ಶಿರಾಡಿ : ಅಂತ್ಯಸಂಸ್ಕಾರದಲ್ಲೂ ಪ್ರಚಾರದ ತೆವಲು | ಪಿಎಫ್ಐ‌ಗೆ ಅಂಬ್ಯುಲೆನ್ಸ್ ಚಾರ್ಜ್ ನೀಡಲಾಗಿದ್ದರೂ ಅಪಪ್ರಚಾರ

ಕೊರೋನಾದಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರ ಪಂಚಾಯತ್ ವತಿಯಿಂದ ನಡೆದಿದೆಯಾದರೂ ಪಿ.ಎಫ್.ಐ ನವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶಿರಾಡಿ ಗ್ರಾ.ಪಂ ಸದಸ್ಯರು ಸ್ಪಷ್ಟನೆ ನೀಡಿದ್ದಾರೆ.

ಶಿರಾಡಿ ಗ್ರಾ.ಪಂ. ವ್ಯಾಪ್ತಿಯ ಸಂಪ್ಯಾಡಿ ಎಂಬಲ್ಲಿ ಕೊರೋನಾ ದಿಂದ 80 ವರ್ಷದ ವೃದ್ದೆ ಮೃತಪಟ್ಟಿದ್ದು ಅವರ ಅಂತ್ಯಸಂಸ್ಕಾರವನ್ನು ಮೃತಪಟ್ಟವರ ಮನೆಯವರು ಮತ್ತು ಶಿರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರ ನೇತೃತ್ವದಲ್ಲಿ ನಡೆಸಲಾಗಿದೆ.

ಆದರೆ ಪಿ.ಎಫ್.ಐ ಸಂಘಟನೆಯ ವರು ತಾವು ಅಂತ್ಯಸಂಸ್ಕಾರ ಮಾಡಿದ್ದೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ್ದಾರೆ.ಇಂತಹ ಬೆಳವಣಿಗೆ ಸರಿಯಲ್ಲ ಎಂದು ಶಿರಾಡಿ ಗ್ರಾ.ಪಂ.ಸದಸ್ಯರಾದ ರಾಧಾ ಹಾಗೂ ಲಕ್ಷ್ಮಣ ಗೌಡ ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೃತ ವ್ಯಕ್ತಿಯ ಶವವನ್ನು ವೆನ್ಲಾಕ್ ನಿಂದ ತಂದಿದ್ದು ಇದಕ್ಕೆ ಪಿ.ಎಫ್. ಐ.ಸಂಘಟನೆಯವರು 3500 ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ.

ಶವ ಬರುವ ವೇಳೆ ಅಂತ್ಯಸಂಸ್ಕಾರದ ಎಲ್ಲ ಏರ್ಪಾಡುಗಳನ್ನು ಮಾಡಲಾಗಿತ್ತು.ಪಿ.ಎಫ್.ಐ ಸಂಘಟನೆಯವರು ಶವ ಇಟ್ಟು ಹಣ ಪಡೆದುಕೊಂಡು ಫೋಟೋ ತೆಗೆದುಕೊಂಡು ಹೋಗಿದ್ದಾರೆ. ಸಂಘಟನೆಯವರ ಸೇವೆಯ ಹೆಸರಿನಲ್ಲಿ ಈ ರೀತಿ ಪ್ರಚಾರ ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ಎಲ್ಲಾ ಸಂಘಟನೆಗಳಿಗೆ ಒಂದು ಮನವಿ

ಫೋಟೋ, ಪೋಸ್ಟರ್ ಹಾಕಿ ಹೆಣ ಸುಟ್ಟದ್ದನ್ನು ಪ್ರಚಾರ ಮಾಡುವುದನ್ನು ಜನ ಇನ್ನಾದರೂ ಬಿಡಬೇಕು. ಇಲ್ಲದೆ ಹೋದರೆ ಜನ ಒಂದು ದಿನ ನಿಮ್ಮನ್ನು ” ಪುನ ಪೊತ್ತ ಬುನಾಯೆ ” ಎಂದು ಗುರುತಿಸುವ ಕಾಲ ಬರಬಹುದು. ಎಚ್ಚರವಿರಲಿ.

Leave A Reply

Your email address will not be published.