ಚಂಡಮಾರುತದ ಮಳೆಗೆ ಸಂಪೂರ್ಣ ತೋಯ್ದು ಅರೆನಗ್ನಳಾಗಿ ಫೋಟೋಶೂಟ್ ಮಾಡಿದ ನಟಿ

ಚಂಡಮಾರುತದಿಂದ ಜನರ ಜೀವನ ತತ್ತರಿಸಿ ಹೋಗಿದ್ದರೆ ಇಲ್ಲಿ ನಟಿಯೊಬ್ಬಳು ಅರೆ ನಗ್ನಳಾಗಿ ಫೋಟೋಶೂಟ್ ಮಾಡಿಸಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸುರಿಯುತ್ತಿದ್ದ ಭಾರೀ ಮಳೆಗೆ ಮನೆಯ ಮುಂದೆ ಬಿದ್ದಿದ್ದ ಮರದ ಕೊಂಬೆಗಳ ನಡುವೆ ಸಂಪೂರ್ಣ ಒದ್ದೆಯಾಗಿ ನರ್ತಿಸಿದ್ದಳು ಈ ನಟಿ.ಹೌದು, ಕಿರುತೆರೆ ನಟಿ ದೀಪಿಕಾ ಸಿಂಗ್ ತಮ್ಮ ಮನೆ ಮುಂದೆ ಬಿದ್ದ ಮರದ ಮೇಲೆ ಕುಳಿತು ಚಂಡಮಾರುತ ನಿಲ್ಲಲಿ ಎಂದು ಕಾಯುವ ಬದಲು, ‘ ಇರುವ ಪ್ರಕೃತಿಯನ್ನು ಹಾಗೂ ಮಳೆಯನ್ನು ಅಪ್ಪಿಕೊಳ್ಳಬೇಕು. ಅದೇ ಜೀವನ ‘ ಎಂದು ಶೀರ್ಷಿಕೆ ನೀಡುವ ಮೂಲಕ ತಮ್ಮ ಫೋಟೋಶೂಟ್‍ನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಮಳೆಯಲ್ಲಿ ಡ್ಯಾನ್ಸ್ ಮಾಡುತ್ತಾ ಮೂಡಿಗೆ ಬಂದು ವಿಡಿಯೋ ಮಾಡಿರುವ ದೀಪಿಕಾ ಪ್ರಕೃತಿಯನ್ನು ಸ್ವೀಕರಿಸಿ ಎಂದು ಶೀರ್ಷಿಕೆ ನೀಡಿದ್ದಾರೆ. ಮಳೆಯಲ್ಲಿ ಡ್ಯಾನ್ಸಿಂಗ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಟಿ ದೀಪಿಕಾ ಸಿಂಗ್ ಮುಂಬೈನಲ್ಲಿ ಸುರಿಯುತ್ತಿರುವ ಮಳೆಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ತೌಕ್ತೆ ಚಂಡಮಾರುತದಿಂದ ಆಗುತ್ತಿರುವ ಜೀವ ಹಾನಿ ಹಾಗೂ ಜನರು ಅನುಭವಿಸುತ್ತಿರುವ ಕಷ್ಟ ಗೊತ್ತೇ ಇದೆ. ಹೀಗಿರುವಾಗಲೇ ನಟಿ ದೀಪಿಕಾ ಮಳೆಯಲ್ಲಿ ಹೀಗೆಲ್ಲಾ ಅರೆ ಬರೆ ಫೋಟೋಶೂಟ್ ಮಾಡಿಸಿಕೊಂಡಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ.

Leave A Reply

Your email address will not be published.