ದಕ್ಷಿಣ ಕನ್ನಡದಲ್ಲಿ 2 ದಿನ ಮಾತ್ರ ದಿನಸಿ ಖರೀದಿಗೆ ಅವಕಾಶ ?! | ಮೇ.24 ನಂತರ ಯಾವುದೇ ಮದುವೆ ಇಲ್ಲ ?!!!

ದಕ್ಷಿಣ ಕನ್ನಡದಲ್ಲಿ ಇನ್ನು ಮುಂದೆ ಕೇವಲ 2 ದಿನ ಮಾತ್ರ ದಿನಸಿ ಖರೀದಿಗೆ ಅವಕಾಶ ಎಂಬ ಸುದ್ದಿ ಸಿಕ್ಕಿದ್ದು, ಅದರ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ.

ಈ ಹೊಸ ಮಾರ್ಗಸೂಚಿ ಯಾವ ದಿನದಿಂದ ಅನ್ವಯ ಆಗಲಿದೆ ಎನ್ನುವುದು ಶೀಘ್ರವೇ ತಿಳಿದು ಬರಲಿದೆ. ಬಹುಶ: ಅಥವಾ ನಾಡಿದ್ದಿರಿಂದ ವಾರಕ್ಕೆರಡು ದಿನ ಮಾತ್ರ ಖರೀದಿಗೆ ಅವಕಾಶ ಇರಬಹುದು ಎನ್ನಲಾಗುತ್ತಿದೆ. ಉಳಿದ ದಿನಗಳಲ್ಲಿ ಟೋಟಲ್ ಲಾಕ್ ಡೌನ್ ಇರುವ ಸಂಭವ ಹೆಚ್ಚು.

ಆ ಎರಡು ದಿನಗಳಲ್ಲಿ ಮದ್ಯ ಮಾಂಸ ಮಾರಾಟಕ್ಕೆ ಅವಕಾಶ ಇದೆಯಾ ಇಲ್ಲವೇ ಎಂಬ ಬಗ್ಗೆ ಇನ್ನೂ ಖಚಿತತೆ ಇಲ್ಲ. ಬಹುಶ: ಎರಡು ದಿನಗಳಲ್ಲಿ ಮದ್ಯ ಮಾಂಸಕ್ಕೆ ಅವಕಾಶ ಇರುತ್ತದೆ.

ಅಲ್ಲದೆ ಮೇ.24 ರ ನಂತರ ಯಾವುದೇ ಮದುವೆಯನ್ನು ನಡೆಸದಂತೆ ಕಟ್ಟು ನಿಟ್ಟಿನ ಸೂಚನೆ ನೀಡುವುದು ಪಕ್ಕಾ ಎನ್ನಲಾಗಿದೆ.

ಈಗಾಗಲೇ ನಮ್ಮ ಅಕ್ಕಪಕ್ಕದ ಹಲವು ಜಿಲ್ಲೆಗಳು ಈ ತರದ ಮಾರ್ಗಸೂಚಿಯನ್ನು ಅಳವಡಿಸಿವೆ. ಸೋಂಕು ಜಾಸ್ತಿ ಇರುವ ನಮ್ಮಲ್ಲೂ ಇದೇ ರೀತಿಯ ಆದೇಶ ಬರುವ ಸಂಭವ ಹೆಚ್ಚು.

ಸೋಂಕು ಹೆಚ್ಚಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಸಭೆ ನಡೆಸಿದ್ದರು. ಕರ್ನಾಟಕದ 17 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಇದರಲ್ಲಿ ಪಾಲ್ಗೊಂಡಿದ್ದರು.

ತಮ್ಮ ಜಿಲ್ಲೆಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಆಯಾ ಜಿಲ್ಲಾಧಿಕಾರಿಗಳಿಗೆ ಅವಕಾಶ ನೀಡಿದ್ದರು.

ಅದರಂತೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮೇ 19ರ ಬೆಳಗ್ಗೆ 10 ರಿಂದ ಮೇ 24ರ ಬೆಳಗ್ಗೆ 6ರವರೆಗೆ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ತುರ್ತು ಸೇವೆಗಳಿಗೆ ಮಾತ್ರ ವಿನಾಯಿತಿ ಇದ್ದು, ಜನರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಹಾಸನ ಜಿಲ್ಲೆಯಲ್ಲಿ ವಾರದ 4 ದಿನ ಸಂಪೂರ್ಣ ಲಾಕ್‍ಡೌನ್ ಜಾರಿಗೊಳಿಸಲು ನಿರ್ಧರಿಸಲಾಗಿದ್ದು ಸೋಮವಾರ, ಬುಧವಾರ, ಶುಕ್ರವಾರ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅವಕಾಶ ಇರುತ್ತದೆ.

ಕಲಬುರಗಿ ಜಿಲ್ಲೆಯಲ್ಲಿ ಮೇ 20ರ ಬೆಳಗ್ಗೆ 6 ಗಂಟೆಯಿಂದ ಮೇ 23ರ ಬೆಳಗ್ಗೆ 6 ಗಂಟೆ ವರೆಗೆ ಅತ್ಯಗತ್ಯ ಸೇವೆಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ವಿ. ವಿ. ಜ್ಯೋತ್ಸ್ನಾ ಆದೇಶ ಹೊರಡಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಜಿಲ್ಲಾಯಾದ್ಯಂತ ಮೇ 17ರ ಬೆಳಗ್ಗೆ 6 ಗಂಟೆಯಿಂದ ಮೇ 21ರ ರಾತ್ರಿ 12 ಗಂಟೆ ತನಕ ಸಂಪೂರ್ಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ ವಾರ ಗುರುವಾರದಿಂದ ಭಾನುವಾರದ ತನಕ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿತ್ತು. ಈ ವಾರವೂ ಅದನ್ನು ಮುಂದುವರಿಸಿ ಪ್ರಕಟಣೆಯನ್ನು ಹೊರಡಿಸಲಾಗಿದೆ.

ರಾಯಚೂರು,ಕಲಬುರ್ಗಿಯಲ್ಲೂ ಕಠಿಣ ಲಾಕ್ ಡೌನ್ ಜಾರಿಗೊಳಿಸಿದ್ದು,ಅದರಂತೆ ದ.ಕ.ದಲ್ಲೂ ಕಠಿಣ ಕ್ರಮ ಇನ್ನೆರಡು ದಿನಗಳಲ್ಲಿ ಜಾರಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸ್ಪಷ್ಟನೆ : ದಕ್ಷಿಣ ಕನ್ನಡದಲ್ಲಿ ಯಾವುದೇ ಹೊಸ ಮಾರ್ಗಸೂಚಿ ಹೊರತರಲಾಗಿಲ್ಲ ಎಂದು ಇದೀಗ ಜಿಲ್ಲಾಧಿಕಾರಿಯವರು ಸ್ಪಷ್ಟನೆ ನೀಡಿದ್ದಾರೆ. ಅದರ ಬಗ್ಗೆ ಹೆಚ್ಚಿನ ವಿವರ ತಿಳಿಯಲುುುು ಕೆಳಗಿನ ಲಿಂಕ್ಕ್ನನನೋಡಿ.

ನಮ್ಮ ವಾಟ್ಸ್ ಅಪ್ ಗ್ರೂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ

Leave A Reply

Your email address will not be published.