ಈ ಸಲ ಸಾಮೂಹಿಕ ರಂಜಾನ್ ಆಚರಣೆಗೆ ಅವಕಾಶ ಇಲ್ಲ | ಪೊಲೀಸ್ ಸರ್ಪಗಾವಲಿನ ಮಧ್ಯೆ ರಂಜಾನ್ ಆಚರಿಸಬೇಕಾದ ಅನಿವಾರ್ಯತೆ

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಗುರುವಾರ ಮುಸಲ್ಮಾನರ ಹಬ್ಬ ರಂಜಾನ್ ನಡೆಯಲಿದೆ. ರಾಜ್ಯದಲ್ಲಿ ಲಾಕ್ ಡೌನ್ ಇರುವ ಕಾರಣ ಈ ಬಾರಿ ಸಾಮೂಹಿಕವಾಗಿ ರಂಜಾನ್ ಆಚರಣೆಗೆ ಅವಕಾಶ ಇಲ್ಲ ಎಂದು ಉಡುಪಿಯ ಎಸ್ಪಿ ಹೇಳಿದ್ದಾರೆ.

ಮುಸ್ಲಿಮರ ರಂಜಾನ್ ಹಬ್ಬದ ಸಂದರ್ಭ ಕಾನೂನು-ಸುವ್ಯವಸ್ಥೆಗೆ ಸಮಸ್ಯೆ ಆಗಬಾರದು ಎಂಬ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಹೆಚ್ಚುವರಿ ಪೊಲೀಸ್ ಭದ್ರತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಉಡುಪಿಯಲ್ಲಿ ಎರಡು ಕೆಎಸ್ ಆರ್ ಪಿ ತುಕಡಿಗಳನ್ನು ನೇಮಿಸಲಾಗಿದೆ. ಅಲ್ಲದೆ 6 ಡಿಎ ಆರ್ 11 ಇನ್ಸ್ ಪೆಕ್ಟರ್, 50 ಸಬ್ ಇನ್ಸ್ ಪೆಕ್ಟರ್, 4 ಡಿವೈಎಸ್ ಪಿ, ಸಹಿ ಭಧ್ರತೆ ಮಾಡಿದ್ದು ನಾಳೆ ಹಬ್ಬದ ದಿನ ಪೊಲೀಸ್ ಸರ್ಪಗಾವಲು ಉಡುಪಿ ಜಿಲ್ಲೆಯಲ್ಲಿ ಗಸ್ತು ತಿರುಗಲು ಸಜ್ಜಾಗಿವೆ.

ಹಬ್ಬವನ್ನು ತಮ್ಮ ತಮ್ಮ ಮನೆಗಳಲ್ಲಿ ಮಾತ್ರ ಆಚರಿಸಲು ಅವಕಾಶವಿದೆ. ಮುಸಲ್ಮಾನರು ಮಸೀದಿಗೆ ತೆರಳಿ ಸಾಮೂಹಿಕ ನಮಾಜ್ ಮಾಡುವುದನ್ನು ನಿಷೇಧಿಸಲಾಗಿದೆ.

ಗುಂಪು ಸೇರಿ ಹಬ್ಬ ಆಚರಿಸಬಾರದು ಎಂದು ಸರ್ಕಾರ ಸೂಚನೆ ನೀಡಿದೆ‌. ಧಾರ್ಮಿಕ ಕೇಂದ್ರಗಳಿಗೆ ಸೂಕ್ತ ರಕ್ಷಣೆ, ಜಿಲ್ಲೆಯ ಆಯಕಟ್ಟಿನ ಜಾಗದಲ್ಲಿ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡುತ್ತೇವೆ ಎಂದು ಎಸ್ಪಿ ವಿಷ್ಣುವರ್ಧನ ಅವರು ಮಾಹಿತಿ ನೀಡಿದ್ದಾರೆ.

Leave A Reply

Your email address will not be published.