ಹೆಣದ ಮೇಲೆ ಹೊದಿಸಿದ ಬಟ್ಟೆ ಕದಿಯುವ ‘ ಹೊಸ ವೃತ್ತಿ ‘ ನಿರತರನ್ನು ಬಂಧಿಸಿದ ಪೊಲೀಸರು

ಅವರಿಗೆ ಸತ್ತವರ ಮತ್ತು ಹೆಣಕ್ಕೆ ಹೊದ್ದಿಸಿದ ಬೆಡ್‌ಶೀಟ್‌ಗಳನ್ನು ಕದಿಯುವುದೇ ದೊಡ್ಡ ಚಾಳಿ.

ಉತ್ತರಪ್ರದೇಶದ ಪಶ್ಚಿಮಭಾಗದಲ್ಲಿರುವ ಭಾಗಪತ್ ಪ್ರದೇಶದಲ್ಲಿ ಅವರು ಚಿತಾಗಾರಗಳಿಗೆ ಮತ್ತು ಸ್ಮಶಾನಗಳಿಗೆ  ಭೇಟಿ ನೀಡುತ್ತಾರೆ. ಅಲ್ಲಿ ಶವಗಳಿಗೆ ಹೊದಿಸಿದ ಕಂಬಳಿ, ಶಾಲು, ಕೌದಿ ಹೀಗೆ – ಏನೇ ಹೊದಿಸಿರಲಿ, ಅದನ್ನು ಕದ್ದು ತರುವುದು ಅವರ ರೂಢಿ. ಕೊರೋನಾದಿಂದ ಇಂತಹುದೊಂದು   ವಿಚಿತ್ರ ಕಸುಬು ಹುಟ್ಟಿಕೊಂಡಿದೆ. ಹೀಗೆ ಕದಿಯುತ್ತಿದ್ದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.

“ವಿಚಾರಣೆಯ ವೇಳೆಯಲ್ಲಿ ಆರೋಪಿಗಳು ಸತ್ತವರನ್ನು ಮುಚ್ಚಲು ಬಳಸುತ್ತಿದ್ದ ಬೆಡ್‌ಶೀಟ್‌ಗಳು, ಸೀರೆಗಳು ಮತ್ತು ಸತ್ತವರ ಬಟ್ಟೆಗಳನ್ನು ಕದಿಯುತ್ತಿದ್ದುದು ತಿಳಿದುಬಂದಿದೆ. ಅವರ ಬಳಿಯಿಂದ 520 ಬೆಡ್‌ಶೀಟ್‌ಗಳು,127 ಕುರ್ತಾಗಳು, 52 ಬಿಳಿ ಸೀರೆಗಳು ಮತ್ತು ಇತರ ಬಟ್ಟೆಗಳನ್ನು ವಶ ಪಡಿಸಿಕೊಳ್ಳಲಾಗಿದೆ’ ಎಂದು ಸರ್ಕಲ್ ಆಫಿಸರ್ ಅಲೋಕ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹೀಗೆ ಕದ್ದ ಬಟ್ಟೆಗಳನ್ನು ಚೆನ್ನಾಗಿ ಒಗೆದು, ಸ್ವಚ್ಛ ಮಾಡಿ, ಇಸ್ತ್ರಿ ಮಾಡಿ ಅದನ್ನು ಗ್ವಾಲಿಯರ್‌ನ ಕಂಪನಿಯೊಂದರ ಲೇಬಲ್ ಹಾಕಿ, ‘ ನೋಡಿ ಸರ್, ಇದು ಬ್ರಾಂಡೆಡ್ ಐಟಂ ‘ ಎಂದು ಜನರಿಗೆ ಹೇಳಿ ಮಾರುತ್ತಿದ್ದರು. ಆ ಪ್ರದೇಶದ ಕೆಲವು ಬಟ್ಟೆ ವ್ಯಾಪಾರಿಗಳು ಇವರಿಗೆ ನಿತ್ಯದ ಈ ಲೂಟಿಗೆ 300 ರೂ.ಗಳಂತೆ ಹಣವನ್ನೂ ನೀಡುತ್ತಿದ್ದರು ಎನ್ನಲಾಗಿದೆ.

“ಏಳು ಬಂಧಿತರಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇವರು ಕಳೆದ 10 ವರ್ಷಗಳಿಂದ ಕದಿಯುತ್ತಿದ್ದಾರೆ. ಈಗ ಕಳವಿನ ಆರೋಪದ ಜೊತೆಗೆ ಎಪಿಡೆಮಿಕ್ ಆ್ಯಕ್ಟ್‌ನ ಅಡಿಯಲ್ಲೂ ಇವರ ಮೇಲೆ ಕೇಸು ದಾಖಲಿಸಲಾಗಿದೆ.

1 Comment
  1. Jsp says

    ಹೆಣದ ಬಟ್ಟೆ ಕದಿಯುತ್ತಿದ್ದವರ ಹೆಸರು ಯಾಕೆ ಹಾಕಿಲ್ಲ.
    ಕೋಮು ಬದಲು ಆಗಿದೆಯಲ್ವ.. ಎಲ್ಲಾ ನ್ಯೂಸಲ್ಲೂ ಹೆಸರು ಬಂದಿದೆ.. ನಿಮ್ಮ ಕಾಮಾಲೆ ಕಣ್ಣು ಸ್ವಚ್ಛಗೊಳಿಸಲು ಸಮಯ ಆಗಿದೆ..

Leave A Reply

Your email address will not be published.