Day: May 12, 2021

Big Breaking | 18 ರಿಂದ 44 ವರ್ಷದವರಿಗೆ ಕೊರೊನಾ ಲಸಿಕೆ ನೀಡದಿರಲು ಸರ್ಕಾರ ನಿರ್ಧಾರ

18 ರಿಂದ 44 ವರ್ಷದವರಿಗೆ ಕೊರೊನಾ ಲಸಿಕೆಯನ್ನು ನೀಡದಿರಲು ಕರ್ನಾಟಕ ಸರ್ಕಾರ ಮುಂದಾಗಿದೆ. ಸಿಎಂ ಯಡಿಯೂರಪ್ಪನವರು ಇಂದು ತಮ್ಮ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಕೋವಿಡ್ 19 ನಿಯಂತ್ರಣದ ಕುರಿತು ಚರ್ಚೆ ನಡೆಸಿದರಬಳಿಕ ಸದ್ಯಕ್ಕೆ 18 ರಿಂದ 44 ವರ್ಷದ ವಯೊಮಿತಿಯವರಿಗೆ ಲಸಿಕೆ ಹಾಕುವುದನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇಲ್ಮೇ 14 ರಿಂದ ಮುಂದಿನ ಆದೇಶದವರೆಗೆ ಈ ವಯೋಮಿತಿಯವರಿಗೆ ಲಸಿಕೆ ನೀಡದೇ ಇರಲು ಸರ್ಕಾರ ನಿರ್ಧಾರ ತೆಗದುಕೊಂಡಿದೆ. ಎರಡನೇ ಡೋಸ್ ಸಿಗದ ಕಾರಣ ಈಗಿರುವ ಲಸಿಕೆಯನ್ನ …

Big Breaking | 18 ರಿಂದ 44 ವರ್ಷದವರಿಗೆ ಕೊರೊನಾ ಲಸಿಕೆ ನೀಡದಿರಲು ಸರ್ಕಾರ ನಿರ್ಧಾರ Read More »

ಬೆಳ್ತಂಗಡಿ | ಕೋರೋನಾಗೆ ಮತ್ತೊಬ್ಬ ಮಹಿಳೆ ಬಲಿ

ಕೋರೋನಾಗೆ ಬೆಳ್ತಂಗಡಿಯಲ್ಲಿ ಮತ್ತೊಬ್ಬ ಮಹಿಳೆ ಬಲಿಯಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಪಾರ್ಲ ಎಂಬಲ್ಲಿಯ ಸುಮಾರು 60 ವರ್ಷದ ಗುಲಾಬಿ ಇದೀಗ ಮೃತ ಮಹಿಳೆ. ದೀರ್ಘಕಾಲದ ಡಯಾಬಿಟಿಸ್ ರೋಗಿಯಾಗಿದ್ದ ಅವರು ಇತ್ತೀಚೆಗೆ ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದರು. ಕಳೆದ 10 ದಿನಗಳಿಂದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ವರ್ಷ ಆಕೆಯ ಪತಿ ಕೋರೋನಾ ಬಾಧಿತರಾಗಿ ತೀರಿಕೊಂಡಿದ್ದರು.

ಈ ಸಲ ಸಾಮೂಹಿಕ ರಂಜಾನ್ ಆಚರಣೆಗೆ ಅವಕಾಶ ಇಲ್ಲ | ಪೊಲೀಸ್ ಸರ್ಪಗಾವಲಿನ ಮಧ್ಯೆ ರಂಜಾನ್ ಆಚರಿಸಬೇಕಾದ ಅನಿವಾರ್ಯತೆ

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಗುರುವಾರ ಮುಸಲ್ಮಾನರ ಹಬ್ಬ ರಂಜಾನ್ ನಡೆಯಲಿದೆ. ರಾಜ್ಯದಲ್ಲಿ ಲಾಕ್ ಡೌನ್ ಇರುವ ಕಾರಣ ಈ ಬಾರಿ ಸಾಮೂಹಿಕವಾಗಿ ರಂಜಾನ್ ಆಚರಣೆಗೆ ಅವಕಾಶ ಇಲ್ಲ ಎಂದು ಉಡುಪಿಯ ಎಸ್ಪಿ ಹೇಳಿದ್ದಾರೆ. ಮುಸ್ಲಿಮರ ರಂಜಾನ್ ಹಬ್ಬದ ಸಂದರ್ಭ ಕಾನೂನು-ಸುವ್ಯವಸ್ಥೆಗೆ ಸಮಸ್ಯೆ ಆಗಬಾರದು ಎಂಬ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಹೆಚ್ಚುವರಿ ಪೊಲೀಸ್ ಭದ್ರತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಉಡುಪಿಯಲ್ಲಿ ಎರಡು ಕೆಎಸ್ ಆರ್ ಪಿ ತುಕಡಿಗಳನ್ನು ನೇಮಿಸಲಾಗಿದೆ. ಅಲ್ಲದೆ 6 ಡಿಎ ಆರ್ 11 ಇನ್ಸ್ ಪೆಕ್ಟರ್, …

ಈ ಸಲ ಸಾಮೂಹಿಕ ರಂಜಾನ್ ಆಚರಣೆಗೆ ಅವಕಾಶ ಇಲ್ಲ | ಪೊಲೀಸ್ ಸರ್ಪಗಾವಲಿನ ಮಧ್ಯೆ ರಂಜಾನ್ ಆಚರಿಸಬೇಕಾದ ಅನಿವಾರ್ಯತೆ Read More »

ಕೊಡಗು, ಮೈಸೂರು ಗಡಿಭಾಗದ ಚೆಕ್ ಪೋಸ್ಟ್ ಗೆ ಎಸ್ ಪಿ ಭೇಟಿ ಮತ್ತು ಭದ್ರತೆ ಪರಿಶೀಲನೆ

ಮಡಿಕೇರಿ: ರಾಜ್ಯದಲ್ಲಿ 14 ದಿನಗಳ ಕಾಲ ಲಾಕ್‌ಡೌನ್‌ ವಿಧಿಸಿದ್ದು, ಕೊರೋನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಕೆಲವು ಕಟ್ಟು ನಿಟ್ಟಿನ ಕ್ರಮಗಳನ್ನು ಸರಕಾರ ಜಾರಿಗೆ ತಂದಿದೆ. ಅನಗತ್ಯವಾಗಿ ಸಂಚರಿಸುವ ಎಲ್ಲಾ ವಾಹನಗಳನ್ನು ಮುಟ್ಟುಗೋಲು ಹಾಕುವುದಲ್ಲದೆ, ಪ್ರಕರಣ ದಾಖಲಿಸಲಾಗುತ್ತದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಎಚ್ಚರಿಕೆ ನೀಡಿದ್ದಾರೆ. ಕೊಡಗು, ಮೈಸೂರು ಗಡಿಭಾಗದ ಕುಶಾಲನಗರದ ಕೊಪ್ಪ ಗಡಿ ಚೆಕ್ ಪೋಸ್ಟ್ ಗೆ ಇಂದು ಭೇಟಿ ನೀಡಿ ಅಲ್ಲಿನ ಕಾನೂನು ಸುವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದ ಅವರು ಸ್ಥಳದಲ್ಲಿದ್ದ ಅಧಿಕಾರಿಗಳ ಜೊತೆ …

ಕೊಡಗು, ಮೈಸೂರು ಗಡಿಭಾಗದ ಚೆಕ್ ಪೋಸ್ಟ್ ಗೆ ಎಸ್ ಪಿ ಭೇಟಿ ಮತ್ತು ಭದ್ರತೆ ಪರಿಶೀಲನೆ Read More »

ಕೋರೋನಾದ ಬಗ್ಗೆ ಮಾಧ್ಯಮಗಳು ಜೀವಭಯ ಹುಟ್ಟಿಸುತ್ತಿವೆ, ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಮಾಧ್ಯಮಗಳ ಮೇಲೆ ಕ್ರಮ ಕೈಗೊಳ್ಳಿ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತೀರ್ಪು…!

‘ಕೊರೊನಾದಿಂದಾಗಿ ಜನರು ಸಾಯುತ್ತಿರುವ ದೃಶ್ಯಗಳಿಗೆ ನಿರ್ಬಂಧ ವಿಧಿಸಿ, ಮಾಧ್ಯಮಗಳು ಜೀವಭಯ ಹುಟ್ಟಿಸುತ್ತಿವೆ, ಕೋವಿಡ್‌ನಿಂದ ನರಳುವ ಸಾವಿನ ದೃಶ್ಯ ಪ್ರಸಾರವಾಗುತ್ತಿದ್ದು, ಇದರಿಂದ ಸೋಂಕಿತರಲ್ಲಿ ಸಾವಿನ ಭೀತಿ ಹುಟ್ಟಿಸುವ ರೀತಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದೆ’ ಇದಕ್ಕೆ ಕಡಿವಾಣ ಹಾಕಿ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿ ವ್ಯಕ್ತಿಯೊಬ್ಬರು ಕೋರಿದ್ದರು. ದೃಶ್ಯ ಮಾಧ್ಯಮಗಳು ಜನರಲ್ಲಿ ಭಯ, ಆತಂಕ, ಖಿನ್ನತೆ ಮೂಡಿಸುತ್ತಿವೆ. ಚಿತಾಗಾರಗಳ ದೃಶ್ಯಗಳನ್ನು ಪ್ರಸಾರ ಮಾಡಲಾಗುತ್ತಿದ್ದು, ಅವು ವೀಕ್ಷಕರಿಗೆ ಮಾನಸಿಕ ಒತ್ತಡವಾಗಿ ಸಾವು ಸಂಭವಿಸುತ್ತಿದೆ ಎಂದು ಅರ್ಜಿದಾರರು ದೂರಿದ್ದರು. ಅಲ್ಲದೆ, ಡಿಸಾಸ್ಟರ್ ಮ್ಯಾನೇಜ್ …

ಕೋರೋನಾದ ಬಗ್ಗೆ ಮಾಧ್ಯಮಗಳು ಜೀವಭಯ ಹುಟ್ಟಿಸುತ್ತಿವೆ, ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಮಾಧ್ಯಮಗಳ ಮೇಲೆ ಕ್ರಮ ಕೈಗೊಳ್ಳಿ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತೀರ್ಪು…! Read More »

ಕುಕ್ಕೆ ಸುಬ್ರಹ್ಮಣ್ಯ ಸುಮಾರು 11 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ..ಅರಣ್ಯಾಧಿಕಾರಿಗಳ ಸಹಕಾರದೊಂದಿಗೆ ಮರಳಿ ಕಾಡಿಗೆ..ಉರಗ ಪ್ರೇಮಿ ಮಾಧವ ಕೈಚಳಕದಿಂದ ಬಂಧಿಯಾದ ಉರಗ

ಪವಿತ್ರ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟದ ಬಳಿ ಸುಮಾರು ಹನ್ನೊಂದು ವರೆ ಅಡಿ ಉದ್ದವಿರುವ ಕಾಳಿಂಗ ಸರ್ಪವೊಂದು ಪತ್ತೆಯಾಗಿದ್ದು, ಬೃಹದಾಕಾರವಾಗಿರುವ ಈ ಕಾಳಿಂಗನನ್ನು ಉರಗ ಪ್ರೇಮಿ ಮಾಧವ ಅವರು ರಕ್ಷಿಸಿದ್ದು ವಲಯ ಅರಣ್ಯಾಧಿಕಾರಿಗಳ ಸಹಕಾರದಿಂದ ಮರಳಿ ಕಾಡಿಗೆ ಬಿಡಲಾಯಿತು. ಕುಕ್ಕೆ ಪರಿಸರದಲ್ಲಿ ಚಿರಪರಿಚಿತರಾಗಿರುವ ಮಾಧವ ಅವರು ಸುಮಾರು 2000 ನೇ ಇಸವಿಯಲ್ಲಿ ಈ ಹವ್ಯಾಸ ರೂಡಿಸಿಕೊಂಡರು. ಕಡಬ, ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕಿನ ಹಲವೆಡೆ ಹಾವು ಹಿಡಿಯಲು ಇವರಿಗೆ ಕರೆ ಬರುತ್ತದೆ. ಈ ವರೆಗೆ …

ಕುಕ್ಕೆ ಸುಬ್ರಹ್ಮಣ್ಯ ಸುಮಾರು 11 ಅಡಿ ಉದ್ದದ ಕಾಳಿಂಗ ಸರ್ಪ ಪತ್ತೆ..ಅರಣ್ಯಾಧಿಕಾರಿಗಳ ಸಹಕಾರದೊಂದಿಗೆ ಮರಳಿ ಕಾಡಿಗೆ..ಉರಗ ಪ್ರೇಮಿ ಮಾಧವ ಕೈಚಳಕದಿಂದ ಬಂಧಿಯಾದ ಉರಗ Read More »

ದಕ್ಷಿಣ ಕನ್ನಡ | ಲಾಕ್ ಡೌನ್ ನಿಮಿತ್ತ ಮತ್ತೊಂದು ಆದೇಶ ಪ್ರಕಟಿಸಿದ ಜಿಲ್ಲಾಧಿಕಾರಿ

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ದ.ಕ. ಜಿಲ್ಲಾಡಳಿತ ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದೀಗ ದಕ್ಷಿಣ ಕನ್ನಡ ಜಿಲ್ಲಾದ್ಯಂತ ತಂಬಾಕು ಮತ್ತು ಪಾನ್ ಮಸಾಲ (ಬೀಡಿ, ಸಿಗರೇಟ್) ಜರ್ದಾ, ಖೈನಿ ಉತ್ಪನ್ನಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಈ ಆದೇಶವನ್ನು ದ.ಕ. ಜಿಲ್ಲಾಧಿಕಾರಿ ಇದೀಗ ಹೊರಡಿಸಿದ್ದಾರೆ. ಈ ಆದೇಶ ಉಲ್ಲಂಘಿಸಿ ಅವುಗಳನ್ನು ಮಾರಾಟ ಮಾಡಿದರೆ ಅಥವಾ ಬಳಕೆ ಮಾಡಿದರೆ ಸಾಂಕ್ರಾಮಿಕ ರೋಗಗಳ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಒಂದೊಂದಾಗಿ ಕಠಿಣ …

ದಕ್ಷಿಣ ಕನ್ನಡ | ಲಾಕ್ ಡೌನ್ ನಿಮಿತ್ತ ಮತ್ತೊಂದು ಆದೇಶ ಪ್ರಕಟಿಸಿದ ಜಿಲ್ಲಾಧಿಕಾರಿ Read More »

ಸುಳ್ಯದಲ್ಲಿ ಅಕ್ರಮ ಬಂದೂಕು ಪ್ರಕರಣ | ಸಮಗ್ರ ತನಿಖೆಗೆ ಎಸ್‌ಡಿಪಿಐ ಆಗ್ರಹ ; ಪ್ರಮುಖ ಆರೋಪಿ ಮನೆಗೆ ಎಸ್ಪಿ ರಿಷಿಕೇಶ್ ಭೇಟಿ

ಸುಬ್ರಹ್ಮಣ್ಯ ಠಾಣೆಯಲ್ಲಿ ದಾಖಲಾದ ನಾಡಕೋವಿ ಪ್ರಕರಣದ ಪ್ರಮಖ ಆರೋಪಿ ದಿವಾಕರ ಆಚಾರ್ಯ ಮನೆಗೆ ಎಸ್.ಪಿ. ರಿಷಿಕೇಶ್ ಸೋನಾವಾಲೆ ಮೇ 12 ರಂದು ಭೇಟಿ ನೀಡಿ ಸ್ಥಳ ತನಿಖೆ ನಡೆಸಿದ್ದಾರೆ. ಈ ಸಂದರ್ಭ ಸುಳ್ಯದ ಸರ್ಕಲ್ ಇನ್ಸ್ ಪೆಕ್ಟರ್ ನವೀನ್‌ಚಂದ್ರ ಜೋಗಿ, ಸುಬ್ರಹ್ಮಣ್ಯ ಠಾಣೆಯ ಎಸ್ ಐ ಓಮನ ಮತ್ತು ಸುಬ್ರಹ್ಮಣ್ಯ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅಲ್ಲಿ ಗ್ರಾಮದ ಪಾಲ್ತಾಡಿನ ಲೋಹಿತ್ ಬಂಗೇರ ಎಂಬವರನ್ನು ಬಂಧಿಸಿದ್ದಾರೆ. ಅಲ್ಲದೆ ಅವರಲ್ಲಿದ್ದ ಒಂದು ಕೋವಿಯನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. …

ಸುಳ್ಯದಲ್ಲಿ ಅಕ್ರಮ ಬಂದೂಕು ಪ್ರಕರಣ | ಸಮಗ್ರ ತನಿಖೆಗೆ ಎಸ್‌ಡಿಪಿಐ ಆಗ್ರಹ ; ಪ್ರಮುಖ ಆರೋಪಿ ಮನೆಗೆ ಎಸ್ಪಿ ರಿಷಿಕೇಶ್ ಭೇಟಿ Read More »

ಕೊರೊನಾಕ್ಕೆ ಕಡಬ ಮೂಲದ ಯುವಕ ಬಲಿ | ಪೊಲೀಸ್ ಅಧಿಕಾರಿಯ 36ವರ್ಷದ ಪುತ್ರ

ಕೊರೋನಾ ಸೋಂಕಿಗೆ ತುತ್ತಾಗಿ ಕಡಬ ಮೂಲದ 36 ವರ್ಷದ ಯುವಕನೋರ್ವ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ. ಮೂಲತಃ ಕಡಬ ನಿವಾಸಿಯಾಗಿದ್ದು, ಪ್ರಸ್ತುತ ಬಂಟ್ವಾಳದಲ್ಲಿ ವಾಸಿಸುತ್ತಿರುವ ಪೊಲೀಸ್ ಅಧಿಕಾರಿಯೋರ್ವರ 36 ವರ್ಷದ ಪುತ್ರನಿಗೆ ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯ ಕಾಡಿತ್ತು ಎನ್ನಲಾಗಿದೆ. ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬುಧವಾರದಂದು ಮೃತಪಟ್ಟಿದ್ದಾರೆ‌.

ಸುಳ್ಯದ ಪಯಸ್ವಿನಿ ನದಿಗೆ ಈಜು ಹೊಡೆಯಲು ಹೋದ ಓರ್ವ ಯುವಕ ನೀರು ಪಾಲು

ಸುಳ್ಯದ ಪಯಸ್ವಿನಿ ನದಿಗೆ ಸ್ನಾನಕ್ಕೆ ಹೋದ ಯುವಕನೋರ್ವ ನಿನ್ನೆ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ  ನಡೆದಿದ್ದು, ಮೃತದೇಹವನ್ನು ಪೈಚಾರಿನ ಮುಳುಗು ತಜ್ಞರ ತಂಡ ಹೊರಕ್ಕೆ ತೆಗೆದ ಘಟನೆ ಇಂದು, ಮೇ 12 ರಂದು ನಡೆದಿದೆ. ಸುಳ್ಯದ ಅರಂಬೂರಿನ ಪ್ರೀತಂ ಹೊಲ್ಲೋ ಬ್ಲಾಕ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುವ ಬಿಹಾರದ ಯುವಕರು ನಿನ್ನೆ ಮೇ 11 ರಂದು ಮಧ್ಯಾಹ್ನ ಸ್ನಾನಕ್ಕೆಂದು ಪಾಲಡ್ಕ ಎಂಬಲ್ಲಿ ಪಯಸ್ವಿನಿ ನದಿಗೆ ಇಳಿದಿದ್ದರು. ಈಜು ಹೊಡೆಯುತ್ತ ಇದ್ದ ತಂಡದಲ್ಲಿದ್ದ ಎಂಬ ಒಬ್ಬ ಯುವಕ ಮಾತ್ರ ಕಾಣೆಯಾಗಿದ್ದ. ಉಳಿದವರು …

ಸುಳ್ಯದ ಪಯಸ್ವಿನಿ ನದಿಗೆ ಈಜು ಹೊಡೆಯಲು ಹೋದ ಓರ್ವ ಯುವಕ ನೀರು ಪಾಲು Read More »

error: Content is protected !!
Scroll to Top