ಮುಖ್ಯಮಂತ್ರಿ ಕರೆದ ಪತ್ರಿಕಾಗೋಷ್ಠಿ ಎಂಬ ಟೈಮ್ ವೇಸ್ಟ್ | ಬಡವರ ನಿರೀಕ್ಷೆ ಮತ್ತೆ ಹುಸಿ ಮಾಡಿದ ಸರ್ಕಾರ !

ಇವತ್ತು ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪನವರು ಏಕಾಏಕಿ ಸುದ್ದಿಗೋಷ್ಠಿ ಕರೆದಿದ್ದರು. ಬೆಳಿಗ್ಗೆಯಿಂದಲೇ ಈ ಸುದ್ದಿಗೋಷ್ಠಿ ಗಾಗಿ ಇಡೀ ಕರ್ನಾಟಕ ಕಣ್ಣುನೆಟ್ಟು ಕೂತಿತ್ತು. ಮುಖ್ಯಮಂತ್ರಿಯವರು ಏನು ಹೇಳಬಹುದೆಂದು ಜನ ಕಾತರದಿಂದ ಕಾಯುತ್ತಿದ್ದರು. ಇವತ್ತು ಮುಖ್ಯಮಂತ್ರಿಯವರ ಸುದ್ದಿಗೋಷ್ಠಿಯಲ್ಲಿ ಕೋವಿಂದ್ ನಿರ್ವಹಣೆಯ ತಂಡದ ಸಚಿವರುಗಳು ಭಾಗಿಯಾಗಿದ್ದರು.

ಇದೀಗ ಮುಖ್ಯಮಂತ್ರಿ ಅವರ ಪತ್ರಿಕಾಗೋಷ್ಠಿ ಪ್ರಾರಂಭವಾಗಿದ್ದು, ಅದರ ಮುಖ್ಯಾಂಶಗಳು ಹೀಗಿವೆ.

ಬಹುನಿರೀಕ್ಷಿತ ಸುದ್ದಿಗೋಷ್ಠಿ ಟುಸ್ ಪಟಾಕಿ ಆಗಿದೆ. ಈಗಾಗಲೇ ಗೊತ್ತಿರುವ ವರದಿ ನೀಡುವುದಕ್ಕೆ ಸೀಮಿತ ಆಗಿದೆ ಸಿಎಂ ಕರೆದ ಸುದ್ದಿಗೋಷ್ಠಿ. ಬಡವ ಬಲ್ಲಿದರಿಗೆ ಏನಾದರೂ ಪ್ಯಾಕೇಜ್ ನೀಡಬಹುದೆಂಬ ನಿರೀಕ್ಷೆ ಹುಸಿಯಾಗಿದೆ.

ಬಡವರಿಗೆ ಕಾರ್ಮಿಕರಿಗೆ ಏನಾದರೂ ಘೋಷಣೆ ಆಗಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಕೊಟ್ಟಂತಹ ಉಚಿತ ಪಡಿತರ ಮುಂತಾದ ಯಾವುದೇ ಸರಕಾರದಿಂದ ಬಂದಿಲ್ಲ.

ಬಿಪಿಎಲ್ ಕಾರ್ಡುದಾರರಿಗೆ 5 ಕೆಜಿ ಅಕ್ಕಿ ನೀಡಲಾಗುವುದು. ಬಡವರಿಗೆ ಇಂದಿರಾ ಕ್ಯಾಂಟೀನ್ ಅನ್ನು ತೆರೆಯಲಾಗಿದೆ ಎನ್ನುವ ಈಗಾಗಲೇ ಗೊತ್ತಿರುವ ವಿಚಾರ ಬಿಟ್ಟರೆ ದಿನಗೂಲಿಯಾಗಿ ದುಡಿಯುವವರ ಸಹಾಯಕ್ಕೆ ಸರ್ಕಾರ ಸ್ಪಂದಿಸಿಲ್ಲ.

ಕೇವಲ ಹಾಸ್ಪಿಟಲ್ ಮ್ಯಾನೇಜ್ಮೆಂಟ್ ನಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಮಾತ್ರ ಓದಿದ ವರದಿ ಇದಾಗಿದೆ. ತಾವು ಮಾಡಿದ್ದನ್ನೇ ದೊಡ್ಡ ಸಾಧನೆ ಎಂದು ಓದಿಕೊಂಡಿದ್ದಾರೆ ಸಚಿವರುಗಳು.

ಇತರ ಪ್ರಮುಖ ವಿಷಯಗಳು

ಮೂರು ಕೋಟಿ ಲಸಿಕೆಗೆ ಖರೀದಿಗೆ ಈಗಾಗಲೇ ಆರ್ಡರ್ ಮಾಡಲಾಗಿದೆ. ಉಚಿತ ವ್ಯಾಕ್ಸೀನ್ ಸರಕಾರ ಒದಗಿಸಲಿದೆ ಎಂದು ಸರ್ಕಾರ ಹೇಳಿದೆ.

ಮೊದಲು 45 ವರ್ಷ ಮೇಲ್ಪಟ್ಟ ಜನರಿಗೆ ಲಸಿಕೆ ಪೂರೈಸಿ ಆನಂತರವಷ್ಟೇ 18 ರಿಂದ ಮೇಲ್ಪಟ್ಟ ವಯಸ್ಕರಿಗೆ ಲಸಿಕೆ ನೀಡಲಾಗುವುದು. ಲಸಿಕೆ ಯಾವಾಗ ಬರುತ್ತೆ ಅನ್ನೋದರ ಬಗ್ಗೆ ಕೂಡಾ ಸ್ಪಷ್ಟತೆ ಇಲ್ಲ. ಸಿಎಂ ಮತ್ತು ಸಚಿವರುಗಳು ಹಾರಿಕೆಯ ಉತ್ತರ ನೀಡಿದ್ದಾರೆ.

ರಾಜ್ಯದಲ್ಲಿ ಒಟ್ಟು 60 ಸಾವಿರ ಆಕ್ಸಿಜನ್ ಯುಕ್ತ ಬೆಂಗಳೂರು ದಿನಂಪ್ರತಿ 60 ಸಾವಿರ ಜನರಿಗೆ ಅಗತ್ಯವಿರುವ ಜನರಿಗೆ ಟ್ರೀಟ್ಮೆಂಟ್ ಕೊಡಬಹುದು.

ಏರುಗತಿಯಲ್ಲಿದ್ದ ಕೋವಿಡ್ ಪ್ರಕರಣ ಸಂಖ್ಯೆ ಸರಕಾರ ವಿಧಿಸಿದ ಲಾಕ್ ಡೌನ್ ಕಾರಣದಿಂದ ಕಡಿಮೆಯಾಗಿದೆ ಎಂದು ಹಲವು ಅಂಕಿ-ಅಂಶಗಳ ಸಮೇತ ಮುಖ್ಯಮಂತ್ರಿ ಅವರು ಹೇಳಿದ್ದಾರೆ. ಹೆಚ್ಚುವರಿ ಬೆಡ್ ಮತ್ತು ವೆಂಟಿಲೇಟರ್ ಗಳು ಇತ್ಯಾದಿಗಳನ್ನು ಸರಕಾರ ಪೂರೈಸಿದೆ. ಅಗತ್ಯ ಆಮ್ಲಜನಕವನ್ನು ನಮ್ಮ ಪ್ಲಾಂಟ್ ಗಳಲ್ಲಿ ಮತ್ತು ಹೊರಗಡೆಯಿಂದ ಕೂಡ ಕೊಂಡುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ.

ಓಲಾ ಆಪ್ ಸಹಯೋಗದಿಂದ 1000 ಆಕ್ಸಿಜನ್ ಕೌಶಲಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.

ಖಾಸಗಿ ಆಸ್ಪತ್ರೆಗಳು ನೀಡಿದ ಸೋಮ ಲೆಕ್ಕವನ್ನು ಪತ್ತೆ ಮಾಡಿದ್ದೇವೆ..

19 ಜನ ಇರುವ ಸಹಾಯವಾಣಿಯನ್ನು 24x 7 ಮಾಡಲಾಗಿದೆ.

Leave A Reply

Your email address will not be published.