ಇಸ್ರೇಲ್ ಎಂಬ ಸ್ವಾಭಿಮಾನಿ ಜೇನು ಗೂಡಿಗೆ ಕಲ್ಲೆಸೆಯಲು ಹೋದ ಪ್ಯಾಲೆಸ್ಟೈನ್ ಮೇಲೆ ನಿಲ್ಲದ ನಿರಂತರ ದಾಳಿ | 137 ಹತ !

ಇಸ್ರೇಲ್ : ಇಸ್ರೇಲ್ ಗಾಜಾಪಟ್ಟಿಯ ಮೇಲೆ ನಿರಂತರವಾಗಿ ವಾಯುದಾಳಿ ನಡೆಸುತ್ತಿದ್ದು ಇಂದು ಕೂಡ ಅದು ಮುಂದುವರಿದಿದ್ದು ರಾತ್ರಿಯಿಡೀ ದಾಳಿ ನಡೆದಿದೆ ಎಂದು ಸೇನೆಯು ಶನಿವಾರ ತಿಳಿಸಿದೆ.

ಪ್ಯಾಲೆಸ್ಟೈನ್‌ನಲ್ಲಿ ಭಾರೀ ಅಶಾಂತಿಯ ವಾತಾವರಣ ಸೃಷ್ಟಿಸಿದ್ದು ಈವರೆಗೂ ಇಸ್ರೇಲ್‌ನ ವಾಯುದಾಳಿಯಿಂದ ಗಾಜಾದಲ್ಲಿ 125 ಕ್ಕೂ ಹೆಚ್ಚು ಮಂದಿ ಮೃತಪಟ್ಟು ಸುಮಾರು 1000 ಜನರಿಗೆ ಗಾಯಗಳಾಗಿದೆ.

ಕಳೆದ ಸೋಮವಾರ ಗಾಜಾದ ಹಮಾಸ್ ಮಿಲಿಟ0ಟ್ ಸಂಘಟನೆ ಏಕಾಏಕಿ ಇಸ್ರೇಲ್ ಮೇಲೆ ರಾಕೆಟ್ ಗಳ ಸುರಿಮಳೆಗೈದಿತ್ತು. ಇದರಿಂದ ಕ್ರುದ್ದಗೊಂಡ ಇಸ್ರೇಲ್ ನ ಅಧ್ಯಕ್ಷ ಬೆಂಜಮಿನ್ ನೇತನ್ಯಾಹು ಕಳೆದ ಒಂದು ವಾರದಿಂದ ಪ್ಯಾಲೆಸ್ತೀನ್ ಅನ್ನು ಬೇತಾಳನಂತೆ ಕಾಡುತ್ತಿದೆ. ಇಸ್ರೇಲ್ ನಂತಹಾ ಹಠಮಾರಿ ಮತ್ತು ಸ್ವಾಭಿಮಾನಿ ದೇಶವನ್ನು ಕೆಣಕಲು ಹೋದ ಪ್ಯಾಲೆಸ್ಟೈನ್ ಸರಿಯಾಗಿ ಇಕ್ಕಿಸಿಕೊಳ್ಳುತ್ತಿದೆ. ಆದರೆ ಈ ಯುದ್ಧದಲ್ಲಿ ಅಮಾಯಕ ನಾಗರಿಕರು ಮತ್ತು ಮಕ್ಕಳು ಹತರಾಗುತ್ತಿರುವುದು ಮಾತ್ರ ದುರಂತ.

ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಸಂಘರ್ಷ ಶನಿವಾರ ಐದನೇ ದಿನಕ್ಕೆ ಮುಂದುವರಿದಿದ್ದು, ರಾಕೆಟ್, ಶೆಲ್ ದಾಳಿ ಇದೀಗ ಮತ್ತಷ್ಟು ತೀವ್ರಸ್ವರೂಪ ಪಡೆದುಕೊಂಡಿದೆ. ಇನ್ನು ಇಸ್ರೇಲ್ ನಗರದ ಮೇಲೆ ಗಾಜಾದಿಂದಲೂ ರಾಕೆಟ್ ದಾಳಿ ನಡೆಯುತ್ತಿದೆ ಎಂದು ಹೇಳಲಾಗಿದೆ. ಹಾಗೆಯೇ ಈ ದಾಳಿಯ ಹೊಣೆಯನ್ನು ಹಮಾಸ್ ಬಂಡುಕೋರರು ಹೊತ್ತಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್ ನೆಲ ಜಲ ಗಾಳಿ ಮೂಲಕ ನಿರಂತರವಾಗಿ ದಾಳಿ ನಡೆಸುತ್ತಿದೆ.

ಇನ್ನು ಸಾವನ್ನಪ್ಪಿದ 126 ಮಂದಿಯ ಪೈಕಿ 32 ಮಕ್ಕಳು, 21 ಮಹಿಳೆಯರು ಕೂಡಾ ಸೇರಿದ್ದಾರೆ. ಶುಕ್ರವಾರ ಗಾಜಾ ಪಟ್ಟಿ ಪ್ರದೇಶದಲ್ಲಿ ಹಮಾಸ್ ಬಂಡುಕೋರರ ಶಸ್ತ್ರಾಸ್ತ್ರ ಉತ್ಪಾದನೆಯ ಸುರಂಗಗಳ ಮೇಲೆ ಇಸ್ರೇಲ್ ಸೇನೆ ಸಾವಿರಾರು ರಾಕೆಟ್, ಶೆಲ್ ದಾಳಿ ನಡೆಸಿ ಧ್ವಂಸಗೊಳಿಸುವ ಯತ್ನ ನಡೆಸಿದೆ.

Leave A Reply

Your email address will not be published.