4 ದಿನಗಳ ಅಂತರದಲ್ಲಿ ಅಪ್ಪ ಅಮ್ಮ ಇಬ್ಬರೂ ಕೊರೋನಾದಿಂದ ವಿಧಿವಶ | ಸಂಸ್ಕಾರ ಮಾಡಲು ದುಡ್ಡಿಲ್ಲದೆ ಪುಟ್ಟ ಮಗಳೇ ಗುಂಡಿ ತೋಡಿ ಸಂಸ್ಕಾರ ಮಾಡಿದಳು

ಕೊರೋನಾ ಎಷ್ಟೋ ಬಾರಿ ಮಾನವೀಯತೆಯನ್ನು ಮೆರೆಸಿದ್ದನ್ನು ನಾವು ಕಂಡಿದ್ದೇವೆ, ಹಾಗೆಯೇ  ಮಾನವೀಯತೆ ಮರೆತು ಕ್ರೂರವಾಗಿ ವರ್ತಿಸುವ ಘಟನೆಗಳೂ ಆಗಾಗ್ಗೆ ನಡೆಯುತ್ತಿವೆ. ಇದು ಅಂತಹುದೇ ಮತ್ತೊಂದು ಘಟನೆ.

ಕೊರೋನಾ ಸೋಂಕಿಗೆ ತುತ್ತಾಗಿದ್ದ ತಂದೆ-ತಾಯಿಯನ್ನ ಬದುಕಿಸಿಕೊಳ್ಳಲು ಅವರ ಆ ಮೂವರು ಪುಟ್ಟ ಮಕ್ಕಳು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವಿಧಿಯ ಮುಂದೆ ಎಲ್ಲವೂ ವ್ಯರ್ಥ ಎಂಬಂತೆ ನಾಲ್ಕು ದಿನಗಳ ಅಂತರದಲ್ಲಿ ದಂಪತಿಗಳಿಬ್ಬರೂ ಸತ್ತೇ ಹೋದರು. ಅಂತ್ಯಕ್ರಿಯೆಗೆ ಗುಂಡಿ ತೋಡಲು ಹಣ ಇಲ್ಲದೆ ಪರದಾಡಿದ ಮಕ್ಕಳು ಕೊನೆಗೆ ತಾವೇ ಗುಂಡಿ ಅಗೆದು ತಾಯಿಯ ಅಂತ್ಯಸಂಸ್ಕಾರ ಮಾಡಿದ್ದಾರೆ.

ಈ ಘಟನೆ ಬಿಹಾರ ರಾಜ್ಯದ ಅರೇರಿಯಾ ಜಿಲ್ಲೆಯಲ್ಲಿ ಮೊನ್ನೆ, ಶುಕ್ರವಾರ ಸಂಭವಿಸಿದೆ. ರಾಣಿಗಂಜ್‌ನ ಬಿಶಾನ್ಸುರ್ ಪಂಚಾಯಿತಿ ವ್ಯಾಪಿಯ 7ನೇ ವಾರ್ಡ್ ನಿವಾಸಿಗಳಾದ ಬೀರೇಂದ್ರ ಮೆಹ್ರಾ(40) ಹಾಗೂ ಪ್ರಿಯಾಂಕಾ ದೇವಿ(32) ದಂಪತಿಗೆ ಏ.28 ರಂದು  ಪಾಸಿಟಿವ್ ದೃಢಪಟ್ಟಿತ್ತು. ಮೂವರು ಮಕ್ಕಳೂ ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು. ರೋಗ ಲಕ್ಷಣ ಕಾಣುತ್ತಿದ್ದಂತೆ ಆ ದಂಪತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೇ 3 ರಂದು ಬೀರೇಂದ್ರ ಮೆಹ್ರಾ ಮೃತಪಟ್ಟಿದ್ದರು. ಗಂಡನ ಸಾವಿನ ನಂತರ ಪ್ರಿಯಾಂಕಾ ದೇವಿ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಅತ್ತ ತಾಯಿ ಪ್ರಿಯಾಂಕಾರ ಆರೋಗ್ಯ ಸ್ಥಿತಿ ಗಂಭೀರ ಆಗುತ್ತಿತ್ತು. ಮಕ್ಕಳಿಗೆ ಅವರಿಗೆ ಹಣ ಹೊಂದಿಸಲು ಮಕ್ಕಳಿಗೆ ಕಷ್ಟವಾಗುತ್ತಲೇ ಇತ್ತು. ಕೊನೆಗೆ   ಹಣ ಭರಿಸಲಾಗದೆ ಕುಟುಂಬಸ್ಥರು ಮೇ 5 ರ ರಾತ್ರಿ ತಮ್ಮ ತಾಯಿಯನ್ನು ಮನೆಗೆ ಕರೆದು ತಂದಿದ್ದರು. ಮರುದಿನ ಆಕೆಯ ಆರೋಗ್ಯ ಸ್ಥಿತಿ ತೀವ್ರ ಗಂಭೀರಗೊಂಡಿದ್ದು, ಮತ್ತೆ ಚಿಕಿತ್ಸೆಗಾಗಿ ಇನ್ನೊಂದು ಆಸ್ಪತ್ರೆಗೆ ಸೇರಿಸಬೇಕೆಂದು ಅಂದುಕೊಳ್ಳುವಷ್ಟರಲ್ಲಿ  ಶ
ಆಕೆ ಉಸಿರು ನಿಲ್ಲಿಸಿದ್ದಳು.

ನಂತರ ಮಕ್ಕಳು ಅವರ ತಾಯಿಯ ಶವವನ್ನು ಗ್ರಾಮಕ್ಕೆ ತಂದರೂ ಅಲ್ಲಿನ ಯಾರೊಬ್ಬರೂ ಮಕ್ಕಳ ಸಹಾಯಕ್ಕೆ ನಿಲ್ಲಲಿಲ್ಲ. ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಎಲ್ಲರೂ ಮಾನವೀಯತೆಯಿಂದ ದೂರ ಉಳಿದಿದ್ದರು. ಇತ್ತ ತಾಯಿಯ ಅಂತ್ಯಸಂಸ್ಕಾರಕ್ಕೆ ಮೃತರ ಮಕ್ಕಳ ಬಳಿ ಹಣವೂ ಇರಲಿಲ್ಲ. ಕೊನೆಗೆ ಮೃತರ ಹಿರಿಯ ಪುತ್ರಿ ಸೋನಿ ಕುಮಾರಿ ಪಿಪಿಇ ಕಿಟ್ ಧರಿಸಿ ಸ್ವತಃ ಗುಂಡಿ ತೋಡಿದ್ದಾಳೆ. ಬಳಿಕ ಮೂರು ಮಕ್ಕಳು ಜಂಟಿಯಾಗಿ ತಾಯಿಯ ಶವವನ್ನು ಸಮಾಧಿಯಲ್ಲಿ ಮುಚ್ಚಿ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ.

Leave A Reply

Your email address will not be published.