ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ; ಚಾಲಕ ಪಾರು

ಮೀನು ಸಾಗಾಟದ ಲಾರಿಯೊಂದರ ಟಯರ್ ಅಚಾನಕ್ ಸ್ಫೋಟಗೊಂಡು ಹೆದ್ದಾರಿಯಲ್ಲಿ ಮಗುಚಿ ಬಿದ್ದ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಬೀಡು ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಲ್ಪೆಯಿಂದ ಮೀನು ತುಂಬಿಕೊಂಡು ಮಂಗಳೂರಿನತ್ತ ಬರುತ್ತಿದ್ದ ಲಾರಿಯು ಪಡುಬಿದ್ರಿ ಬೀಡು ಬಳಿ ತಲುಪಿದಾಗ ಮುಂಭಾಗದ ಚಕ್ರ ಸ್ಫೋಟಗೊಂಡು ಹೆದ್ದಾರಿಯ ಡಿವೈಡರ್ ಮೇಲೇರಿ ಮಗುಚಿ ಬಿದ್ದಿದೆ. ಘಟನೆಯಿಂದ ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದು, ರಸ್ತೆಯ ಉದ್ದಕ್ಕೂ ಮೀನು ಚೆಲ್ಲಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ.

Leave A Reply

Your email address will not be published.