ಮಾಸ್ಕ್ ಹಾಕಿಕೊಳ್ಳಲು ಹೇಳಿದ್ದೇ ತಪ್ಪಾಯ್ತಾ..? | ಮಾಸ್ಕ್ ಹಾಕಲು ಹೇಳಿದ ನಗರಸಭೆ ನೌಕರನ ಬರ್ಬರ ಹತ್ಯೆ

ಭದ್ರಾವತಿ: ಇತ್ತೀಚಿಗಷ್ಟೇ ಸಾಮಾಜಿಕ ಅಂತರ ಪಾಲಿಸುವಂತೆ ಹೇಳಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮೇಲೆ ಹಲ್ಲೆ ನಡೆದ ಘಟನೆ ವರದಿಯಾದ ಬೆನ್ನಲ್ಲೇ ಮಾಸ್ಕ್ ಹಾಕಿಕೊಳ್ಳಲು ಹೇಳಿದ್ದಕ್ಕೆ ನಗರಸಭೆ ಗುತ್ತಿಗೆ ನೌಕರನೋರ್ವನನ್ನು ಇರಿದು ಹತ್ಯೆ ಮಾಡಲಾದ ದುರ್ಘಟನೆ ಭದ್ರಾವತಿಯಲ್ಲಿ ನಡೆದಿದೆ.

ಸುನಿಲ್ (24) ಮೃತಪಟ್ಟ ನಗರಸಭೆ ಗುತ್ತಿಗೆ ನೌಕರ ಎಂದು ತಿಳಿದುಬಂದಿದೆ. ಇದೇ ಘಟನೆಯಲ್ಲಿ ಗಾಯಗೊಂಡ ಶ್ರೀಕಂಠ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ನಡೆದದ್ದು ಏನು..?:

ಸುನಿಲ್ ಹಾಗೂ ಮತ್ತೊಬ್ಬ ಸಹೋದ್ಯೋಗಿ ಶ್ರೀ ಕಂಠ ಮಂಗಳವಾರ ಸಂಜೆ ಜತೆಯಾಗಿ ಅನ್ವರ್ ಕಾಲೋನಿ ಕಡೆಗೆ ತೆರಳಿದ್ದ ವೇಳೆ ನಿಂತಿದ್ದ ಯುವಕರಿಗೆ ಮಾಸ್ಕ್ ಹಾಕಲು ಹೇಳಿದ್ದಾರೆ ಈ ವಿಚಾರದಲ್ಲಿ ಪರಸ್ಪರ ಮಾತುಕತೆಯಾದ ವೇಳೆ ಗುಂಪಿನಲ್ಲಿದ್ದ ಕೆಲವರು ಇವರ ಮೇಲೆ ಹಲ್ಲೆ ನಡೆಸಿ ಮಾರಾಕಾಸ್ತ್ರದಿಂದ ಇರಿದಿದ್ದಾರೆ.

ಇರಿತಕ್ಕೊಳಗಾದ ಇವರನ್ನು ಆಸ್ಪತ್ರೆಗೆ ಸೇರಿಸಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸುನಿಲ್ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave A Reply

Your email address will not be published.