ನಾಳೆ ಮದುವೆಯಾಗಬೇಕಾಗಿದ್ದ ಯುವಕ ಕೋವಿಡ್‌ ನಿಂದ ಸಾವು

ನಾಳೆ ಮದುವೆಯಾಗಬೇಕಿದ್ದ ಯುವಕನೋರ್ವ ಕೋವಿಡ್ ಸೋಂಕಿಗೆ ಬಲಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತ ಯುವಕನನ್ನು ಮೈಸೂರಿನ ಹೆಬ್ಬಾಳು ನಿವಾಸಿ ನವೀನ್ (31) ಎಂದು ಗುರುತಿಸಲಾಗಿದೆ.

ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ನವೀನ್ ಗೆ ಮಾರ್ಚ್ 7 ರಂದು ನಿಶ್ಚಿತಾರ್ಥವಾಗಿತ್ತು.

ಮೇ. 19 ವಿವಾಹ ನಿಗದಿಯಾಗಿತ್ತು. ಕೆಮ್ಮು ಕಾಣಿಸಿಕೊಂಡ ಕಾರಣ ನವೀನ್ ಕೋವಿಡ್ ಪರೀಕ್ಷೆಗೆ ಒಳಗಾದಾಗ ಸೋಂಕಿರುವುದು ದೃಢಪಟ್ಟಿತ್ತು. ಉಸಿರಾಟದ ತೊಂದರೆಯಿಂದಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆದರೆ, ಚಿಕಿತ್ಸೆ ಫಲಕಾರಿಯಾಗದೆ ನವೀನ್ ಮೃತಪಟ್ಟಿದ್ದಾರೆ.

Leave A Reply

Your email address will not be published.