ಕಡಬ :ಬಾಲಕಿಯ ಮೇಲೆ ಸಂಬಂಧಿಯೋರ್ವನಿಂದ ಅತ್ಯಾಚಾರ ಪ್ರಕರಣ |ಆರೋಪಿಯ ಬಂಧನ

ಕಡಬ: ಹದಿನಾಕರ ಹರೆಯದ ಬಾಲಕಿ ಮೇಲೆ ಸಂಬಂಧಿಯೋರ್ವ ಅತ್ಯಾಚಾರವೆಸಗಿ ಬಾಲಕಿ ಗರ್ಭಿಣಿಯಾಗಿರುವ ಘಟನೆ ತಿಳಿದು ಬಂದಿದೆ.

ಕಡಬದ ಆತೂರು ಸಮೀಪದ 14ರ ಹರೆಯದ ಬಾಲಕಿಯ ಮೇಲೆ ಸಂಬಂಧಿಯೋರ್ವ ಅತ್ಯಾಚಾರಗೈದಿದ್ದು, ಬಳಿಕ ಬಾಲಕಿಯನ್ನು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಿದಾಗ ಬಾಲಕಿಯು ಏಳು ತಿಂಗಳ ಗರ್ಭಿಣಿಯಾಗಿರುವುದು ತಡವಾಗಿ ತಿಳಿದುಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಡಬ ಠಾಣೆಗೆ ದೂರು ನೀಡಿದ್ದು,ಅಪರಾಧಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.