ಲಸಿಕೆ ಮನೆಗೇ ಬಂದು ನೀಡುವ ಭರವಸೆ | ಆಧಾರ್ ನಂಬರ್, ಮೊಬೈಲ್ ಗೆ ಬಂದ ‘ ಪಿನ್ ‘ ಕೇಳಿ ಹಣ ಬಾಚುವ ಆನ್ ಲೈನ್ ವಂಚನೆ ಶುರು !

ಸಮಾಜದ ಮತ್ತು ವ್ಯಕ್ತಿಗಳ ಪ್ರತಿಯೊಂದು ಕಷ್ಟವು ಕೂಡ ವಂಚಕರಿಗೆ ಒಂದು ಹೊಚ್ಚ ಹೊಸ ಬಂಡವಾಳ ಮತ್ತು ವ್ಯಾಪಕವಾದ ಅವಕಾಶ !!
ಹೌದು, ಕೋವಿಡ್ ಸಂಕಷ್ಟದ ಸರ್ವ ಲಾಭವನ್ನು ವಂಚಕ ಜಗತ್ತು ಈಗಾಗಲೇ ತಿಂದು ತೇಗಿದೆ. ಈಗ   ವಾಕ್ಸಿನ್ ಲಭ್ಯತೆ ಕುರಿತು ಅನೇಕರಲ್ಲಿ ಮಾಹಿತಿ ಕೊರತೆಯಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಗುಂಪೊಂದು ಹೊಸ ರೀತಿಯ ಸೈಬರ್ ದರೋಡೆಗೆ ಸಂಚು ರೂಪಿಸುತ್ತಿವೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನೀವು ನಿಮ್ಮ ಪಾಡಿಗೆ ಯಾವುದೋ ಕೆಲಸದಲ್ಲಿ ಬಿಜಿ ಆಗಿರುತ್ತೀರಿ. ಆಗ ಯಾರೋ ಅನಾಮಿಕರು ನಿಮಗೆ ಕರೆ ಮಾಡಿ ಕರೆ ಮಾಡಿ ‘ನೀವು ಕೊರೋನಾ ಲಸಿಕೆ ತೆಗೆದುಕೊಂಡಿದ್ದೀರಾ?’ ಎಂದು ಪ್ರಶ್ನೆ ಕೇಳುತ್ತಾರೆ. ಇಲ್ಲ ಅಂದರೆ ಅಲ್ಲಿಂದಲೇ ಬ್ಲೇಡ್ ಆಡಿಸಲು ಶುರು. ಒಂದು ವೇಳೆ ನೀವು ಒಂದು ಡೋಸ್ ಲಸಿಕೆ ಹಾಕಿಸಿಕೊಂಡಿದ್ದರೆ, ಆಗ ಎರಡನೇ ಡೋಸ್ ಬಗ್ಗೆ ಮಾತಾಡುತ್ತಾರೆ. ‘ ನೀವು ಇನ್ನು ಆಸ್ಪತ್ರೆಗೆ ಹೋಗಿ ಲಸಿಕೆ ಪಡೆದುಕೊಳ್ಳುವ ಅಗತ್ಯ ಇಲ್ಲ. ಮನೆಯಲ್ಲಿಯೇ ಇರಿ ಸೇಫ್ ಆಗಿರಿ. ಆಸ್ಪತ್ರೆಗೆ ಹೋದರೆ ಅಲ್ಲಿ ನೂರಾರು ಜನರು ಬರುತ್ತಾರೆ.’ ಅತ್ತಲಿನಿಂದ ನಿಮ್ಮನ್ನು ಕೇರ್ ಮಾಡುವ ಕರೆ.
ಸಮಾಜದ ಮತ್ತು ವ್ಯಕ್ತಿಗಳ ಪ್ರತಿಯೊಂದು ಕಷ್ಟವು ಕೂಡ ವಂಚಕರಿಗೆ ಒಂದು ಹೊಚ್ಚ ಹೊಸ ಬಂಡವಾಳ ಮತ್ತು ವ್ಯಾಪಕವಾದ ಅವಕಾಶ !!
ಹೌದು, ಕೋವಿಡ್ ಸಂಕಷ್ಟದ ಸರ್ವ ಲಾಭವನ್ನು ವಂಚಕ ಜಗತ್ತು ಈಗಾಗಲೇ ತಿಂದು ತೇಗಿದೆ. ಈಗ   ವಾಕ್ಸಿನ್ ಲಭ್ಯತೆ ಕುರಿತು ಅನೇಕರಲ್ಲಿ ಮಾಹಿತಿ ಕೊರತೆಯಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಗುಂಪೊಂದು ಹೊಸ ರೀತಿಯ ಸೈಬರ್ ದರೋಡೆಗೆ ಸಂಚು ರೂಪಿಸುತ್ತಿವೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ನೀವು ನಿಮ್ಮ ಪಾಡಿಗೆ ಯಾವುದೋ ಕೆಲಸದಲ್ಲಿ ಬಿಜಿ ಆಗಿರುತ್ತೀರಿ. ಆಗ ಯಾರೋ ಅನಾಮಿಕರು ನಿಮಗೆ ಕರೆ ಮಾಡಿ ಕರೆ ಮಾಡಿ ‘ನೀವು ಕೊರೋನಾ ಲಸಿಕೆ ತೆಗೆದುಕೊಂಡಿದ್ದೀರಾ?’ ಎಂದು ಪ್ರಶ್ನೆ ಕೇಳುತ್ತಾರೆ. ಇಲ್ಲ ಅಂದರೆ ಅಲ್ಲಿಂದಲೇ ಬ್ಲೇಡ್ ಆಡಿಸಲು ಶುರು. ಒಂದು ವೇಳೆ ನೀವು ಒಂದು ಡೋಸ್ ಲಸಿಕೆ ಹಾಕಿಸಿಕೊಂಡಿದ್ದರೆ, ಆಗ ಎರಡನೇ ಡೋಸ್ ಬಗ್ಗೆ ಮಾತಾಡುತ್ತಾರೆ. ‘ನೀವು ಇನ್ನು ಆಸ್ಪತ್ರೆಗೆ ಹೋಗಿ ಲಸಿಕೆ ಪಡೆದುಕೊಳ್ಳುವ ಅಗತ್ಯ ಇಲ್ಲ. ಮನೆಯಲ್ಲಿಯೇ ಇರಿ, ಸೇಫ್ ಆಗಿರಿ. ಆಸ್ಪತ್ರೆಗೆ ಹೋದರೆ ಅಲ್ಲಿ ನೂರಾರು ಜನರು ಬರುತ್ತಾರೆ.’ ಅತ್ತಕಡೆಯಿಂದ ನಿಮ್ಮನ್ನು ಕೇರ್ ಮಾಡುವ ಕರೆ.

ಸಾಮಾನ್ಯವಾಗಿ ಯಾರೇ ಆದರೂ ಮನೆಗೆ ಬಂದು ಲಸಿಕೆ ಹಾಕುವ ಇದ್ದರೆ ಯಾಕೆ ಬೇಡ ಅನ್ನುತ್ತೇವೆ. ಸುಲಭವಾಗಿ ಮನೆಯಲ್ಲಿಯೇ ತೆಗೆದುಕೊಳ್ಳುವ ಆಯ್ಕೆಯನ್ನು ಸಹಜವಾಗಿ ಮುಂದಿಡುತ್ತೇವೆ. ಆಗ ಕರೆ ಮಾಡಿದವರು ನಾವು ನಿಮ್ಮಮನೆಗೆ ಬಂದು ಲಸಿಕೆ ಕೊಡುತ್ತೇವೆ. ಅದಕ್ಕಾಗಿ ‘ನಿಮ್ಮ ನೋಂದಣಿ ಆಗಬೇಕಿದೆ. ನಿಮ್ಮ ಆಧಾರ್ ನಂಬರ್ ಕೊಡಿ, ಫೋನ್ ನಂಬರ್ ಕೊಡಿ…. ಮೊಬೈಲ್ಗೆ ಪಿನ್ ಬರುತ್ತೆ… ಎಂದು ಯಥಾಪ್ರಕಾರ ಆನ್ಲೈನ್ ವಂಚನೆಯ ಪ್ರೊಸೀಜರ್ ಅನ್ನು ಫಾಲೋ ಮಾಡಲು ಹೇಳುತ್ತಾರೆ. ಎಲ್ಲ ನಂಬರು ಅವರಿಗೆ ಕೊಟ್ಟು ಕೊನೆಗೆ ಮೊಬೈಲ್ ಸಂಖ್ಯೆಗೆ ಬಂದ ಪಿನ್ ನಂಬರ್ ನೀಡಿದರೆ ಅಲ್ಲಿಗೆ ಖಲ್ಲಾಸ್. ನೀವು ಪಿನ್ ಕೊಟ್ಟರೆ, ಅತ್ತ ಕಡೆಯ ವ್ಯಕ್ತಿ ನಿಮ್ಮ ಅಕೌಂಟಿಗೆ ಭರ್ಜರಿ ಭರ್ಜಿ ಇರಿಯುವುದು ಗ್ಯಾರಂಟಿ. ಕ್ಷಣಗಳಲ್ಲಿ ನಿಮ್ಮ ಅಕೌಂಟ್ ನಲ್ಲಿದ್ದ ಹಣ ತೂತು ಬಜೆಟ್ಟಿನಲ್ಲಿ ನೀರು ಖಾಲಿಯಾದಂತೆ ಜರ್ರನೆ ಖಾಲಿ.

ಎಚ್ಚರ ಗ್ರಾಹಕ ಎಚ್ಚರ !

ನಿಮಗೆ ಇಂತಹ ಕರೆಗಳು ಬಂದರೆ ಈಗಾಗಲೇ ಲಸಿಕೆ ಬಗ್ಗೆ ಮಾತಾಡಿ, ಅಥವಾ ಏನು ಬೇಕಾದರೂ ಮಾತಾಡಿ. ಯಾವುದೇ ಆಧಾರ್, ಮೊಬೈಲ್ ಮುಂತಾದ ನಂಬರುಗಳನ್ನು, ಮೊಬೈಲ್ ಗೆ ಬಂದ ಪಿನ್ ಅನ್ನು ನೀಡಬೇಡಿ. ಅಲ್ಲಿಗೆ ನಿಮ್ಮ ಅಕೌಂಟ್ ಸೇಫ್. ಅಂತಹಾ ಕರೆ ಬಂದ ನಂತರ ನಿಮಗೆ ಕರೆ ಬಂದ ಕುರಿತು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ ನಿಮ್ಮಷ್ಟು ಜಾಣರು ಬೇರೆ ಯಾರೂ ಇರೋದಿಲ್ಲ.

Leave A Reply

Your email address will not be published.