Ad Widget

ಟ್ರ್ಯಾಕ್ಟರ್ ಜೊತೆಗೆ ಸೆಲ್ಫಿ ತೆಗೆಯುವ ಹುಚ್ಚಾಟ..! | 20 ವರ್ಷದ ಯುವಕ ಮೃತ್ಯು

ಜಲಪಾತದ ಎದುರು ಸೆಲ್ಫಿ, ಪ್ರವಾಹದ ಬರುತ್ತಿರುವಾಗ ಸೆಲ್ಫಿ ಹೀಗೆ ಹಲವಾರು ಕಡೆ ಸೆಲ್ಫಿ ತೆಗೆಯಲು ಹೋಗಿ ಜೀವ ಕಳೆದುಕೊಂಡ ಉದಾಹರಣೆಗಳನ್ನು ನಾವು ಗಮನಿಸಿದ್ದೇವೆ. ಅದೇರೀತಿ 20 ವರ್ಷದ ಯುವಕನೊಬ್ಬ ಟ್ರ್ಯಾಕ್ಟರ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಿರುಪಥೂರ್ ಜಿಲ್ಲೆಯ ವನಿಯಂಬಾಡಿ ಎಂಬ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟ ಯುವಕನನ್ನು ಕೆ. ಸಂಜೀವ್ (20) ಎಂದು ಗುರುತಿಸಲಾಗಿದೆ. ಮನೆ ಬಳಿಯಿದ್ದ ಕೃಷಿ ಭೂಮಿಗೆ ನಿನ್ನೆ ಮಧ್ಯಾಹ್ನ ಯುವಕ ಟ್ರ್ಯಾಕ್ಟರ್ ನಲ್ಲಿ ತೆರಳಿದ್ದಾನೆ. ಈ ವೇಳೆ ಸೆಲ್ಫೀ ತೆಗೆದುಕೊಳ್ಳಲು ಆರಂಭಿಸಿದ್ದು, ಮತ್ತಷ್ಟು ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ನಿರ್ಧರಿಸಿದ ಆತ ಟ್ರ್ಯಾಕ್ಟರ್ ಆನ್ ಮಾಡಿ ಫೋಟೋ ತೆಗೆದುಕೊಳ್ಳಲು ಆರಂಭಿಸಿದ್ದಾನೆ. ಈ ವೇಳೆ ಟ್ರ್ಯಾಕ್ಟರ್ ಹತ್ತಿರದಲ್ಲಿದ್ದ 120 ಅಡಿ ಆಳದ ಬಾವಿಗೆ ಬಿದ್ದಿದ್ದು, ಘಟನೆಯನ್ನು ಗಮನಿಸಿದ ಸ್ಥಳದಲ್ಲಿಯೇ ಇದ್ದ ಕೃಷಿಕನೊಬ್ಬ ಸ್ಥಳೀಯ ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾನೆ.

ಕೂಡಲೇ ಅಗ್ನಿಶಾಮಕ ದಳ ಕಚೇರಿಯ ಅಧಿಕಾರಿಗಳು 8 ಮಂದಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದು, ಸತತ 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರಗೆ ತೆಗೆಯಲಾಗಿದೆ.

ಈತ ಈ ಸೆಲ್ಫಿ ತೆಗಿಯುವ ಹುಚ್ಚಾಟದಿಂದಾಗಿ ತನ್ನ ಜೀವವನ್ನೇ ಕಳೆದುಕೊಂಡ. ಅದೇ ರೀತಿ ಆತನ ತಂದೆ ತಾಯಿಯ ಸ್ಥಾನದಲ್ಲಿ ಯೋಚನೆ ಮಾಡಿದರೆ ಅವರ ಗತಿ ಏನು?. ಇಷ್ಟು ಸಮಯ ಈ ಹುಡುಗನನ್ನು ಹೆತ್ತು, ಹೊತ್ತು, ಸಾಕಿದ ಫಲವೇನು? ಎಂದು ಅನಿಸುತ್ತದೆ.

Ad Widget Ad Widget Ad Widget
Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: