Ad Widget

ಹೆಲ್ಮೆಟ್ ಹಾಕದೆ ಹೋಗಿದ್ದ ಕಂದಾಯ ಇಲಾಖೆ ಅಧಿಕಾರಿಗೆ ದಂಡ ವಿಧಿಸಿದ ಎಸೈ ಗೆ ಆವಾಜ್ ಹಾಕಿದ ಏಸಿ ಮತ್ತು ತಹಶೀಲ್ದಾರ್ !

ಹೆಲ್ಮೆಟ್ ಹಾಕದೆ ಹೋಗಿದ್ದ ಕಂದಾಯ ಇಲಾಖೆ ಸಿಬ್ಬಂದಿ ಬೇಕಾಬಿಟ್ಟಿಯಾಗಿ ತಿರುಗಾಡಿದ್ದು, ಅದಕ್ಕೆ ದಂಡ ಹಾಕಿದ ಎಸ್‍ಐ ಗೆ ಅಸಿಸ್ಟೆಂಟ್ ಕಮಿಷನರ್ ಹಾಗೂ ತಹಶೀಲ್ದಾರ್ ಅವರು ಅವಾಜ್ ಹಾಕಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಈ ಘಟನೆ ನಡೆದಿದ್ದು, ಹೆಲ್ಮೆಟ್ ಹಾಕದೆ ತಿರುಗಾಡಿದ ಕಂದಾಯ ಇಲಾಖೆ ಸಿಬ್ಬಂದಿಗೆ ಎಸ್ ಐ ದಂಡ ಹಾಕಿದ್ದರು. ಇದರ ವಿಚಾರ ತಿಳಿದ ಎಸಿ ಶಿವಾನಂದಮೂರ್ತಿ ಮತ್ತು ತಹಸೀಲ್ದಾರ್ ಅಹಮದ್ ಅವರು ನಾಗಮಂಗಲ ಟೌನ್ ಪೊಲೀಸ್ ಠಾಣೆ ಎಸ್‍ಐ ರವಿಶಂಕರ್ ಅವರಿಗೆ ಅವಾಜ್ ಹಾಕಿದ್ದಾರೆ. ಇನ್ನು ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕದಂತೆ ವಾರ್ನ್ ಮಾಡಿದ್ದಾರೆ.

ವಾಹನ ತಪಾಸಣೆ ವೇಳೆ ಹೆಲ್ಮೆಟ್ ಹಾಕದೆ ಬೈಕ್ ನಲ್ಲಿ ಬಂದ ಕಂದಾಯ ಇಲಾಖೆ ಸಿಬ್ಬಂದಿಗೆ ಎಸ್‍ಐ ದಂಡ ಹಾಕಿದ್ದರು. ದಂಡ ಹಾಕಿದ ವಿಷಯ ತಿಳಿದು ಸ್ಥಳಕ್ಕಾಗಮಿಸಿ, ಎಸಿ, ತಹಶೀಲ್ದಾರ್ ಅವಾಜ್ ಹಾಕಿದ್ದಾರೆ.

Ad Widget Ad Widget Ad Widget

ನಾನು ಮ್ಯಾಜಿಸ್ಟ್ರೆಟ್ ಹೇಳುತ್ತಿದ್ದೇನೆ ಇನ್ನು ದಂಡ ಹಾಕಬೇಡಿ ಎಂದು ತಹಸೀಲ್ದಾರ್ ವಾರ್ನಿಂಗ್ ಮಾಡಿದ್ದಾರೆ. ಇದೇ ಫಸ್ಟ್ ಆ್ಯಂಡ್ ಲಾಸ್ಟ್ ಕಂದಾಯ ಇಲಾಖೆ ಸಿಬ್ಬಂದಿಯನ್ನು ಪರಿಶೀಲನೆ ಮಾಡಬೇಡಿ ಎಂದು ಬೆದರಿಸಿದ್ದಾರೆ. ಈ ಮೂಲಕ ಕಾನೂನು ಪಾಲನೆ ಬಗ್ಗೆ ಜಾಗೃತಿ ಮೂಡಿಸಬೇಕಿದ್ದ ಅಧಿಕಾರಿಗಳಿಂದಲೇ ತಪ್ಪು ಮಾಡಿದವರ ಬೆಂಬಲಕ್ಕೆ ನಿಂತಿದ್ದಾರೆ. ಎಸ್‍ಐ ಗೆ ತರಾಟೆ ತೆಗೆದುಕೊಂಡ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಜನರಿಗೊಂದು ಕಾನೂನು, ಕಂದಾಯ ಇಲಾಖೆ ಸಿಬ್ಬಂದಿಗೆ ಮತ್ತೊಂದು ಕಾನೂನಿದೆಯೇ ಎಂದು ಪ್ರಶ್ನಿಸಿದ್ದಾರೆ.

Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: