ಸುಳ್ಯದ ಪಯಸ್ವಿನಿ ನದಿಗೆ ಈಜು ಹೊಡೆಯಲು ಹೋದ ಓರ್ವ ಯುವಕ ನೀರು ಪಾಲು

ಸುಳ್ಯದ ಪಯಸ್ವಿನಿ ನದಿಗೆ ಸ್ನಾನಕ್ಕೆ ಹೋದ ಯುವಕನೋರ್ವ ನಿನ್ನೆ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ  ನಡೆದಿದ್ದು, ಮೃತದೇಹವನ್ನು ಪೈಚಾರಿನ ಮುಳುಗು ತಜ್ಞರ ತಂಡ ಹೊರಕ್ಕೆ ತೆಗೆದ ಘಟನೆ ಇಂದು, ಮೇ 12 ರಂದು ನಡೆದಿದೆ.

ಸುಳ್ಯದ ಅರಂಬೂರಿನ ಪ್ರೀತಂ ಹೊಲ್ಲೋ ಬ್ಲಾಕ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುವ ಬಿಹಾರದ ಯುವಕರು ನಿನ್ನೆ ಮೇ 11 ರಂದು ಮಧ್ಯಾಹ್ನ ಸ್ನಾನಕ್ಕೆಂದು ಪಾಲಡ್ಕ ಎಂಬಲ್ಲಿ ಪಯಸ್ವಿನಿ ನದಿಗೆ ಇಳಿದಿದ್ದರು. ಈಜು ಹೊಡೆಯುತ್ತ ಇದ್ದ ತಂಡದಲ್ಲಿದ್ದ ಎಂಬ ಒಬ್ಬ ಯುವಕ ಮಾತ್ರ ಕಾಣೆಯಾಗಿದ್ದ. ಉಳಿದವರು ಎಷ್ಟು ಹುಡುಕಿದರೂ ಸಿಗದೆ ಇದ್ದಾಗ ಆ ತಂಡ ಸಂಜೆಯ ತನಕ ಅಲ್ಲೇ ಕಾದಿದೆ.
ಸಂಜೆಯ ಬಳಿಕ ಹುಡುಕಾಡಿದರೂ ಆತನ ಸುಳಿವೇ ಸಿಕ್ಕಿಲ್ಲ. ಆ ಹುಡುಕನನ್ನು ಬಿಹಾರದ ಕುಂದನ್ ಎಂದು ಗುರುತಿಸಲಾಗಿದೆ.

ಇಂದು ಪೈಚಾರಿನ ಮುಳುಗು ತಜ್ಞರ ತಂಡ ಆಗಮಿಸಿ ನೀರಲ್ಲಿ ಮುಳುಗಿ ಹುಡುಕಾಡಿ ಕುಂದನ್ ಮೃತದೇಹವನ್ನು ಪತ್ತೆಹಚ್ಚಿ ಹೊರತೆಗೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಆರ್.ಬಿ.ಬಶೀರ್ ಜೊತೆಗೆ ಶರೀಫ್ ಟಿ.ಎ., ಅಬ್ಬಾಸ್ ಶಾಂತಿನಗರ, ಲತೀಫ್ ಬೊಳುಬೈಲು, ರಿಫಾಯಿ ಸೋಣಂಗೇರಿ, ಬಶೀರ್ ಕೆ.ಪಿ. ಮೊದಲಾದವರು ಭಾಗವಹಿಸಿದ್ದರು.

ರಂಝಾನ್ ಉಪವಾಸದಲ್ಲಿ ಹಸಿದುಕೊಂಡೆ ಇದ್ದು, ಈ ರಕ್ಷಣಾ ಕಾರ್ಯ ನಡೆಸಿದ ಈ ಯುವಕರು ಈ ಕಾರ್ಯ ಊರವರ ಶ್ಲಾಘನೆಗೆ ಪಾತ್ರವಾಗಿದೆ.

Leave A Reply

Your email address will not be published.