‌ನ ಡೌನ್‌ಲೋಡ್‌ಗೆ ಹೋಗಿ, ಬೇಡವಾದ ಫೈಲ್ ಅನ್ನು ಡಿಲೀಟ್ ಮಾಡಿ. ಇದರಿಂದಲೂ ನಿಮಗೆ ಸ್ಟೋರೇಜ್ ಉಳಿಯುತ್ತದೆ.

ಆ್ಯಪ್ ಗಳನ್ನು ಆಗಾಗ ಕ್ಲಿನ್ ಮಾಡಿ:
ಬಳಕೆದಾರರು ಅನೇಕ ಅಪ್ಲಿಕೇಶನ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಬದಲಿಗೆ ಗೂಗಲ್ ಫೈಲ್ (Google File) ಆಪ್ ಬಳಸಿ. ಇದು ಕ್ಲೀನಿಂಗ್ ಆ್ಯಪ್ ಆಗಿ ಸಹ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮ ಸ್ಟೋರೇಜ್
ಸಾಮರ್ಥ್ಯವನ್ನು ಸಹ ಸುಧಾರಿಸುತ್ತದೆ.

ಪ್ರತಿದಿನ ವಾಟ್ಸಾಪ್ ಅಥವಾ ಇತರ ಸಾಮಾಜಿಕ ಜಾಲತಾಣಗಳಿಂದ ಹೆಚ್ಚಿನ ಸಂಖ್ಯೆಯ ವೀಡಿಯೊಗಳು ಬರುತ್ತಲೇ ಇರುತ್ತವೆ. ಈ ಎಲ್ಲಾ ವೀಡಿಯೊಗಳು ಯಾವುದೇ ಪ್ರಯೋಜನವಿಲ್ಲ. ಹೆಚ್ಚಿನ ವೀಡಿಯೊಗಳು ಗುಡ್ ಮಾರ್ನಿಂಗ್, ಫನ್ನಿ ವಿಡಿಯೋಗಳಾಗಿರುತ್ತವೆ. ಅಂತಹ ವಿಡಿಯೋಗಳನ್ನು ಡಿಲೀಟ್ ಮಾಡಿ. ಇದರಿಂದ ಫೋನ್‌ನ ಸ್ಟೋರೇಜ್ ಸಾಮರ್ಥ್ಯವನ್ನು ಮರುಪಡೆಯಬಹುದು.

ಬಳಕೆಯಾಗದ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ:
ಮೊಬೈಲ್ ನಲ್ಲಿ ಬಳಕೆಯಾಗದ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡುವುದರಿಂದ ಸ್ಟೋರೇಜ್ ನಿಯಂತ್ರಿಸುವಲ್ಲಿ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಇದರೊಂದಿಗೆ, ನೀವು ಫೋನ್‌ನ ಸ್ಟೋರೇಜ್ ಗಮನಾರ್ಹವಾಗಿ ಹೆಚ್ಚಿಸಬಹುದು.

ಇವುಗಳನ್ನೆಲ್ಲ ಪಾಲಿಸುವುದರಿಂದ ನೀವು ನಿಮ್ಮ ಫೋನಿನ ಸ್ಟೋರೇಜನ್ನು ಉಳಿಸಬಹುದು ಹಾಗೂ ಅನಿವಾರ್ಯವಾದ ಫೈಲ್ ಗಳನ್ನು ಸ್ಟೋರ್ ಮಾಡಟ್ಟುಕೊಳ್ಳಬಹುದು.

Leave A Reply

Your email address will not be published.