Day: May 26, 2021

ಗ್ರಾ.ಪಂ. ಸದಸ್ಯರಿಗೂ ಲಸಿಕೆ ನೀಡಲು ಸಚಿವ ಸಂಪುಟದಲ್ಲಿ ಚರ್ಚೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕೊರೋನ ಕಾರ್ಯಪಡೆ ಸದಸ್ಯರಾಗಿರುವ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಕೊರೋನಾ ವಾರಿಯರ್ಸ್ ಎಂಬುದಾಗಿ ಪರಿಗಣಿಸಿ ಪ್ರಥಮ ಪ್ರಾಶಸ್ತ್ಯದಲ್ಲಿ ಕೊರೋನ ಲಸಿಕೆ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ನಾಳೆ ನಡೆಯುವ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಬೈಂದೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಸರಕಾರಿ ನೌಕರರಾಗಿರುವ ಗ್ರಾಪಂ ಪಿಡಿಓ ಹಾಗೂ ಇತರ ಸಿಬ್ಬಂದಿಗೆ ಪ್ರಥಮ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡುವ ಕೆಲಸ ಆಗಿದೆ. ಇದೀಗ ಸದಸ್ಯರಿಗೂ ಲಸಿಕೆ …

ಗ್ರಾ.ಪಂ. ಸದಸ್ಯರಿಗೂ ಲಸಿಕೆ ನೀಡಲು ಸಚಿವ ಸಂಪುಟದಲ್ಲಿ ಚರ್ಚೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ Read More »

ಕೃಷಿಕರಿಗೆ ಪುತ್ತೂರು ಎಪಿಎಂಸಿಯಿಂದ ಶೂನ್ಯ ಬಡ್ಡಿಯಲ್ಲಿ ಅಡಮಾನ ಸಾಲ : ದಿನೇಶ್ ಮೆದು

ಪುತ್ತೂರು : ಕೊರೋನ ಲಾಕ್‌ಡೌನ್ ಸಂಕಷ್ಟ ಕಾಲದಲ್ಲಿ ಪುತ್ತೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯು ಅಡಿಕೆ ಬೆಳೆಗಾರರಿಗೆ ಮತ್ತು ಊರಿನ ತರಕಾರಿ ಬೆಳೆಗಾರರಿಗೆ ಸಹಾಯವಾಗುವಂತೆ ವಿಶೇಷ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಪುತ್ತೂರು ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ತಿಳಿಸಿದ್ದಾರೆ. ಅವರು ಬುಧವಾರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಪುತ್ತೂರು ಶಾಸಕರ ಸೂಚನೆಯಂತೆ ಕೊರೋನ 1ನೇ ಅಲೆಯ ಸಂದರ್ಭದಲ್ಲಿ ಮಾಡಿದ ರೈತ ಪರ ಯೋಜನೆಯಂತೆ ಇದೀಗ 2ನೇ ಅಲೆಯ ಸಂದರ್ಭದಲ್ಲೂ ಶೂನ್ಯ ಬಡ್ಡಿ ದರದ ಅಡಮಾನ ಸಾಲ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ …

ಕೃಷಿಕರಿಗೆ ಪುತ್ತೂರು ಎಪಿಎಂಸಿಯಿಂದ ಶೂನ್ಯ ಬಡ್ಡಿಯಲ್ಲಿ ಅಡಮಾನ ಸಾಲ : ದಿನೇಶ್ ಮೆದು Read More »

ವಿಜಯನಗರ | ಇಂದು ಜನಿಸಿದ ಶಿಶು ಒಂದರ ಕಾಲಲ್ಲಿ ಇತ್ತು ಐದಲ್ಲ ಒಂಬತ್ತು ಬೆರಳುಗಳು?!!

ಐದಕ್ಕಿಂತ ಒಂದು ಅಥವಾ ಎರಡು ಹೆಚ್ಚು ಬೆರಳಿರುವ ಮಕ್ಕಳ ಜನನವಾಗಿರುವುದು ತಿಳಿದ ಸಂಗತಿ. ಆದರೆ ಒಂಬತ್ತು ಬೆರಳಿರುವ ಮಗು ಜನಿಸುವುದೆಂದರೆ ನಿಜಕ್ಕೂ ಆಶ್ಚರ್ಯವೇ ಸರಿ! ಇಂತಹದೊಂದು ಅಚ್ಚರಿಗೆ ಹೊಸಪೇಟೆ ತಾಲೂಕಿನ ಸರ್ಕಾರಿ ಆಸ್ಪತ್ರೆ ಸಾಕ್ಷಿಯಾಗಿದೆ. ಎಡಗಾಲಿಗೆ 9 ಬೆರಳು ಹೊಂದಿರುವ ಇರುವ ಅಪರೂಪದ ಮಗುವಿನ ಜನನವಾಗಿದೆ. ವಿಜಯನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಒಂಬತ್ತು ಬೆರಳು ಇರುವ ಮಗುವಿನ ಜನನವಾಗಿದೆ ಎಂದು ಸರ್ಕಾರಿ ಆಸ್ಪತ್ರೆ ತಜ್ಞ ಡಾ. ಬಾಲಚಂದ್ರ ತಿಳಿಸಿದ್ದಾರೆ. ಇಂದು ಮಧ್ಯಾಹ್ನ ಜನಿಸಿದ ಮಗುವಿನ ಕಾಲಿನಲ್ಲಿ ಒಂಬತ್ತು ಬೆರಳು …

ವಿಜಯನಗರ | ಇಂದು ಜನಿಸಿದ ಶಿಶು ಒಂದರ ಕಾಲಲ್ಲಿ ಇತ್ತು ಐದಲ್ಲ ಒಂಬತ್ತು ಬೆರಳುಗಳು?!! Read More »

ರಾಜ್ಯದಲ್ಲಿ ಇಳಿಕೆಯಾಗುತ್ತಿರುವ ಕೊರೋನ ಪ್ರಕರಣ | ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ

ರಾಜ್ಯದಲ್ಲೀಗ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕೊಂಚ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಲಾಕ್ ಡೌನ್ ನಿಯಮದಲ್ಲಿ ಸಡಿಲಿಕೆಯನ್ನು ಮಾಡಿದೆ. ನ್ಯಾಯಾಲಯದ ಕಾರ್ಯ ಕಲಾಪಕ್ಕೆ ಅವಕಾಶ ಕಲ್ಪಿಸಿರುವ ಸರಕಾರ ಅಸ್ಥಿ ವಿಸರ್ಜನೆ ಮಾಡಲು ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಇಳಿಕೆಯಾಗುತ್ತಿದೆ. ಆದ್ರೆ ಸಂಪೂರ್ಣವಾಗಿ ತಹಬದಿಗೆ ಬಂದಿಲ್ಲ. ಹೀಗಾಗಿ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಸಂಖ್ಯೆ 2000 ಹಾಗೂ ಬೆಂಗಳೂರಿನಲ್ಲಿ ನಿತ್ಯವೂ 500 ಕೇಸ್ ಗಳಿಗೆ ಇಳಿಕೆ ಕಾಣುವವರೆಗೂ ಲಾಕ್ ಡೌನ್ ವಿಸ್ತರಣೆಯ ಮಾಡುವ …

ರಾಜ್ಯದಲ್ಲಿ ಇಳಿಕೆಯಾಗುತ್ತಿರುವ ಕೊರೋನ ಪ್ರಕರಣ | ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ Read More »

ಲಾಕ್ ಡೌನ್ ಪ್ಯಾಕೇಜ್ : ಆಟೋ, ಟ್ಯಾಕ್ಸಿ, ಕ್ಯಾಬ್ ಡ್ರೈವರ್ ಗಳು ನಾಳೆಯಿಂದಲೇ ಅರ್ಜಿ ಸಲ್ಲಿಸಬಹುದು

ಲಾಕ್ ಡೌನ್ ಪ್ಯಾಕೇಜ್ ನಲ್ಲಿ ಘೋಷಿಸಿದ 3,000ರೂ. ಪರಿಹಾರ ಧನವನ್ನು ಪಡೆಯಲು ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರು ನಾಳೆಯಿಂದ ಅರ್ಜಿ ಸಲ್ಲಿಸಬಹುದು. ನಾಳೆಯಿಂದ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ವೆಬ್ ಪೋರ್ಟಲ್ ಮೂಲಕ ಸೂಕ್ತ ದಾಖಲೆಗಳನ್ನು ಸಲ್ಲಿಸಿ ಈ ಪರಿಹಾರ ಧನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ. ಮೇ 27ರ ಮಧ್ಯಾಹ್ನದಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಪ್ರಾರಂಭವಾಗುವುದು. ಹೀಗೆ ಅರ್ಜಿ ಸಲ್ಲಿಸಿದ …

ಲಾಕ್ ಡೌನ್ ಪ್ಯಾಕೇಜ್ : ಆಟೋ, ಟ್ಯಾಕ್ಸಿ, ಕ್ಯಾಬ್ ಡ್ರೈವರ್ ಗಳು ನಾಳೆಯಿಂದಲೇ ಅರ್ಜಿ ಸಲ್ಲಿಸಬಹುದು Read More »

ಕೇವಲ ಒಬ್ಬ ಪ್ರಯಾಣಿಕನ ಹೊತ್ತು ಮುಂಬೈಯಿಂದ ದುಬೈಗೆ ಹಾರಿದ ವಿಮಾನ..!

ಮುಂಬೈ : ಮುಂಬೈಯಿಂದ ದುಬೈಗೆ ಪ್ರಯಾಣಿಸಲು ಎಮಿರೇಟ್ಸ್ ಫ್ಲೈಟ್ ಟಿಕೆಟ್ ಅನ್ನು ರೂ 18,000 ತೆತ್ತು ಖರೀದಿಸಿದ್ದ 40 ವರ್ಷದ ಭವೇಶ್ ಜವೇರಿ 360 ಸೀಟಿನ ಬೋಯಿಂಗ್ 777 ವಿಮಾನದಲ್ಲಿ ಮೇ 19ರಂದು ಏಕೈಕ ಪ್ರಯಾಣಿಕನಾಗಿದ್ದರು. ಮುಂಬೈಯಿಂದ ದುಬೈಗೆ ಇಲ್ಲಿಯ ತನಕ 240ಕ್ಕೂ ಅಧಿಕ ಬಾರಿ ಪ್ರಯಾಣಿಸಿರುವ ಅವರ ಇದೇ ಮೊದಲ ಬಾರಿ ಇಂತಹ ವಿಶೇಷ ಸವಲತ್ತು ಪಡೆದರು. ಕಳೆದ 20 ವರ್ಷಗಳಿಂದ ಅವರು ದುಬೈ ನಿವಾಸಿಯಾಗಿರುವ ಭವೇಶ್ ಈ ಬಗ್ಗೆ ‘ನಾನು ಹಲವು ಬಾರಿ ವಿಮಾನದಲ್ಲಿ …

ಕೇವಲ ಒಬ್ಬ ಪ್ರಯಾಣಿಕನ ಹೊತ್ತು ಮುಂಬೈಯಿಂದ ದುಬೈಗೆ ಹಾರಿದ ವಿಮಾನ..! Read More »

ಮಂಗಳೂರು | ಅಕ್ರಮವಾಗಿ ಸಾಗಿಸುತ್ತಿದ್ದ 200 ಕೆ.ಜಿ ಗಾಂಜಾ ಸಹಿತ ನಾಲ್ವರ ಬಂಧನ

ಮೀನು ಸಾಗಾಟದ ಕಂಟೇನರ್ ಲಾರಿ ಹಾಗೂ ಐಷಾರಾಮಿ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ 200 ಕೆ.ಜಿ ಗಾಂಜಾ ಸಹಿತ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಲಾಕ್ ಡೌನ್ ಸಂದರ್ಭವನ್ನು ಬಳಸಿ ಭಾರೀ ಪ್ರಮಾಣದಲ್ಲಿ ಗಾಂಜಾವನ್ನು ಕೇರಳಕ್ಕೆ ಸಾಗಿಸುತ್ತಿದ್ದಾಗ, ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಹಾಗೂ ಸುಮಾರು 200 ಕೆ.ಜಿ ಗಾಂಜಾ ವಶವನ್ನು ವಶಕ್ಕೆ ಪಡೆದಿದ್ದಾರೆ. ಕೇರಳದ ಕಾಸರಗೋಡು ನಿವಾಸಿಗಳಾದ ಮಹಮ್ಮದ್ ಫಾರೂಕ್, ಮೊಯಿದ್ದಿನ್ ನವಾಸ್, ಕುಶಾಲನಗರ ನಿವಾಸಿ ಸೈಯದ್ ಮಹಮ್ಮದ್ ಹಾಗೂ ಮಂಗಳೂರಿನ …

ಮಂಗಳೂರು | ಅಕ್ರಮವಾಗಿ ಸಾಗಿಸುತ್ತಿದ್ದ 200 ಕೆ.ಜಿ ಗಾಂಜಾ ಸಹಿತ ನಾಲ್ವರ ಬಂಧನ Read More »

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿಧಿವಶ

ಬೆಂಗಳೂರು: ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಬುಧವಾರ ನಿಧನರಾಗಿದ್ದಾರೆ. 104 ವರ್ಷ ವಯಸ್ಸಿನ ಅವರು ಇಂದು ಮಧ್ಯಾಹ್ನ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದ್ದಾರೆ. ಇತ್ತೀಚೆಗೆ ಕೋವಿಡ್ ಸೋಂಕಿಗೆ ಒಳಗಾಗಿದ್ದ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಿದ್ದರು. ಬಳಿಕ ಅವರು ಮನೆಯಲ್ಲಿ ವಿಶ್ರಾಂತಿಯಲ್ಲಿದ್ದರು.

ಮಾಸ್ಕ್ ಹಾಕಿಕೊಳ್ಳಲು ಹೇಳಿದ್ದೇ ತಪ್ಪಾಯ್ತಾ..? | ಮಾಸ್ಕ್ ಹಾಕಲು ಹೇಳಿದ ನಗರಸಭೆ ನೌಕರನ ಬರ್ಬರ ಹತ್ಯೆ

ಭದ್ರಾವತಿ: ಇತ್ತೀಚಿಗಷ್ಟೇ ಸಾಮಾಜಿಕ ಅಂತರ ಪಾಲಿಸುವಂತೆ ಹೇಳಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮೇಲೆ ಹಲ್ಲೆ ನಡೆದ ಘಟನೆ ವರದಿಯಾದ ಬೆನ್ನಲ್ಲೇ ಮಾಸ್ಕ್ ಹಾಕಿಕೊಳ್ಳಲು ಹೇಳಿದ್ದಕ್ಕೆ ನಗರಸಭೆ ಗುತ್ತಿಗೆ ನೌಕರನೋರ್ವನನ್ನು ಇರಿದು ಹತ್ಯೆ ಮಾಡಲಾದ ದುರ್ಘಟನೆ ಭದ್ರಾವತಿಯಲ್ಲಿ ನಡೆದಿದೆ. ಸುನಿಲ್ (24) ಮೃತಪಟ್ಟ ನಗರಸಭೆ ಗುತ್ತಿಗೆ ನೌಕರ ಎಂದು ತಿಳಿದುಬಂದಿದೆ. ಇದೇ ಘಟನೆಯಲ್ಲಿ ಗಾಯಗೊಂಡ ಶ್ರೀಕಂಠ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಡೆದದ್ದು ಏನು..?: ಸುನಿಲ್ ಹಾಗೂ ಮತ್ತೊಬ್ಬ ಸಹೋದ್ಯೋಗಿ ಶ್ರೀ ಕಂಠ ಮಂಗಳವಾರ ಸಂಜೆ ಜತೆಯಾಗಿ ಅನ್ವರ್ ಕಾಲೋನಿ …

ಮಾಸ್ಕ್ ಹಾಕಿಕೊಳ್ಳಲು ಹೇಳಿದ್ದೇ ತಪ್ಪಾಯ್ತಾ..? | ಮಾಸ್ಕ್ ಹಾಕಲು ಹೇಳಿದ ನಗರಸಭೆ ನೌಕರನ ಬರ್ಬರ ಹತ್ಯೆ Read More »

ವಧುವನ್ನು ಮಂಟಪದಲ್ಲೇ ಬಿಟ್ಟು ಕಾಲ್ಕಿತ್ತ ವರ | ಇದು ಅದ್ಧೂರಿ ಮದುವೆ ಎಫೆಕ್ಟ್

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಮದುವೆ ಸಮಾರಂಭಗಳಿಗೆ ನಿರ್ಬಂಧ ಹೇರಿದೆ. ಆದರೆ ಇಲ್ಲೊಬ್ಬ ಭೂಪ ಸರಳ ಮದುವೆಗೆ ಅನುಮತಿ ಪಡೆದು ಅದ್ಧೂರಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಹಾಗೆಯೇ ಅಧಿಕಾರಿಗಳು ಸ್ಥಳಕ್ಕೆ ಬರುತ್ತಿದ್ದಂತೆಯೇ ವಧುವನ್ನು ಮಂಟಪದಲ್ಲೇ ಬಿಟ್ಟು ಎಸ್ಕೆಪ್ ಆಗಿದ್ದಾನೆ. ಚಿಕ್ಕಮಗಳೂರು ಕಡೂರು ಕರಿಕಲ್ಲಳ್ಳಿ ಗ್ರಾಮದಲ್ಲಿ ಅದ್ಧೂರಿ ಮದುವೆಯನ್ನು ಆಯೋಜಿಸಲಾಗಿತ್ತು. 10 ಜನರಿಗೆ ಮಾತ್ರ ಅವಕಾಶ ಎನ್ನುವ ನಿಬಂಧನೆಯೊಂದಿಗೆ ಈ ಮದುವೆಗೆ ಅನುಮತಿ ನೀಡಲಾಗಿತ್ತು. ಆದರೆ ಯಾವಾಗ ಮದುವೆ …

ವಧುವನ್ನು ಮಂಟಪದಲ್ಲೇ ಬಿಟ್ಟು ಕಾಲ್ಕಿತ್ತ ವರ | ಇದು ಅದ್ಧೂರಿ ಮದುವೆ ಎಫೆಕ್ಟ್ Read More »

error: Content is protected !!
Scroll to Top