Ad Widget

ಪುತ್ತೂರಿನಲ್ಲಿ ರಸ್ತೆ ಅಪಘಾತ : ಸಾಮಾಜಿಕ ಮುಂದಾಳು ಸತ್ಯನಾರಾಯಣ ಕೋಡಿಬೈಲು ದುರ್ಮರಣ

ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆಯ ಪುತ್ತೂರಿನ ತೆಂಕಿಲದಲ್ಲಿ ಲಾರಿ ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ, ಸ್ಕೂಟರ್ ಸವಾರರಾದ ಉದ್ಯಮಿ ಬೆಳ್ಳಾರೆಯ ಕೋಡಿಬೈಲು ಸತ್ಯನಾರಾಯಣ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.

Ad Widget Ad Widget Ad Widget

ಅವರು ಬೆಳ್ಳಾರೆಯಿಂದ ಪುತ್ತೂರು ಬೈಪಾಸ್ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಸತ್ಯನಾರಾಯಣರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮೃತ ದೇಹವನ್ನು ಪುತ್ತೂರು ಸರಕಾರಿ ಅಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಬೆಳ್ಳಾರೆ ಪರಿಸರದಲ್ಲಿ ಜನಾನುರಾಗಿ ವ್ಯಕ್ತಿಯಾಗಿದ್ದ ಸತ್ಯನಾರಾಯಣ ಕೋಡಿಬೈಲುರವರು ಕೋಡಿಬೈಲು ಕೃಷಿ ಏಜೆನ್ಸೀಸ್ ಮಾಲಕರಾಗಿ ಅನೇಕ ಕೃಷಿ ಉಪಕರಣಗಳನ್ನು ಪರಿಚಯಿಸಿ ಹೆಸರು ಮಾಡಿದ್ದರು. ವಿಶ್ವ ಹಿಂದೂ ಪರಿಷತ್ ಮುಖಂಡರಾಗಿ ಸೇವೆ ಸಲ್ಲಿಸಿದ್ದರು.

ಅವರಿಗೆ 55 ವರ್ಷ ವಯಸ್ಸಾಗಿತ್ತು. ತಾಯಿ, ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: