ಲೇಡಿ ಜತೆ ಸಿಡಿಯಲ್ಲಿರುವುದು ನಾನೇ | ಒಪ್ಪಿಗೆಯ ಲೈಂಗಿಕ ಕ್ರಿಯೆಯನ್ನು ಒಪ್ಪಿಕೊಂಡ್ರಾ ಜಾರಕಿ ?

ರಾಜಕಾರಣದಲ್ಲಿ ದೊಡ್ಡಸಂಚಲನ ಸೃಷ್ಟಿಸಿದ ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿ.ಡಿ ಪ್ರಕರಣಕ್ಕೆ ತಿರುವು ಸಿಕ್ಕಿದೆ.ಈ ಕುರಿತು ಸುದ್ದಿ ಮಾದ್ಯಮಗಳ ವರದಿಯಂತೆ ರಮೇಶ್ ಜಾರಕಿಹೊಳಿ ಸಿಡಿಯ ದೃಶ್ಯವಳಿಗಳನ್ನು ನಿಜವೆಂದು ಒಪ್ಪಿಕೊಂಡಿದ್ದಾರೆ ಎನ್ನಲಗಿದೆ.

ತನಿಖಾಧಿಕಾರಿಗಳ ಮುಂದೆ ಗುಪ್ತವಾಗಿ ಹಾಜರಾಗಿ ವಿಚಾರಣೆ ಎದುರಿಸಿದ್ದ ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವುದು ನಾನೇ. ಮತ್ತು ನನ್ನ ಜತೆಗಿದ್ದ ಯುವತಿಯ ಪರಿಚಯ ಇದೆ ಎಂದು ಹೇಳುವ ಮೂಲಕ ಈ ಹಿಂದಿನ ತನ್ನ ಹೇಳಿಕೆಗಳಿಗೇ ಉಲ್ಟಾ ಹೊಡೆದ ಹಾಗಿದೆ.

ಈ ಹಿಂದೆಲ್ಲ ಸಿಡಿಯಲ್ಲಿರುವ ಯುವತಿ ನನಗೆ ಯಾರು ಎಂಬುದೇ ಗೊತ್ತಿಲ್ಲ ಎಂದು ಅಲ್ಲಗಳೆಯುತ್ತಿದ್ದರು.

‘ನಾನು ಸಚಿವನಾಗಿದ್ದಾಗ, ಜಲಾಶಯಗಳ ವಿಡಿಯೊ ಚಿತ್ರೀಕರಣ ಮಾಡುವ ವಿಚಾರವಾಗಿ ಯುವತಿಯೇ ನನ್ನನ್ನು ಸಂಪರ್ಕಿಸಿದ್ದಳು. ನನ್ನ ಮೊಬೈಲ್‌ ನಂಬರ್ ಪಡೆದು ಮಾತನಾಡಲಾರಂಭಿಸಿದ್ದಳು. ಉತ್ತರ ಕರ್ನಾಟಕದವಳು ಎಂದು ಹೇಳಿದ್ದಕ್ಕೆ ನಾನೂ ಮಾತನಾಡುತ್ತಿದ್ದೆ’ ಎಂದು ರಮೇಶ ಹೇಳಿರುವುದಾಗಿ ಎಸ್‌ಐಟಿ ಮೂಲಗಳು ತಿಳಿಸಿವೆ.

‘ಪ್ರತಿ ಬಾರಿ ಕರೆ ಮಾಡಿದಾಗಲೂ ಯುವತಿ ಲೈಂಗಿಕವಾಗಿ ಮಾತನಾಡಿ ಪ್ರಚೋದಿಸುತ್ತಿದ್ದಳು. ಆಕೆಯ ಮಾತು ಹಾಗೂ ನಡತೆ ನೋಡಿ ಸಲುಗೆಯಿಂದ ಮಾತನಾಡಲಾರಂಭಿಸಿದೆ. ಕೆಲ ಬಾರಿ ಯುವತಿಯೇ ನಗ್ನವಾಗಿ ವಿಡಿಯೊ ಕರೆ ಮಾಡಿ ಅಂಗಾಂಗ ತೋರಿಸುತ್ತಿದ್ದಳು. ಅದರಿಂದಲೂ ನಾನು ಪ್ರಚೋದನೆಗೊಂಡಿದ್ದೆ. ಆಕೆ ಒತ್ತಾಯದಿಂದ ನನ್ನನ್ನು ಭೇಟಿಯಾಗಬೇಕೆಂದು ಕೆಲ ಬಾರಿ ಮಲ್ಲೇಶ್ವರದಲ್ಲಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯದ ಫ್ಲ್ಯಾಟ್‌ಗೆ ಬಂದಿದ್ದಳು. ಅದೇ ಸಂದರ್ಭದಲ್ಲಿ ಆಕೆಯೇ ನನ್ನ ಜೊತೆಗೆ ಲೈಂಗಿಕ ಸಂಪರ್ಕ ನಡೆಸಲು ಒಪ್ಪಿದ್ದಳು. ಅದೇ ಕಾರಣಕ್ಕೆ ಲೈಂಗಿಕ ಸಂಪರ್ಕ ನಡೆಸಿದೆ.’

‘ನಮ್ಮಿಬ್ಬರ ಲೈಂಗಿಕ ಸಂಪರ್ಕದ ವಿಡಿಯೊವನ್ನು ಯಾರು ಚಿತ್ರೀಕರಣ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಕಾಣದ ಕೈಗಳು ಷಡ್ಯಂತ್ರ ರೂಪಿಸಿ, ಹನಿಟ್ರ್ಯಾಪ್‌ಗೆ ಬೀಳಿಸಿದ್ದಾರೆ. ಕೋಟ್ಯಂತರ ರೂಪಾಯಿ ಹಣಕ್ಕೂ ಕೆಲವರು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ನನ್ನ ಹೆಸರಿಗೆ ಕಳಂಕ ತಂದು ರಾಜಕೀಯವಾಗಿ ಮುಗಿಸುವ ಉದ್ದೇಶ ಇದರ ಹಿಂದಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿರುವ ಮಾಹಿತಿಯೂ ಇದೆ. ಸಹಮತದ ಲೈಂಗಿಕ ಸಂಪರ್ಕವನ್ನೇ ಅತ್ಯಾಚಾರವೆಂದು ಬಿಂಬಿಸಿ ನನ್ನನ್ನು ಆರೋಪಿಯನ್ನಾಗಿ ಮಾಡಲು ಹೊರಟಿರುವವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದೂ ರಮೇಶ ಹೇಳಿರುವುದಾಗಿ ಎಸ್‌ಐಟಿ ಮೂಲಗಳು ತಿಳಿಸಿವೆ.

Leave A Reply

Your email address will not be published.