ಬರ್ತ್ ಡೇ ಪಾರ್ಟಿಯಲ್ಲಿ ಶೂಟೌಟ್ | 7 ಜನರ ಸಾವು

ಬರ್ತ್ ಡೇ ಪಾರ್ಟಿಯೊಂದರಲ್ಲಿ ಬಂದೂಕುಧಾರಿಯೊಬ್ಬ ಮನ ಬಂದಂತೆ ಗುಂಡು ಹಾರಿಸಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿದ ಘಟನೆ ಅಮೆರಿಕದ ಕೊಲರಾಡೋದಲ್ಲಿ ನಡೆದಿದೆ.

ಕೊಲೊರಾಡೋ ಸ್ಪ್ರಿಂಗ್ಸ್ ನ ಮೊಬೈಲ್ ಹೋಮ್ ಪಾರ್ಕ್ ನಲ್ಲಿ ಮಧ್ಯರಾತ್ರಿಯ ವೇಳೆ ಈ ದಾಳಿ ನಡೆದಿದೆ.

ಸ್ನೇಹಿತರು, ಕುಟುಂಬ ಮತ್ತು ಮಕ್ಕಳು ಭಾಗವಹಿಸಿದ ಪಾರ್ಟಿಯಲ್ಲಿ ಒಳನುಗ್ಗಿದ ಬಂದೂಕುಧಾರಿ ಗುಂಡು ಹಾರಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ.

ಶಂಕಿತ ಶೂಟರ್ ಬರ್ತ್ ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದ ಯುವತಿಯ ಬಾಯ್ ಫ್ರೆಂಡ್ ಎನ್ನಲಾಗಿದೆ.

ಆರು ಜನರನ್ನು ಕೊಂದ ಆರೋಪಿಯು ನಂತರ ತನ್ನನ್ನು ತಾನು ಗುಂಡಿಕ್ಕಿಕೊಂಡು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ದಾಳಿಯ ಹಿಂದಿನ ನಿಖರ ಉದ್ದೇಶ ಇದುವರೆಗೆ ತಿಳಿದು ಬಂದಿಲ್ಲ. ಪೊಲೀಸರು ಇದುವರೆಗೂ ಆರೋಪಿ ಮತ್ತು ಸಾವನ್ನಪ್ಪಿದವರ ಗುರುತಿನ ಬಗ್ಗೆ ಮಾಹಿತಿ ಬಿಡುಗಡೆ ಮಾಡಿಲ್ಲ.

Leave A Reply

Your email address will not be published.