ಬೆಂಗಳೂರು | ಬಿಎಂಟಿಸಿಯಿಂದ ‘ಉಸಿರು ನೀಡುವ ಬಸ್’ ಸೇವೆ ಆರಂಭ

ಬೆಂಗಳೂರು: ಬೆಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸುವ ಸರಕಾರಿ ಸಾರಿಗೆ ಸಂಸ್ಥೆ, ಬಿಎಂಟಿಸಿ ವಿನೂತನ ಪ್ರಯೋಗ ಕೈಗೊಂಡಿದ್ದು, ಕೊರೊನಾ ಸೋಂಕಿತರಿಗೆ ಸೇವೆ ಒದಗಿಸುವ ನಿಟ್ಟಿನಲ್ಲಿ ಆಕ್ಸಿಜನ್ ಸಿಲಿಂಡರ್ ಹೊತ್ತ ಕೆಲವು ಬಸ್ಸುಗಳನ್ನು ಸಿದ್ಧಪಡಿಸಿ ಸೇವೆ ಆರಂಭಿಸಿದೆ.

ಈ ವಿನೂತನ ಸೇವೆಗೆ ಇಂದು ಚಾಲನೆ ದೊರೆತಿದ್ದು ಒಂದು ಬಸ್ನಲ್ಲಿ 8 ಆಮ್ಲಜನಕ ಯೂನಿಟ್ ಗಳನ್ನು ಇಡಲಾಗಿದ್ದು, ಸಂಪರ್ಕಿಸಿ ಬರುವ ಪ್ರತಿ ರೋಗಿಗೆ ಎರಡರಿಂದ ನಾಲ್ಕು ಗಂಟೆ ಆಕ್ಸಿಜನ್ ಸೇವೆ ಒದಗಿಸಲಾಗುತ್ತಿದೆ. ನಗರದ ಪುರಭವನ, ವಿಕ್ಟೋರಿಯಾ ಆಸ್ಪತ್ರೆ ಹೀಗೆ ಕೆಲವೆಡೆ ಮೊದಲಿಗೆ ಸೇವೆ ಆರಂಭಿಸಲಾಗಿದೆ. ಅಗತ್ಯವಿದ್ದಾಗ ರೋಗಿಗಳ ದಟ್ಟಣೆ ಇರುವ ಪ್ರದೇಶ ಹಾಗೂ ಅಗತ್ಯವುಳ್ಳ ಆಸ್ಪತ್ರೆಗೆ ತೆರಳಿ ಸೇವೆ ಒದಗಿಸಲಾಗುವುದು ಮತ್ತು ಮುಂದಿನ ದಿನಗಳಲ್ಲಿ ಸೇವೆಯನ್ನು ವಿಸ್ತರಿಸಲಾಗುವುದು ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

ಕೊರೋನಾ ರೋಗಿಗಳಿಗೆ ಪ್ರಾಥಮಿಕ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಈ ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆ 10.30 ರಿಂದ ಸಂಜೆ 6 ಗಂಟೆವರೆಗೆ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಫೌಂಡೇಶನ್ ಇಂಡಿಯಾ ಸ್ವಯಂ ಸೇವಾಸಂಸ್ಥೆ ಸಹಕಾರ ನೀಡುತ್ತಿದೆ.

Leave A Reply

Your email address will not be published.