ರಾಜ್ಯಕ್ಕೆ ಮಂಗಳವಾರ ಕೊಂಚ ರಿಲೀಫ್ | 30000 ಹೊಸ ಸೋಂಕು, ಅದರ ಡಬ್ಬಲ್ ನಷ್ಟು ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್

ರಾಜ್ಯಕ್ಕೆ ನಿನ್ನೆ ಮಂಗಳವಾರ ಒಂದಷ್ಟು ರಿಲೀಫ್ ಕೊಡುವ ದಿನ. ರಾಜ್ಯದಲ್ಲಿ ನಿನ್ನೆ ಒಟ್ಟು 30,309 ಜನರಿಗೆ ಹೊಸದಾಗಿ ಕೊರೋನಾ ಸೋಂಕು ದೃಢಪಟ್ಟಿದ್ದರೆ, ಹೆಚ್ಚು ಕಮ್ಮಿಅದರ ದುಪ್ಪಟ್ಟು ಮಂದಿ ಅಂದರೆ 58,395 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ಒಂದರಲ್ಲೇ 8676 ಜನರಿಗೆ ಸೋಂಕು ಪತ್ತೆಯಾಗಿದೆ.

ರಾಜ್ಯದಲ್ಲಿ ನಿನ್ನೆ ಒಟ್ಟು  525 ಜನರು ಒಂದೇ ದಿನ ಸಾವಿಗೀಡಾಗಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ಸತ್ತವರ ಸಂಖ್ಯೆ ಒಟ್ಟು 298 ಜನರು.

ಇದರೊಂದಿಗೆ ಮೃತರ ಒಟ್ಟು ಸಂಖ್ಯೆ 22838ಕ್ಕೆ ಏರಿಕೆಯಾಗಿದೆ. ಸೋಂಕಿನ ಖಚಿತ ಪ್ರಕರಣಗಳ ಶೇಕಡಾವಾರು ಪ್ರಮಾಣ ಶೇ. 32.50 ರಷ್ಟಿದ್ದು, ಮರಣ ಪ್ರಮಾಣ ಶೇ.1.73 ರಷ್ಟಿದೆ.
ಆಸ್ಪತ್ರೆಯಿಂದ ಬಿಡುಗಡೆಯಾದವರ ಒಟ್ಟು ಸಂಖ್ಯೆ 1674487 ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 575028 ಆಗಿದೆ ಎಂದು

Leave A Reply

Your email address will not be published.