ಈ ನಟಿಯ ಫೋಟೋ ನೋಡಿ ಆತ ‘ ಮೊಲೆ ಸೂಪರ್ ‘ ಅಂದಿದ್ದ | ಅದಕ್ಕೆ ಆಕೆ ಕೊಟ್ಟ ಪ್ರತ್ಯುತ್ತರ ಹೇಗಿತ್ತು ಗೊತ್ತೆ ?!

ಮಲಯಾಳಂ ನಟಿ ಅಶ್ವಥಿ ಶ್ರೀಕಾಂತ್ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಚಟುವಟಿಕೆಯಲ್ಲಿ ಇರುತ್ತಾರೆ. ಮೊನ್ನೆ ಕೂಡ ಆಕೆ ಫೇಸ್ಬುಕ್ ಗೆ ಬಂದು, ತಾನು ತಾಯಿಯಾಗುವ ವಿಷಯವನ್ನು ಹೇಳಿಕೊಂಡಿದ್ದರು. ಆಗ ಆಕೆ ತನ್ನದೊಂದು ಫೋಟೋವನ್ನು ಫೇಸ್ಬುಕ್ ಗೆ ಅಪ್ಲೋಡ್ ಮಾಡಿದ್ದರು. ಆಕೆ ಮಾಡಿದ ಪೋಸ್ಟ್ ಗೆ ನಹಾಬ್ ನಹಾಬ್ ಎಂಬ ಯುವಕ ನೈಸ್ ಬೂಬ್ಸ್, ಅಂದ್ರೆ ‘ಸೂಪರ್ ಮೊಲೆ’ ಎಂದು ಕಮೆಂಟ್ ಮಾಡಿದ್ದ.

ಆ ವ್ಯಕ್ತಿಗೆ ತಕ್ಷಣ ಪ್ರತಿಕ್ರಿಯಿಸಿದ್ದಾರೆ ನಟಿ ಅಶ್ವಥಿ.

“ಹೌದು, ಅದು ಸೂಪರ್ ಆಗಿರಲೇಬೇಕು. ಏಕೆಂದರೆ ಇನ್ನೆರಡು ವರ್ಷ ನಾನು ನನ್ನ ಮಗುವಿಗೆ ಮೊಲೆಯೂಡಿಸಬೇಕಿದೆ. ಆ ಮೂಲಕ ತಾಯಿಯಾಗಿ ನಮ್ಮ ಜೀವನವನ್ನೇ ನಾವು ಧಾರೆ ಎರೆಯುತ್ತೇವೆ. ಹಾಗಾಗಿ ಎಲ್ಲಾ ಮಹಿಳೆಯರ ಮೊಲೆಯೂ ಸೂಪರ್ ಆಗಿರುತ್ತದೆ. ನಿನ್ನ ತಾಯಿಯನ್ನು ಕೂಡ ಸೇರಿಸಿ

ಎಂದು ಮಾರ್ಮಿಕವಾಗಿ ಮತ್ತು ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಆ ಮೂಲಕ ಅಸಂಬದ್ಧ ಮತ್ತು ಅಶ್ಲೀಲವಾಗಿ ಪ್ರಶ್ನಿಸುವ ಜನರಿಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರವನ್ನು ನೀಡಿದ್ದಾರೆ. ಇದಕ್ಕಿಂತ ಸರಿಯಾದ ಉತ್ತರವನ್ನು ಬಹುಶ: ಬೇರಾರೂ ನೀಡಲಿಕ್ಕಿಲ್ಲ. ಆಕೆ ನೀಡಿದ ಉತ್ತರಕ್ಕೆ ಒಟ್ಟಾರೆ ಸಾಮಾಜಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

1 Comment
  1. Sainatha Rai KS says

    It’s wrong and unacceptable.
    ಏನೇ ಆದರೂ ಅವಳ ಮೊಲೆಗಳ ಕಾಮೆಂಟ್ಸ್ ಮಾಡಬಾರದಿತ್ತು. ಅದು ಅಕ್ಷಮ್ಯ.

Leave A Reply

Your email address will not be published.