ಕೈೂಲ | ಕಳೆದ 35 ವರ್ಷ ಶ್ರಮದಾನದಿಂದ ರಸ್ತೆ ದುರಸ್ತಿ ಗೊಳಿಸುತ್ತಿರುವ ಊರವರಿಂದ ಮತದಾನ ಬಹಿಷ್ಕಾರಕ್ಕೆ ನಿರ್ಧಾರ

ಕೊಯಿಲ: ಗ್ರಾಮದ ಕೊಲ್ಯ-ನೀಡಿಲ್ ರಸ್ತೆಯನ್ನು ಪ್ರತಿ ವರ್ಷ ಮಳೆಗಾಲದ ಕಾಲದಲ್ಲಿ ಊರವರ ಸಹಕಾರದಿಂದ ಶ್ರಮದಾನದ ಮುಖಾಂತರ ಸರಿ ಪಡಿಸಲಾಗುತ್ತಿದೆ. ಸುಮಾರು 35 ವರ್ಷಗಳಿಂದ ಯಾವುದೇ ಅನುದಾನ ದೊರೆಯದ ಕಾರಣ ಮುಂಬರುವ ಚುನಾವಣ ಬಹಿಷ್ಕರಿಸುವುದಾಗಿ ಊರವರು ನಿರ್ಧರಿಸಿದ್ದಾರೆ.

ಪ್ರತಿವರ್ಷದಂತೆ ಈ ಬಾರಿಯೂ ಊರವರಿಂದ ಶ್ರಮದಾನ:
ಪ್ರತಿವರ್ಷ ಮಳೆಗಾಲದಲ್ಲಿ ಹಾಳಾಗುವ ಕೊಲ್ಯ-ನಿಡೀಲ್ ಕಚ್ಛಾ ರಸ್ತೆಯನ್ನು ಊರಿನ ಜನತೆ ಕಳೆದ 35ವರ್ಷಗಳಿಂದ ಶ್ರಮದಾನದ ಮೂಲಕ ಸರಿಪಡಿಸುತ್ತಾ ಬರುತ್ತಿದ್ದಾರೆ. ಅದರಂತೆ ಈ ಬಾರಿಯೂ ಊರಿನ ಶ್ರೀರಾಮ ಗೆಳೆಯರ ಬಳಗ ಅಯೋಧ್ಯಾ ನಗರ ಪದಾಧಿಕಾರಿಗಳು ಶ್ರಮದಾನ ಕೈಗೊಂಡಿದ್ದಾರೆ. ಗೆಳೆಯರ ಬಳಗದ ಗೌರವ ಅಧ್ಯಕ್ಷರಾದ ಪ್ರವೀಣ್ ನೀಡೆಲ್, ಅಧ್ಯಕ್ಷರಾದ ಯಶವಂತ್ ಕೊಲ್ಯ ಹಾಗೂ ನವೀನ್ ನೀಡೆಲ್, ಪ್ರಶಾಂತ್ ಕೊಲ್ಯ, ಸತೀಶ್ ಕೊಲ್ಯ, ಸುಂದರ ಕೊಲ್ಯ, ಸೀತಾರಾಮ ಕೊಲ್ಯ, ಸದಾನಂದ ಕೊಲ್ಯ, ಹರೀಶ್ ಕೊಲ್ಯ, ವಾಸುದೇವ ಕೊಲ್ಯ, ವಿಜಿತ್, ಸ್ವಸ್ತಿಕ್, ವರುಣ್ ಕೈಜೋಡಿಸಿದ್ದಾರೆ. ಈ ಸಮಯದಲ್ಲಿ ಸಭೆ ನಡೆಸಿ ಮುಂದಿನ ಬಾರಿಯ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ನಡೆಸುವ ತೀರ್ಮಾನಿಸಿದ್ದಾರೆ.

Leave A Reply

Your email address will not be published.