ಬೀಟ್ ನಲ್ಲಿ ಇರುವಾಗ ರಸ್ತೆ ಬದಿಯಲ್ಲಿ ನಿಂತಿದ್ದ ತಳ್ಳುಗಾಡಿಯಿಂದ ಮೊಟ್ಟೆ ಕದ್ದು ಸಿಕ್ಕಿಬಿದ್ದ ಪೊಲೀಸ್ !

ಕಳ್ಳನನ್ನು ಹಿಡಿಯಬೇಕಾದ ಪೊಲೀಸ್ ಪೇದೆಯೊಬ್ಬ ಮೊಟ್ಟೆ ಕಳ್ಳತನ ಮಾಡಿ, ಆ ಘಟನೆ ನಂತರ ವಿಡಿಯೋ ವೈರಲ್ ಆಗಿ ಸಿಕ್ಕಿ ಬಿದ್ದ ಘಟನೆ ಪಂಜಾಬ್ ನಲ್ಲಿ ನಡೆದಿದೆ.

ಆತ ಪಂಜಾಬ್ ರಾಜ್ಯದ ಚಂಡೀಗಢದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಹೆಡ್ ಕಾನ್ಸ್ ಟೇಬಲ್ ಪ್ರೀತ್ ಪಾಲ್ ಸಿಂಗ್ ಅವತ್ತು ಬೀಟ್ ಡ್ಯೂಟಿಯಲ್ಲಿದ್ದ. ಆಗ ರಸ್ತೆ ಬಾಡಿ ಆತ ನಿಂತಲ್ಲಿಗೆ ಭರ್ತಿ ಮೊಟ್ಟೆಗಳನ್ನು ತುಂಬಿದ್ದ ದ್ವಿಚಕ್ರ ವಾಹನವೊಂದು ಬಂದು ನಿಂತಿತ್ತು. ಅದರಲ್ಲಿ ಪೇರಿಸಿಟ್ಟ ಮೊಟ್ಟೆಗಳನ್ನು ನೋಡಿ ವಾಸಪಟ್ಟ ಈ ಪೊಲೀಸ್ ಮೊಟ್ಟೆಗಳ ಮಾಲೀಕ ಅಕ್ಕ-ಪಕ್ಕ ಇಲ್ಲದ್ದನ್ನು ಗಮನಿಸಿ ಒಂದೊಂದಾಗಿ ಮೊಟ್ಟೆಗಳನ್ನು ತನ್ನ ದೊಗಳೆ ಪ್ಯಾಂಟಿನ ಕಿಸೆಯೊಳಗೆ ಇಳಿಸುತ್ತಾನೆ. ಅಂಗಡಿಯ ಮಾಲಕ ಬರುತ್ತಿರುವವರೆಗೆ ಈ ಕಳ್ಳ ಕೆಲಸ ಸಾಗುತ್ತದೆ.

ಆತನ ಕೃತ್ಯವನ್ನು ಅಲ್ಲಿ ಯಾರೂ ಗಮನಿಸಲಿಲ್ಲ. ಆದರೆ ಸಿಸಿ ಕ್ಯಾಮರಾವೊಂದು ಮೊಟ್ಟೆಗಳನ್ನು ಕದಿಯುತ್ತಿದ್ದ ಕಳ್ಳ ಪೊಲೀಸ್ ನ ಸೆರೆಹಿಡಿದಿತ್ತು. ನಂತರ ಅದನ್ನು ಯಾರೋ ಜಾಲತಾಣದಲ್ಲಿ ವೈರಲ್ ಮಾಡಿದ್ದರು. ಇದರ ಬೆನ್ನಲ್ಲೇ ಆ ವಿಡಿಯೋ ವ್ಯಾಪಕ ಟ್ರೋಲ್ ಗೆ ಕೂಡ ಗುರಿಯಾಗಿತ್ತು.

ನಂತರ ನಡೆದ ಪೊಲೀಸ್ ತನಿಖೆಯಲ್ಲಿ, ಪಕ್ಕದ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರೀತ್ ನೆ ಮೊಟ್ಟೆ ಕಳ್ಳ ಎಂಬುದು ತಿಳಿದು ಬಂದಿತ್ತು. ಆ ಬಳಿಕ ಇಲಾಖೆ ಆತನನ್ನು ಸಸ್ಪೆಂಡ್ ಮಾಡಿದೆ.

Leave A Reply

Your email address will not be published.