Day: May 28, 2021

ಜೂ.30ರವರೆಗೆ ನಿರ್ಬಂಧಗಳನ್ನು ಮುಂದುವರೆಸುವಂತೆ ಕೇಂದ್ರ ಗೃಹಸಚಿವಾಲಯ ಸೂಚನೆ

ಕೊರೊನಾ ಎರಡನೇ ಅಲೆ ಪಸರಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಸದ್ಯ ಜಾರಿಯಲ್ಲಿರುವ ನಿರ್ಬಂಧಗಳನ್ನು ಜೂನ್ 30ರ ತನಕ ಮುಂದುವರಿಕೆಗೆ ಕೇಂದ್ರ ಗೃಹಸಚಿವಾಲಯ ಎಲ್ಲಾ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ. ಈ ಕುರಿತು ಆದೇಶ ಹೊರಡಿಸಿದ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲ, ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಆಡಳಿತ ಈಗಾಗಲೇ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಹೆಚ್ಚಿನ ರಾಜ್ಯಗಳಲ್ಲಿ ಕೋರೋನಾ ಸೋಂಕಿಗೊಳಗಾಗಿ ಜವ ಸಾವಿಗೀಡಾಗುತ್ತಿರುವ ಸಂಖ್ಯೆ ಹಾಗು ಸೋಂಕಿತರ …

ಜೂ.30ರವರೆಗೆ ನಿರ್ಬಂಧಗಳನ್ನು ಮುಂದುವರೆಸುವಂತೆ ಕೇಂದ್ರ ಗೃಹಸಚಿವಾಲಯ ಸೂಚನೆ Read More »

ಪಾಸಿಟೀವ್ ಬಂತು ಅಂತ ಮನೇಲಿ ಕೂತರೆ ನನ್ನ ತೋಟಕ್ಕೆ ನೀರು ಗೊಬ್ಬರ ನೀವು ಹೋಗಿ ಹಾಕ್ತೀರಾ | ಅಧಿಕಾರಿಗಳ ಜೊತೆಗೆ ರೈತನ ವಾದ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ಮತ್ತು ಅಧಿಕಾರಿಗಳ ಮಧ್ಯೆ ತೀವ್ರ ವಾಗ್ವಾದ ನಡೆಸಿದ್ದು ಅದು ಕುತೂಹಲ ಮೂಡಿಸಿದೆ. ಚಿಕ್ಕಮಗಳೂರು ತಾಲ್ಲೂಕಿನ ನೇರಡಿ ಗ್ರಾಮದ ವ್ಯಕ್ತಿಯೊಬ್ಬನಿಗೆ ಕೊರೊನಾ ಪರೀಕ್ಷೆ ಮಾಡಿಸಿದ್ದರು. ವರದಿ ಬರುವ ತನಕ ಸುರಕ್ಷತೆಯ ದೃಷ್ಟಿಯಿಂದ ಆತನಿಗೆ ಮನೆಯಲ್ಲೇ ಇರುವಂತೆ ಸೂಚಿಸಿದ್ದರು. ಆ ವ್ಯಕ್ತಿಗೆ ಪಾಸಿಟಿವ್ ಬಂದಿದೆ. ತಕ್ಷಣ ಆತನ ಮೊಬೈಲ್ ಗೆ ಪಾಸಿಟಿವ್ ಆದುದರ ಬಗ್ಗೆ ಮೆಸೇಜ್ ಕೂಡ ಕಳುಹಿಸಲಾಗಿತ್ತು. ಹೀಗಿದ್ದರೂ, ಆತ ಪಾಸಿಟಿವ್ ಬಂದಿದ್ದು ತಿಳಿದರೂ ಗ್ರಾಮದಲ್ಲಿ ಓಡಾಡಿಕೊಂಡು, ಮುಖ್ಯವಾಗಿ ತನ್ನ ಹೊಲ ತೋಟಗಳಿಗೆ …

ಪಾಸಿಟೀವ್ ಬಂತು ಅಂತ ಮನೇಲಿ ಕೂತರೆ ನನ್ನ ತೋಟಕ್ಕೆ ನೀರು ಗೊಬ್ಬರ ನೀವು ಹೋಗಿ ಹಾಕ್ತೀರಾ | ಅಧಿಕಾರಿಗಳ ಜೊತೆಗೆ ರೈತನ ವಾದ Read More »

ದ.ಕ. ಜಿಲ್ಲೆ ಶುಕ್ರವಾರದ ಕೋವಿಡ್‌ ವರದಿ : 799 ಮಂದಿಗೆ ಪಾಸಿಟಿವ್, 5 ಮಂದಿ ಬಲಿ

ದ.ಕ. ಜಿಲ್ಲೆಯಲ್ಲಿ ಶುಕ್ರವಾರ 5 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 894ಕ್ಕೇರಿದೆ. 799 ಮಂದಿಗೆ ಕೊರೋನ ಸೋಂಕು ದೃಢಪಟ್ಟಿವೆ.ಜಿಲ್ಲೆಯಲ್ಲಿ ಈವರಗೆ 8,41,914 ಮಂದಿಯ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 7,68,016 ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟು 73,898 ಮಂದಿ ಕೊರೋನ ಸೋಂಕಿಗೊಳಗಾಗಿದ್ದಾರೆ. ಶುಕ್ರವಾರ 745 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವುದರೊಂದಿಗೆ ಈವರೆಗೆ ಗುಣಮುಖರಾದವರ ಸಂಖ್ಯೆ 64,001ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ 9,003 ಸಕ್ರಿಯ ಪ್ರಕರಣವಿದ್ದು, ಚಿಕಿತ್ಸೆ …

ದ.ಕ. ಜಿಲ್ಲೆ ಶುಕ್ರವಾರದ ಕೋವಿಡ್‌ ವರದಿ : 799 ಮಂದಿಗೆ ಪಾಸಿಟಿವ್, 5 ಮಂದಿ ಬಲಿ Read More »

ಲಾಕ್ ಡೌನ್ ಹಿನ್ನೆಲೆ ಬಿಯರ್ ಮಾರಾಟದಲ್ಲಿ ಶೇ. 50 ಭಾರೀ ಕುಸಿತ

ಕೊರೊನಾ ಹಿನ್ನೆಲೆಯಲ್ಲಿ ಬಿಯರ್ ಮಾರಾಟದಲ್ಲಿ ಶೇ.50 ಕುಸಿದಿದೆ. ರಾಜ್ಯದಲ್ಲಿ 3,907 (ಸಿಎಲ್-2), 232 ಕ್ಲಬ್ (ಸಿಎಲ್-4), 1,037 ಹೋಟೆಲ್ ಮತ್ತು ಗೃಹ(ಸಿಎಲ್-7), 3,552 ಬಾರ್ ಆ್ಯಂಡ್ ರೆಸ್ಟೋರೆಂಟ್(ಸಿಎಲ್-9) ಹಾಗೂ 705 ಎಂಎಸ್‌ಐಲ್ (11ಸಿ) 438 ಇತರೆ ಸೇರಿ ಒಟ್ಟು 10,410 ಮದ್ಯದಂಗಡಿಗಳಿವೆ. ಸಾಮಾನ್ಯ ದಿನಗಳಲ್ಲಿ ನಿತ್ಯ ಆಂದಾಜು 70 ಸಾವಿರ ಬಿಯರ್ ಬಾಕ್ಸ್ ಗಳು ಮಾರಾಟವಾಗುತ್ತಿತ್ತು. ಇದರಿಂದ ಇಲಾಖೆಗೆ 10 ಕೋಟಿ ರೂ.ಆದಾಯ ಬರುತ್ತಿತ್ತು. ಇದೀಗ ನಿತ್ಯ 25 – 30 ಸಾವಿರ ಬಾಕ್ಸ್‌ಗಳು ಸೇಲಾಗುತ್ತಿವೆ ಎಂದು …

ಲಾಕ್ ಡೌನ್ ಹಿನ್ನೆಲೆ ಬಿಯರ್ ಮಾರಾಟದಲ್ಲಿ ಶೇ. 50 ಭಾರೀ ಕುಸಿತ Read More »

ಜೂ.30ರವರೆಗೆ ಅಂತರಾಷ್ಟ್ರೀಯ ವಿಮಾನ ಸೇವೆಗೆ ನಿರ್ಬಂಧ ಮುಂದುವರಿಕೆ

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಒಂದು ವರ್ಷದಿಂದ ಅಂತರಾಷ್ಟ್ರೀಯ ವಿಮಾನ ಸೇವೆ ಸ್ಥಗಿತಗೊಳಿಸಲಾಗಿದ್ದು, ಇದೀಗ ಅದನ್ನು ಜೂನ್ 30ರವರೆಗೆ ವಿಸ್ತರಿಸಲಾಗಿದೆ. ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗೆ ವಿಧಿಸಲಾಗಿದ್ದ ನಿರ್ಬಂಧವನ್ನು ಜೂನ್ 30ರ ವರೆಗೆ ವಿಸ್ತರಿಸಲಾಗಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಅದರೂ ಗೃಹ ಸಚಿವಾಲಯದಿಂದ ಅನುಮತಿ ಪಡೆದವರು ಮಾತ್ರವೇ ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ ಮತ್ತು ಈ ನಿರ್ಬಂಧವೂ ಕಾರ್ಗೋ ವಿಮಾನ ಸೇವೆಗೆ ಅನ್ವಯವಾಗುವುದಿಲ್ಲ ಎಂದು ಡಿಜಿಸಿಎ ಸ್ಪಷ್ಟಪಡಿಸಿದೆ. ಕಳೆದ ವರ್ಷ ಮಾರ್ಚ್ 25ರಂದು ಕೊರೋನಾ …

ಜೂ.30ರವರೆಗೆ ಅಂತರಾಷ್ಟ್ರೀಯ ವಿಮಾನ ಸೇವೆಗೆ ನಿರ್ಬಂಧ ಮುಂದುವರಿಕೆ Read More »

ಪತಿಯ ಮೊಬೈಲ್ ಕದ್ದು ನೋಡಿ ಚೆಕ್ ಮಾಡುವ ಹೆಂಡತಿಯರಿಗೆ ಕಾದಿದೆ ದೊಡ್ಡ ಶಿಕ್ಷೆ !

ಇದು ಪತಿಯ ಮೊಬೈಲ್ ಅನ್ನು ಕದ್ದು ನೋಡುವ ಪತ್ನಿಯರಿಗೆ ಒಂದು ದೊಡ್ಡ ವಾರ್ನಿಂಗ್. ಮೊಬೈಲಿನಲ್ಲಿ ಸಾಕಷ್ಟು ಗುಟ್ಟು ರಟ್ಟುಗಳನ್ನು ಗುಪ್ತವಾಗಿ ಹೊಂದಿರುವ ಪತಿಯರ ಪಾಲಿಗೆ ಒಂದು ಗುಡ್ ನ್ಯೂಸ್ ! ಯೆಸ್, ಪತಿಯ ಮೊಬೈಲನ್ನು ಕದ್ದು ನೋಡಿದ ಕಾರಣಕ್ಕಾಗಿ ಪತ್ನಿಯೊಬ್ಬಳ ಮೇಲೆ ದುಬಾಯಿನ ಕೋರ್ಟು0ದು ದೊಡ್ಡ ಮೊತ್ತದ ದಂಡ ವಿಧಿಸಿದೆ. ನನ್ನ ಪತ್ನಿ ನನ್ನ ಮೊಬೈಲ್ ತೆರೆದು ನೋಡಿದಲ್ಲದೆ ಅದರಲ್ಲಿರುವ ಕೆಲವು ಚಿತ್ರಗಳನ್ನು ಮತ್ತು ವೀಡಿಯೊಗಳನ್ನು ನನ್ನ ಕುಟುಂಬಕ್ಕೆ ಕಳುಹಿಸಿ ನನ್ನನ್ನು ಅವಮಾನಿತನಾಗಿ ಮಾಡಿದ್ದಾಳೆ. ಆದುದರಿಂದ ನಾನು …

ಪತಿಯ ಮೊಬೈಲ್ ಕದ್ದು ನೋಡಿ ಚೆಕ್ ಮಾಡುವ ಹೆಂಡತಿಯರಿಗೆ ಕಾದಿದೆ ದೊಡ್ಡ ಶಿಕ್ಷೆ ! Read More »

360 ಪ್ರಯಾಣಿಕರ ಜಂಬೋ ವಿಮಾನದಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸಿದ ಪ್ರಯಾಣಿಕ | ಅದಕ್ಕಾಗಿ ಆತ ವ್ಯಯಿಸಿದ್ದು ಕೇವಲ 18000 ರೂಪಾಯಿ !

ವಿಮಾನ ಪ್ರಯಾಣವೇ ಬಲು ರೋಚಕ. ಭೂಮಿಯ ಗುರುತ್ವಾಕರ್ಷಣೆಯನ್ನು ಧಿಕ್ಕರಿಸಿ ಕೊಂಡು ಮೇಲಕ್ಕೆ ಚಿಮ್ಮಿ ತೇಲುತ್ತಾ ವೇಗವಾಗಿ ಸಾಗುವ ವಿಮಾನ ಪ್ರಯಾಣದ ಮತ್ತೊಂದು ರೋಚಕ ಅನುಭವವನ್ನು ಮೇ ಈ ಇಬ್ಬರು ಅದೃಷ್ಟವಂತರು ಇದೇ ಮೇ ತಿಂಗಳಿನಲ್ಲಿ ಪಡೆದಿದ್ದಾರೆ. ಭವಿಷ್ ಹಾವೇರಿ ಎಂಬ ನಲವತ್ತರ ಪ್ರಾಯದ ಆತ ಮುಂಬೈನಿಂದ ದುಬೈಗೆ 18000 ರೂಪಾಯಿ ಕೊಟ್ಟು ಎಕಾನಮಿ ಕ್ಲಾಸ್ ನಲ್ಲಿ, ಮೇ 19 ರಂದು ಪ್ರಯಾಣಿಸುವುದೆಂದು ಒಂದು ಟಿಕೆಟ್ಟು ಖರೀದಿಸಿದ್ದರು. ಅದು ಲಾಕ್ ಡೌನ್ ನ ಸಂದರ್ಭವಾದುದರಿಂದ ತಮ್ಮ ಎಂದಿನ ಬಿಜಿನೆಸ್ …

360 ಪ್ರಯಾಣಿಕರ ಜಂಬೋ ವಿಮಾನದಲ್ಲಿ ಒಬ್ಬಂಟಿಯಾಗಿ ಪ್ರಯಾಣಿಸಿದ ಪ್ರಯಾಣಿಕ | ಅದಕ್ಕಾಗಿ ಆತ ವ್ಯಯಿಸಿದ್ದು ಕೇವಲ 18000 ರೂಪಾಯಿ ! Read More »

ಚೆಂಬು | ಮೈಲುತುತ್ತು ಸೇವಿಸಿ ತಾಯಿ ಮಗು ಅಸ್ವಸ್ಥ | ಆಸ್ಪತ್ರೆಗೆ ದಾಖಲು

ಸುಳ್ಯ : ಚೆಂಬು ಗ್ರಾಮದ ಊರುಬೈಲು ಎಂಬಲ್ಲಿ ತಾಯಿ ಮತ್ತು ಮಗು ಮೈಲುತುತ್ತು ಸೇವಿಸಿ ತೀವ್ರ ಅಸ್ವಸ್ಥಗೊಂಡಿದ್ದು,ಚಿಕಿತ್ಸೆಗಾಗಿಆಸ್ಪತ್ರೆ ದಾಖಲಿಸಿದ ಕುರಿತು ಶುಕ್ರವಾರ ವರದಿಯಾಗಿದೆ. ಪತಿ ಮನೆಯಲ್ಲಿಲ್ಲದ ವೇಳೆ ಪತ್ನಿ ತನ್ನ ಮಗುವಿಗೆ ಮೈಲುತುತ್ತು ನೀಡಿ ತಾನೂ ಸೇವಿಸಿ ಅಸ್ವಸ್ಥರಾದರೆಂದು ಎನ್ನಲಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಮನೆಯ ಇತರರು ತಕ್ಷಣ ಅವರನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದು ಬಂದಿದೆ. ಯಾವ ಕಾರಣಕ್ಕಾಗಿ ಮೈಲುತುತ್ತು ಸೇವಿಸಿದ್ದಾರೆಂದು ತಿಳಿದು ಬಂದಿಲ್ಲ ಸದ್ಯ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಜಿರೆ | ಕೇವಲ 15 ದಿನಗಳ ಅಂತರದಲ್ಲಿ ಒಂದೇ ಮನೆಯ ಮೂವರು ಕೊರೋನಾಗೆ ಬಲಿ

ಕೊರೋನಾವೆಂಬ ಕಣ್ಣಿಗೆ ಕಾಣದ ಮಹಾಮಾರಿ ಮಾಡಿದ ಅವಾಂತರ ಅಷ್ಟಿಷ್ಟಲ್ಲ. ಅದೆಷ್ಟೋ ಕುಟುಂಬಗಳು ಇಂದು ಗತಿ ಇಲ್ಲದೇ ಇದೆ. ಇದಕ್ಕೆಲ್ಲ ಕಾರಣ ಕೊರೋನವೈರಸ್. ಇಂತಹದೇ ಘಟನೆಯೊಂದು ಉಜಿರೆಯಲ್ಲಿ ನಡೆದಿದೆ. ಉಜಿರೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸ್ತವ್ಯವಿರುವ ಒಂದೇ ಕುಟುಂಬದ ಮೂವರು ಸದಸ್ಯರು ಕೇವಲ 15 ದಿನಗಳ ಅಂತರದಲ್ಲಿ ಕೊರೋನಾದಿಂದ ಮೃತರಾಗಿದ್ದಾರೆ. ಉಜಿರೆ ಗ್ರಾಮದ ಗಾಂಧಿನಗರ ನಿವಾಸಿ ಪುರಲ್ಲ(92), ಅವರ ಪುತ್ರಿ ಅಪ್ಪಿ(45) ಹಾಗೂ ಅಪ್ಪಿಯವರ ಪತಿ ಗುರುವ(52) ಕೋವಿಡ್ ಸೋಂಕಿನಿಂದ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಉಜಿರೆ ಗ್ರಾಪಂ ಮಾಜಿ ಅಧ್ಯಕ್ಷ …

ಉಜಿರೆ | ಕೇವಲ 15 ದಿನಗಳ ಅಂತರದಲ್ಲಿ ಒಂದೇ ಮನೆಯ ಮೂವರು ಕೊರೋನಾಗೆ ಬಲಿ Read More »

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ | ಸಿಎಂ ಪುತ್ರರ ಹಸ್ತಕ್ಷೇಪ ಹಾಗೂ ಯೋಗೇಶ್ವರ ಹೇಳಿಕೆ ಬಗ್ಗೆ ವಿವರಣೆ ಪಡೆಯುತ್ತೇನೆ- ನಳಿನ್ ಕುಮಾರ್ ಕಟೀಲ್

ರಾಜ್ಯದಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಲ್ಲಗಳೆದಿದ್ದಾರೆ.ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ.ಈ ಕುರಿತು ಎಲ್ಲಿಯೂ ಚರ್ಚೆ ಆಗಿಲ್ಲ, ಯಾವುದೇ ಬದಲಾವಣೆ ಕೂಡ ಮಾಡಲ್ಲ. ಬಿ.ಎಸ್​.ಯಡಿಯೂರಪ್ಪ ಮುಖ್ಯಮಂತ್ರಿಯಾದಗಿನಿಂದ ಬದಲಾವಣೆ ಬಗ್ಗೆ ಚರ್ಚೆ ಆರಂಭವಾಗಿದೆ.ಯಡಿಯೂರಪ್ಪ ಅವರೇ ನಮ್ಮ ನಾಯಕರು. ಮುಂದಿನ ಎರಡು ವರ್ಷ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ.ಅಧಿಕಾರವನ್ನು ಅವರೇ ಕೂಡ ಪೂರ್ಣಗೊಳಿಸಲಿದ್ದು, ಶಾಸಕಾಂಗ ಪಕ್ಷದ ಸಭೆ ಸದ್ಯಕ್ಕಿಲ್ಲ , ಕೋವಿಡ್ ಮುಗಿಯುವ ತನಕ ಯಾವುದೇ ಸಭೆಗಳನ್ನು ನಡೆಸುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿದರು. ಬೆಂಗಳೂರಿನ …

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ | ಸಿಎಂ ಪುತ್ರರ ಹಸ್ತಕ್ಷೇಪ ಹಾಗೂ ಯೋಗೇಶ್ವರ ಹೇಳಿಕೆ ಬಗ್ಗೆ ವಿವರಣೆ ಪಡೆಯುತ್ತೇನೆ- ನಳಿನ್ ಕುಮಾರ್ ಕಟೀಲ್ Read More »

error: Content is protected !!
Scroll to Top