ಒಂದೇ ಮಂಟಪದಲ್ಲಿ ಅಕ್ಕ – ತಂಗಿಗೆ ತಾಳಿ ಕಟ್ಟಿದ ಉಮಾಪತಿ | ಅದರ ಹಿಂದೆ ಇದೇ ಒಂದು ತ್ಯಾಗದ ಕಥೆ

ಮದುವೆಯಾಗಲು ಒಂದು ಹುಡುಗಿ ಸಿಕ್ಕರೆ ಸಾಕು ಎಂದು ವರ್ಷಗಟ್ಟಲೆ ಕಾಯುತ್ತಿದ್ದ ವರನಿಗೆ ಒಂದೇ ಬಾರಿ ಇಬ್ಬರನ್ನು ಮದುವೆಯಾಗುವ ಅವಕಾಶ ಸಿಕ್ಕಿದೆ. ಅದು ನಿಜಕ್ಕೂ ಅವಕಾಶವೊ ಅನಿವಾರ್ಯತೆಯೂ ಮುಂದೆ ಓದಿ ನೀವೇ ನಿರ್ಧರಿಸಿ.

ಮೊನ್ನೆ ಇಲ್ಲೊಬ್ಬ ವರ ಮಹಾಶಯ ಇಬ್ಬಿಬ್ಬರು ವಧುಗಳನ್ನು ಏಕಕಾಲಕ್ಕೆ ಕೈಹಿಡಿದು ವಿಧ್ಯುಕ್ತವಾಗಿ ಮದುವೆಯಾಗಿದ್ದಾರೆ. ಇಬ್ಬರು ಮುದ್ದಿನ ಹೆಂಡಿರ ಪ್ರೀತಿಯ ಗಂಡ ವರ ಮಹಾಶಯರ ಹೆಸರು ಉಮಾಪತಿ.

ಮುಳಬಾಗಿಲು ತಾಲೂಕಿನಲ್ಲಿ ಒಂದು ದೊಡ್ಡ ಮದುವೆಯೇ ನಡೆದು ಹೋಗಿದೆ.
ದೊಡ್ಡಲಕ್ಷ್ಮಮ್ಮ-ಚಿಕ್ಕಚನ್ನರಾಯಪ್ಪ ಅವರ ದ್ವಿತೀಯ ಪುತ್ರ ಉಮಾಪತಿ ಅವರ ಈ ಅಪರೂಪದ ಮದುವೆ ಇತ್ತೀಚೆಗೆ ನಡೆದಿದೆ. ಇವರ ಮದುವೆ ಆರತಕ್ಷತೆ ಮೇ 7ರಂದು ಮುಳಬಾಗಿಲು ತಾಲೂಕಿನ ತಿಮ್ಮರಾವುತನಹಳ್ಳಿಯ ವೇಗಮಡುಗು ಗ್ರಾಮದಲ್ಲಿರುವ ವಧುವಿನ ಸ್ವಗೃಹದಲ್ಲಿ ನಡೆದಿದ್ದು, ಅದರ ಆಹ್ವಾನ ಪತ್ರಿಕೆ ಈಗ ವೈರಲ್ ಆಗಿದೆಇವರು ಕೋಲಾರ ಜಿಲ್ಲೆ ಮುಳಬಾಗಿಲು ವೇಗಮಡಗು ಎಂಬಲ್ಲಿನ ಶ್ರೀಮತಿ ರಾಣೇಮ್ಮ, ಶ್ರೀಮತಿ ಸುಬ್ಬಮ್ಮ, ಶ್ರೀನಾಗರಾಜಪ್ಪ ಅವರ ಅವರ ದ್ವಿತೀಯ ಹಾಗೂ ತೃತೀಯ ಪುತ್ರಿ ಇಬ್ಬರನ್ನೂ ಒಂದೇ ಮಂಟಪದಲ್ಲಿ ವರಿಸಿದ್ದಾರೆ. ಸಹೋದರಿಯರಾದ ಸುಪ್ರಿಯ ಹಾಗೂ ಲಲಿತ ಇಬ್ಬರನ್ನೂ ಉಮಾಪತಿ ಶಾಸ್ರೋಕ್ತವಾಗಿ ಮದುವೆಯಾಗಿದ್ದಾರೆ.

ಇಬ್ಬರನ್ನು ಮದುವೆಯಾಗಲು ಕಾರಣ ಏನು ಗೊತ್ತಾ ?!

ಉಮಾಪತಿ ಇಬ್ಬರನ್ನು ಕೂಡ ಮದುವೆಯಾಗಲು ಪ್ರಮುಖ ಕಾರಣವಿದೆ. ಹುಡುಗ ಮೊದಲು ತಂಗಿಯನ್ನು ಮದುವೆಯಾಗಲು ಒಪ್ಪಿಕೊಂಡಿದ್ದ. ಅಕ್ಕನನ್ನು ಬಿಟ್ಟು ತಂಗಿಗೆ ಮದುವೆ ಮಾಡಲು ಮನೆಯವರು ಸಿದ್ಧರಾಗಿದ್ದರು. ತಂಗಿ ಅಕ್ಕನನ್ನು ಬಿಟ್ಟು ತಾನು ಮೊದಲು ಮದುವೆಯಾಗಲು ಒಪ್ಪಿಕೊಳ್ಳಲಿಲ್ಲ. ಯಾಕೆಂದರೆ
ಅಕ್ಕ ಸುಪ್ರಿಯಾಗೆ ಮಾತು ಬರುವುದಿಲ್ಲ. ಅಕ್ಕನಿಗೆ ಮದುವೆಯಾಗದೆ ತಂಗಿ ಲಲಿತಾ ಮದುವೆ ಆಗುವುದಿಲ್ಲ ಎಂದು ಹಠಕ್ಕೆ ಬೀಳುತ್ತಾಳೆ. ಅಕ್ಕ ಅಂದ್ರೆ ತಂಗಿಗೆ ತುಂಬಾ ಪ್ರೀತಿ ಮತ್ತು ಅಕ್ಕರೆ. ತನ್ನ ಅಕ್ಕ ಹೀಗೇ ಮದುವೆಯಾಗದೆ ಉಳಿದು ಹೋದರೆ ಏನು ಕತೆ ಎಂದು ಅಕ್ಕನ ಹಿತ ಹಾಗೂ ಭವಿಷ್ಯದ ಕುರಿತು ಚಿಂತಿಸಿದ ತಂಗಿ ಲಲಿತಾ ತ್ಯಾಗಕ್ಕೆ ಸಿದ್ದಳಾಗಿದ್ದಾಳೆ. ಅಂತೆಯೇ, ‘ನನ್ನನ್ನು ಮದುವೆ ಆಗಬೇಕೆಂದರೆ ಅಕ್ಕನನ್ನೂ ಮದುವೆ ಮಾಡಿಕೊಳ್ಳಬೇಕು’ ಎಂಬ ಷರತ್ತನ್ನು ವರ ಉಮಾಪತಿಗೆ ವಿಧಿಸಿದ್ದಳು. ವರ ಉಮಾಪತಿ ಆಕೆಯನ್ನು ತುಂಬಾ ಇಷ್ಟಪಟ್ಟಿದ್ದ. ಆ ಕಾರಣಕ್ಕೆ ಒಪ್ಪಿದ ಆತ ಮೇ 7ರಂದು ಗ್ರಾಮದಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಸಹೋದರಿಯರಿಬ್ಬರನ್ನೂ ಮದುವೆ ಮಾಡಿಕೊಂಡು ಅವರಿಬ್ಬರ ಜೊತೆ ಸಪ್ತಪದಿ ತುಳಿದಿದ್ದಾರೆ.

Leave A Reply

Your email address will not be published.