ಮುಂಬೈಯಲ್ಲಿ ಪೊಲೀಸರು ಹೊಡೆಯುವ ವಿಡಿಯೋವನ್ನು ಕರ್ನಾಟಕದ ವಿಡಿಯೋ ಎಂದು ಹರಿಯಬಿಟ್ಟ ಕಾಂಗ್ರೆಸ್ ಕಾರ್ಯಕರ್ತೆಯನ್ನು ಅರೆಸ್ಟ್ ಮಾಡಿದ ಪೊಲೀಸರು

ಸೋಮವಾರ ಲಾಕ್​ಡೌನ್ ಹಿನ್ನೆಲೆಯಲ್ಲಿ ಪೊಲೀಸರು ರಾಜ್ಯದ ಕೆಲವು ಕಡೆ ಜನರಿಗೆ ಮನಬಂದಂತೆ ಲಾಠಿ ಪ್ರಯೋಗವನ್ನು ಮಾಡಿದ್ದಾರೆ. ಈ ಬಗ್ಗೆ ವ್ಯಾಪಕವಾದಂತಹ ಆಕ್ರೋಶ ವ್ಯಕ್ತವಾಗಿತ್ತು.

ಇದರ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತೆಯಾದ ಪದ್ಮಾ ಹರೀಶ್ ಎಂಬಾಕೆ ಒಂದು ವಿಡಿಯೋ ಹರಿಯಬಿಟ್ಟಿದ್ದಳು. ಆ ವಿಡಿಯೋದಲ್ಲಿ ಪೊಲೀಸರೆಲ್ಲಾ ಸುತ್ತುವರಿದು ವ್ಯಕ್ತಿಯೊಬ್ಬನನ್ನು ಥಳಿಸುತ್ತಿದ್ದ ದೃಶ್ಯ ಇದ್ದು, ಅದು ಲಾಕ್ ಡೌನ್ ಆದ ಸಂದರ್ಭ ಪೊಲೀಸರು ತೋರಿದ ವರ್ತನೆ ಎಂದು ತೋರಿಸಲಾಗಿದ್ದು ಆ ವಿಡಿಯೋ ವೈರಲ್ ಆಗಿತ್ತು.

ಸದರಿವಿಡಿಯೋ ಕರ್ನಾಟಕದ್ದು ಮತ್ತು ಇಲ್ಲಿನ ಪೊಲೀಸರು ದರ್ಪ ತೋರಿದ್ದಾರೆ ಎಂದು ಅವರು ವಿಡಿಯೋವನ್ನು ಪೋಸ್ಟ್​​​ ಮಾಡಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ರಾಜ್ಯ   ಪೊಲೀಸರು ಇದು ರಾಜ್ಯದಲ್ಲಿ ನಡೆದಿರುವ ಘಟನೆ ಅಲ್ಲ. ಏಪ್ರಿಲ್​​ 3ರಂದು ಮುಂಬೈನಲ್ಲಿ ನಡೆದಿರುವ ಘಟನೆ. ಎಂದು ಪತ್ತೆಹಚ್ಚಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಟ್ವಿಟರ್ ಮೂಲಕ‌‌  ಸೂಚನೆ ನೀಡಿದ್ದರು. ಇದರಂತೆ ಕಾಂಗ್ರೆಸ್ ಕಾರ್ಯಕರ್ತೆಯನ್ನು ಅರೆಸ್ಟ್ ಮಾಡಲಾಗಿದೆ.

ಇದೀಗ ಈ ಕಾಂಗ್ರೆಸ್ ಕಾರ್ಯಕರ್ತೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೊಂದಿಗೆ ತೆಗೆಸಿಕೊಂಡಿರುವ ಫೋಟೋ ವೈರಲ್ ಆಗುತ್ತಿದೆ.

Leave A Reply

Your email address will not be published.