ಸಮಯ ಮೀರಿ ಅಂಗಡಿಯಲ್ಲಿ ವ್ಯಾಪಾರ | ಪ್ರಶ್ನಿಸಿದ ಪೊಲೀಸ್‌ಗೆ ಹಲ್ಲೆ ಮಾಡಿದ ಅಪ್ಪ-ಮಕ್ಕಳು,ಮೂವರ ಬಂಧನ

ಲಾಕ್​ಡೌನ್​ ಸಂದರ್ಭದಲ್ಲಿ ಅವಶ್ಯಕ‌ ವಸ್ತು ಖರೀದಿಗೆ ಸಮಯ ನಿಗದಿ ಮಾಡಿದ್ದು,ಬಳಿಕ ಅಂಗಡಿ ಮುಚ್ಚುವುದು ನಿಯಮ.ಆದರೆ ಇಲ್ಲೊಬ್ಬರು ನಿಗದಿತ ಸಮಯ ಮೀರಿದ್ದರೂ ಅಂಗಡಿ‌ ಮುಚ್ಚದೆ ಕಾನೂನು ಉಲ್ಲಂಘಿಸಿದ್ದಾರೆ.ಜತೆಗೆ ಅಂಗಡಿ ಮುಚ್ಚಿ ಎಂದು ಸೂಚಿಸಿದ ಪೊಲೀಸರೊಬ್ಬರ ಮೇಲೆ ತನ್ನ ಮಕ್ಕಳೊಂದಿಗೆ ಹಲ್ಲೆ ಮಾಡಿದ ಬಗ್ಗೆ ವರದಿಯಾಗಿದೆ.

ಹುಬ್ಬಳ್ಳಿಯಲ್ಲಿ ನಿಯಮ ಮೀರಿ ತೆರೆದು ಕೊಂಡಿದ್ದ ಅಂಗಡಿಯನ್ನು ಮುಚ್ಚಿ ಎಂದು ಪೊಲೀಸರು ಸೂಚಿಸಿದ್ದಕ್ಕೆ ಅಂಗಡಿ ಮಾಲೀಕ ಹಾಗೂ ಆತನ ಇಬ್ಬರು ಮಕ್ಕಳು ಸೇರಿ ಪೊಲೀಸ್ ಮೇಲೆಯೇ ಹಲ್ಲೆ ನಡೆಸಿದರು.

ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ ಈರಪ್ಪ ಹನುಮಸಾಗರ ಎಂಬವರು ಬೆಳಗ್ಗೆ 10 ಗಂಟೆ ಕಳೆದರೂ ಅಂಗಡಿಯನ್ನು ಮುಚ್ಚದೆ ತೆರೆದೇ ಇರಿಸಿದ್ದರು. ಸಮಯ ಮೀರಿದೆ, ಅಂಗಡಿಯನ್ನು ಮುಚ್ಚಿ ಎಂದು ಆ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೆಬಲ್ ಗಿರೀಶ್ ತಿಪ್ಪಣ್ಣವರ ಅಂಗಡಿ ಮಾಲಿಕರಿಗೆ ಸೂಚಿಸಿದ್ದಾರೆ.

ಇದರಿಂದ ಸಿಟ್ಟಾದ ಈರಪ್ಪ ಅವರು ಪೊಲೀಸ್ ಗಿರೀಶ್ ಅವರಿಗೆ ಅಸಭ್ಯ ಪದಗಳಿಂದ ನಿಂದಿಸಿದ್ದಾರೆ. ಮಾತ್ರವಲ್ಲ ಇಬ್ಬರು ಪುತ್ರರೊಂದಿಗೆ ಪೊಲೀಸ್ ಮೇಲೆರಗಿ ಹಲ್ಲೆ ನಡೆಸಿ, ಸಮವಸ್ತ್ರ ಹರಿದು ಹಾಕಿದ್ದರು.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೂವರೂ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave A Reply

Your email address will not be published.