ಸೆಕ್ಸ್ ಕ್ಷೇತ್ರದ ಕ್ಷುದ್ರ ದೇವಿ ಸನ್ನಿ ಲಿಯೋನ್ ಹುಟ್ಟುಹಬ್ಬಕ್ಕೆ ಕರ್ನಾಟಕದಲ್ಲಿ ಕಟೌಟ್ | ಫುಲ್ ಖುಷ್ ಆದ ವಿಶಾಲ ಹೃದಯಿ !

ಪೋರ್ನ್ ಸ್ಟಾರ್, ಬಾಲಿವುಡ್ ನಟಿ, ಸೆಕ್ಸ್ ಗುರು, ರಾಣಿ ಜೇನು ಸನ್ನಿ ಲಿಯೋನ್ ಗೆ ಲಕ್ಷಾಂತರ ಅಭಿಮಾನಿಗಳು. ಕೋಟ್ಯಂತರ ವೀಕ್ಷಕರು ಇಂಟರ್ನೆಟ್ಟಿನ ಮೂಲೆಮೂಲೆಗಳಲ್ಲಿ ಆಕೆಗಾಗಿ ಹುಡುಕಾಡುತ್ತಾರೆ. ಅಂತಹ ಫ್ಯಾನ್ ಬೇಸ್ ಇರುವ ಈ ನಟಿಯ ಜನ್ಮದಿನದಂದು ಕರ್ನಾಟಕದ ಹಳ್ಳಿಯೊಂದರ ರಸ್ತೆ ಬದಿಯಲ್ಲಿ ದೊಡ್ಡ ಫ್ಲೆಕ್ಸ್ ಒಂದನ್ನು ಹಾಕಲಾಗಿತ್ತು. ಈ ಫ್ಲೆಕ್ಸ್‌ ನೋಡಿ ಸನ್ನಿ ಖುಷಿಯಾಗಿದ್ದಾಳಂತೆ.

ಮೊನ್ನೆ, ಮೇ 13 ರಂದು ಸನ್ನಿ ಲಿಯೋನ್ ತಮ್ಮ 40 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಳು. ಸನ್ನಿಲಿಯೋನ್ ಜನ್ಮದಿನದಂದು ಕರ್ನಾಟಕದಲ್ಲಿ ಅಭಿಮಾನಿಗಳು ವಿಶೇಷವಾಗಿ ತಮ್ಮ ಅಭಿಮಾನ ಮೆರೆದಿದ್ದಾರೆ.

ಸನ್ನಿ ಹುಟ್ಟುಹಬ್ಬದ ಪ್ರಯುಕ್ತ ಕರ್ನಾಟಕದ ಹಳ್ಳಿಯೊಂದರ ರಸ್ತೆ ಬದಿಯಲ್ಲಿ ದೊಡ್ಡ ಫ್ಲೆಕ್ಸ್ ಹಾಕಲಾಗಿದೆ. ಫ್ಲೆಕ್ಸ್ ನಲ್ಲಿ ಕಪ್ಪಂಚಿನ ಸೆರಗಿನ ಹಳದಿ ಸ್ಯಾರಿಯಲ್ಲಿ ಆಕೆ ಫುಲ್ ಮಿಂಚಿಂಗ್. ಬಿಳಿದು ಮೈಯನ್ನು ಮುಚ್ಚಿದ ಕೆಂಪು ಕುಪ್ಪಸ. ಫೋಟೋದ ಮೇಲೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಇಂಗ್ಲಿಷ್ ನಲ್ಲಿ ಬರೆದರೆ, ಕೆಳಗೆ ‘ಅನಾಥ ಮಕ್ಕಳ ತಾಯಿ, ಅಭಿಮಾನಿಗಳ ದೇವತೆ’ ಎಂದು ಹೊಗಳಿ ಬರೆಯಲಾಗಿದೆ. ಈ ಫ್ಲೆಕ್ಸ್ ಗೆ ದೊಡ್ಡ ಹೂವಿನ ಹಾರವೊಂದನ್ನು ಕೂಡ ನೇತು ಹಾಕಲಾಗಿದ್ದು, ಈ ಮೂಲಕ ಅಭಿಮಾನಿಗಳು ಸನ್ನಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಈ ಫ್ಲೆಕ್ಸ್ ಹಾಕಿರುವುದು ಎಲ್ಲಿ ಮತ್ತು ಆ ಪುಣ್ಯಾತ್ಮರು ಯಾರು ಎಂದು ನಮಗಿನ್ನೂ ತಿಳಿದು ಬಂದಿಲ್ಲ. ಆದರೆ ಈ ರೀತಿ ಫ್ಲೆಕ್ಸ್ ಫೋಟೋ ಹಾಕಿದ್ದಾರೆ ಎನ್ನುವುದು ಆಕೆಗೆ ತಿಳಿದು ಹೋಗಿದೆ. ಹೀಗಾಗಿ ಈ ನಟಿ ಕೂಡ ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿಕೊಂಡಿದ್ದಾಳೆ. ಆ ಫ್ಲೆಕ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಈಗ ಸಖತ್ ವೈರಲ್ ಆಗಿದೆ. ಅಲ್ಲದೆ ಹಾರ್ಟ್ ಸಿಂಬಲ್ ಅನ್ನು ತಗುಲಿಸಿಕೊಂಡಿದ್ದಾಳೆ. ಎಷ್ಟಾದರೂ ದೊಡ್ಡ ಹೃದಯದ ನಟಿಯಲ್ಲವೆ ಈ ಸನ್ನಿ ?!

Leave A Reply

Your email address will not be published.