Day: May 9, 2021

ಮೇ.10ರಿಂದ ಮುಳಿಯ ಜುವೆಲ್ಸ್‌ನಿಂದ ವರ್ಚುವಲ್ ಸೇಲ್ಸ್ | ಮನೆಯಿಂದಲೇ ಆಭರಣಗಳನ್ನು ಖರೀದಿ ಮಾಡುವ ಅವಕಾಶ

ಕೋವಿಡ್19ರ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸರಕಾರವು ಚಿನ್ನದಂಗಡಿ ಸೇರಿದಂತೆ ಇತರ ಮಳಿಗೆಗಳನ್ನು ತೆರೆಯಲು ನಿರ್ಬಂದ ಹೇರಲಾಗಿದೆ. ಇದಕ್ಕಾಗಿ ಜಿಲ್ಲೆಯ ಪ್ರತಿಷ್ಟಿತ ಚಿನ್ನದ ಮಳಿಗೆಯಾಗಿರುವ ಮುಳಿಯ ಜ್ಯುವೆಲ್ಸ್ ಸಂಸ್ಥೆಯು ಗ್ರಾಹಕರಿಗೆ ಇಂತಹ ಸಂದರ್ಭದಲ್ಲಿಯೂ ವರ್ಚುವಲ್ ಆನ್ಲೈನ್ ಸೇಲ್ ಮೂಲಕ ಖರೀದಿಗೆ ಅವಕಾಶ ಮಾಡಿಕೊಟ್ಟಿದೆ. ಮುಳಿಯ ಚಿನ್ನಾಭರಣಗಳ ಮಳಿಗೆಯು ಜನರಿಗೆ ಮನೆಯಲ್ಲಿಯೇ ಕುಳಿತು ಆಭರಣಗಳನ್ನು ಖರೀದಿ ಮಾಡಲು ಮೇ.10ರಿಂದ ಮುಳಿಯ ವರ್ಚವಲ್ ಸೇಲ್ಸ್ ಆರಂಭಿಸಿದೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 4ರವರೆಗೆ ಆನ್‌ಲೈನ್ ಮೂಲಕ ಇಷ್ಟದ ಆಭರಣಗಳನ್ನು ಆಯ್ಕೆ ಮಾಡಬಹುದು. …

ಮೇ.10ರಿಂದ ಮುಳಿಯ ಜುವೆಲ್ಸ್‌ನಿಂದ ವರ್ಚುವಲ್ ಸೇಲ್ಸ್ | ಮನೆಯಿಂದಲೇ ಆಭರಣಗಳನ್ನು ಖರೀದಿ ಮಾಡುವ ಅವಕಾಶ Read More »

ಲಾಕ್ ಡೌನ್ ಗೆ ಉಡುಪಿ ಪೂರ್ತಿ ಸ್ತಬ್ಧ | ಮೀನು ಮಾರುಕಟ್ಟೆಯಲ್ಲಿ ಮಾತ್ರ ಬೆಳ್ ಬೆಳಿಗ್ಗೆ ಜೋರು ವ್ಯವಹಾರ

ಉಡುಪಿ ಲಾಕ್ ಡೌನ್ ಗೆ ಉತ್ತಮವಾಗಿ ಸ್ಪಂದಿಸಿದೆ. ಬೆಳಗಿನ ಹೊತ್ತು ದಿನಸಿ ತರಕಾರಿ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಇತ್ತು. ತಳ್ಳುಗಾಡಿಯಲ್ಲಿ ಹಣ್ಣು-ಹಂಪಲು ಮಾರುವ ಗ್ರಾಹಕರು ಎಂದಿನಂತೆ ವ್ಯಾಪಾರದಲ್ಲಿ ಬ್ಯುಸಿ. ಜನರಲ್ಲಿ ಒಂದು ತರದ ಅವಸರ ಇತ್ತು. ಬೇಗ ಬೇಗ ವ್ಯಾಪಾರ ಮುಗಿಸಿ ಮನೆಗೆ ಹೋಗುವ ತವಕ ವ್ಯಾಪಾರಿಗಳದ್ದು. ದಿನಸಿ ಅಂಗಡಿ ಮಾಲೀಕರು ಆಗಾಗ ವಾಚ್ ಗಡಿಯಾರ ಗಮನಿಸುತ್ತಾ ಸಮಯಕ್ಕೆ ಸರಿಯಾಗಿ ಅಂಗಡಿ ಬಂದ್ ಮಾಡುವ ಉದ್ದೇಶ ಹೊಂದಿದ್ದರು. ಅಂತೆಯೇ ಸಮಯಕ್ಕೆ ಸರಿಯಾಗಿ ಅಂಗಡಿ ಬಂದ್ ಮಾಡಿದ್ದರು. ಲಾಕ್ …

ಲಾಕ್ ಡೌನ್ ಗೆ ಉಡುಪಿ ಪೂರ್ತಿ ಸ್ತಬ್ಧ | ಮೀನು ಮಾರುಕಟ್ಟೆಯಲ್ಲಿ ಮಾತ್ರ ಬೆಳ್ ಬೆಳಿಗ್ಗೆ ಜೋರು ವ್ಯವಹಾರ Read More »

ನಾಳೆಯಿಂದ ಎರಡು ವಾರಗಳ ಲಾಕ್ ಡೌನ್, ದ.ಕ.ಜಿಲ್ಲಾಧಿಕಾರಿಯಿಂದ ಮಾರ್ಗ ಸೂಚಿ ಬಿಡುಗಡೆ | ಮದುವೆಗೆ 25 ಜನರಿಗೆ ಅವಕಾಶ, ಅವಶ್ಯ ಸೇವೆಗಳ ಅಂಗಡಿಗಳು ಬೆಳಗ್ಗೆ 6 ರಿಂದ 9 ರವರೆಗೆ

ಕರ್ನಾಟಕ ರಾಜ್ಯದಾದ್ಯಂತ ಮೆ.10ರಿಂದ ಬೆಳಿಗ್ಗೆ 6ರಿಂದ ಮೇ.24ರವರೆಗೆ ಬೆಳಿಗ್ಗೆ 6ರವರೆಗೆ ಲಾಕ್ ಡೌನ್ ಜಾರಿಯಲ್ಲಿರಲಿದೆ. ಈ ಹಿನ್ನಲೆಯಲ್ಲಿ ದ.ಕ.ಜಿಲ್ಲಾಡಳಿತ ಮಾರ್ಗಸೂಚಿಯನ್ನು ಹೊರಡಿಸಿದ್ದು ಆಹಾರ, ದಿನಸಿ , ಹಣ್ಣುಗಳು ಮತ್ತು ತರಕಾರಿಗಳು ,ಮಾಂಸ ಮತ್ತು ಮೀನು ಮತ್ತು ಪ್ರಾಣಿಗಳ ಮೇವನ್ನು ವ್ಯಾಪಾರ ಮಾಡುವ ಅಂಗಡಿಗಳು ಬೆಳಿಗ್ಗೆ 6 ರಿಂದ ಬೆಳಿಗ್ಗೆ 9 ರವರೆಗೆ ಕಾರ್ಯಾಚರಿಸಲು ಅನುಮತಿ ನೀಡಿದೆ. ಸ್ವತಂತ್ರ ಮದ್ಯದಂಗಡಿಗಳು ಮತ್ತು ಮಳಿಗೆಗಳಿಂದಬೆಳಿಗ್ಗೆ 6 ರಿಂದ ಬೆಳಿಗ್ಗೆ 9 ರವರೆಗೆ ಮಾತ್ರ ಪಾರ್ಸಲ್ ಕೊಂಡುಹೋಗಲು ಅನುಮತಿಸಲಾಗಿದೆ. ಬೆಳಿಗ್ಗೆ 9.00 …

ನಾಳೆಯಿಂದ ಎರಡು ವಾರಗಳ ಲಾಕ್ ಡೌನ್, ದ.ಕ.ಜಿಲ್ಲಾಧಿಕಾರಿಯಿಂದ ಮಾರ್ಗ ಸೂಚಿ ಬಿಡುಗಡೆ | ಮದುವೆಗೆ 25 ಜನರಿಗೆ ಅವಕಾಶ, ಅವಶ್ಯ ಸೇವೆಗಳ ಅಂಗಡಿಗಳು ಬೆಳಗ್ಗೆ 6 ರಿಂದ 9 ರವರೆಗೆ Read More »

ಕಡಬ :ಬಾಲಕಿಯ ಮೇಲೆ ಸಂಬಂಧಿಯೋರ್ವನಿಂದ ಅತ್ಯಾಚಾರ ಪ್ರಕರಣ |ಆರೋಪಿಯ ಬಂಧನ

ಕಡಬ: ಹದಿನಾಕರ ಹರೆಯದ ಬಾಲಕಿ ಮೇಲೆ ಸಂಬಂಧಿಯೋರ್ವ ಅತ್ಯಾಚಾರವೆಸಗಿ ಬಾಲಕಿ ಗರ್ಭಿಣಿಯಾಗಿರುವ ಘಟನೆ ತಿಳಿದು ಬಂದಿದೆ. ಕಡಬದ ಆತೂರು ಸಮೀಪದ 14ರ ಹರೆಯದ ಬಾಲಕಿಯ ಮೇಲೆ ಸಂಬಂಧಿಯೋರ್ವ ಅತ್ಯಾಚಾರಗೈದಿದ್ದು, ಬಳಿಕ ಬಾಲಕಿಯನ್ನು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಒಳಪಡಿಸಿದಾಗ ಬಾಲಕಿಯು ಏಳು ತಿಂಗಳ ಗರ್ಭಿಣಿಯಾಗಿರುವುದು ತಡವಾಗಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಡಬ ಠಾಣೆಗೆ ದೂರು ನೀಡಿದ್ದು,ಅಪರಾಧಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಟಯರ್ ಸ್ಫೋಟಗೊಂಡು ಮೀನು ಸಾಗಾಟದ ಲಾರಿ ಪಲ್ಟಿ; ಚಾಲಕ ಪಾರು

ಮೀನು ಸಾಗಾಟದ ಲಾರಿಯೊಂದರ ಟಯರ್ ಅಚಾನಕ್ ಸ್ಫೋಟಗೊಂಡು ಹೆದ್ದಾರಿಯಲ್ಲಿ ಮಗುಚಿ ಬಿದ್ದ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಬೀಡು ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಲ್ಪೆಯಿಂದ ಮೀನು ತುಂಬಿಕೊಂಡು ಮಂಗಳೂರಿನತ್ತ ಬರುತ್ತಿದ್ದ ಲಾರಿಯು ಪಡುಬಿದ್ರಿ ಬೀಡು ಬಳಿ ತಲುಪಿದಾಗ ಮುಂಭಾಗದ ಚಕ್ರ ಸ್ಫೋಟಗೊಂಡು ಹೆದ್ದಾರಿಯ ಡಿವೈಡರ್ ಮೇಲೇರಿ ಮಗುಚಿ ಬಿದ್ದಿದೆ. ಘಟನೆಯಿಂದ ಅದೃಷ್ಟವಶಾತ್ ಚಾಲಕ ಅಪಾಯದಿಂದ ಪಾರಾಗಿದ್ದು, ರಸ್ತೆಯ ಉದ್ದಕ್ಕೂ ಮೀನು ಚೆಲ್ಲಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ.

ಪತ್ನಿಯ‌ ಕೊಂದು ಶವದ ಜತೆ ಸೆಲ್ಫಿ ತೆಗೆದು ಸ್ಟೇಟಸ್ ಹಾಕಿದ ಭೂಪ

ಇಲ್ಲೊಬ್ಬ ತನ್ನ ಪತ್ನಿಯ‌ ಕೊಂದು ಶವದ ಜತೆ ಸೆಲ್ಫಿ ತೆಗೆದು ಸ್ಟೇಟಸ್ ಹಾಕಿದ್ದು ಜತೆಗೆ ಸ್ನೇಹಿತರಿಗೆ,ಬಂಧುಗಳಿಗೆ ಕಳುಹಿಸಿ ವಿಕೃತಿ ಮೆರೆದ ಬಗ್ಗೆ ಆಂದ್ರಪ್ರದೇಶದ ವಿಶಾಖಪಟ್ಟಣದಿಂದ ವರದಿಯಾಗಿದೆ. ಈ ಘಟನೆ ವಿಶಾಖಪಟ್ಟಣ ಜಿಲ್ಲೆಯ ಬಡವೇಲು ಪಟ್ಟಣದ ಸುಂದರಯ್ಯ ಕಾಲನಿಯಲ್ಲಿ ನಡೆದಿದೆ. ಮಂಜುಳಾ (23) ಎಂಬಾಕೆ ಪತಿಯಿಂದಲೇ ಹತ್ಯೆಯಾದ ದುರ್ದೈವಿ. ಮಂಜುಳ ವಿಶಾಖಪಟ್ಟಣಂ ಜಿಲ್ಲೆಯ ಜಮ್ಮಲಮಡುಗು ಪಟ್ಟಣದ ನಿವಾಸಿ ನಾಗರಾಜ ಎಂಬಾತನೊಂದಿಗೆ ವಿವಾಹವಾಗಿದ್ದು, ಕೆಲವೊಂದು ಸಮಸ್ಯೆಗಳಿಂದಾಗಿ ಮದುವೆ ಆದ ಒಂದೇ ತಿಂಗಳಲ್ಲಿ ಇಬ್ಬರ ಸಂಬಂದ ಮುರಿದು ಬಿದ್ದಿತ್ತು. ಇದರ ನಡುವೆ …

ಪತ್ನಿಯ‌ ಕೊಂದು ಶವದ ಜತೆ ಸೆಲ್ಫಿ ತೆಗೆದು ಸ್ಟೇಟಸ್ ಹಾಕಿದ ಭೂಪ Read More »

ಗುಂಪು ಕಟ್ಟಿಕೊಂಡು ಸೈನಿಕರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣ | ಆರೋಪಿಗೆ ಮಧ್ಯಂತರ ಜಾಮೀನು

ನೆಲ್ಯಾಡಿಯಲ್ಲಿ ಬೈಕ್ ಹಾಗೂ ಕಾರು ಮಧ್ಯೆ ಅಪಘಾತ ನಡೆದು, ಆ ನಂತರ ಕಾರಿನ ಮಾಲಕರಾದ, ಭಾರತೀಯ ಸೈನಿಕನ ಮನೆ ಹುಡುಕಿಕೊಂಡು ಹೋಗಿ ದಾಳಿ ಮಾಡಿದ ವ್ಯಕ್ತಿಗೆ ಇದೀಗ ಜಾಮೀನು ಸಿಕ್ಕಿದೆ. ನೆಲ್ಯಾಡಿಯ ಪೊಯ್ಯೆ ಸಮೀಪ ಕಾರು ಬೈಕು ಪರಸ್ಪರ ಒರೆಸಿಕೊಂಡಿದ್ದವು ಎನ್ನಲಾಗಿದೆ. ಈ ಸಂದರ್ಭ ಮಾತಿನ ಚಕಮಕಿ ಉಂಟಾಗಿತ್ತು. ಬಳಿಕ ತಂಡವೊಂದು ಕಾರು ಚಾಲಕರಾದ ಭಾರತೀಯ ಸೇನೆಯ ಸೈನಿಕರಿದ್ದ ಮನೆಗೆ ಹುಡುಕಿಕೊಂಡು ಬಂದು ಹಲ್ಲೆಗೆ ಯತ್ನಿಸಿತ್ತು. ಗುಂಪು ಕಟ್ಟಿಕೊಂಡು ಬಂದ ಆ ತಂಡದಲ್ಲಿ 30 ಕ್ಕೂ ಜಾಸ್ತಿ …

ಗುಂಪು ಕಟ್ಟಿಕೊಂಡು ಸೈನಿಕರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಪ್ರಕರಣ | ಆರೋಪಿಗೆ ಮಧ್ಯಂತರ ಜಾಮೀನು Read More »

ಮಮತೆಯ ಕರುಳ ಬಳ್ಳಿ ಅಮ್ಮ | ಅಮ್ಮಂದಿರ ದಿನದ ಶುಭಾಶಯಗಳು !

ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿಯ ಪಾತ್ರ ಅಪಾರವಾಗಿದೆ. ತನ್ನ ಪ್ರಪಂಚ ತನ್ನ ಮಕ್ಕಳೇ ಎಂದು ಹೇಳುವ ಕರುಣಾಮಯಿ ತಾಯಿ. ಪ್ರೀತಿ, ಸ್ನೇಹ, ಕರುಣೆ, ವಾತ್ಸಲ್ಯ ಹಾಗೂ ಮಮತೆಯಿಂದ ನೋಡಿಕೊಳ್ಳುವ ಜೀವವೇ ಅಮ್ಮ. ಒಂದು ಮಗುವಿಗೆ ಸೊಲ್ಪ ಆರೋಗ್ಯದಲ್ಲಿ ಸಮಸ್ಯೆ ಬಂದಿದೆ ಎಂದು ಗೊತ್ತಾದರೆ ಸಾಕು ತಕ್ಷಣವೇ ಉಪಚರಿಸಿಕೊಂಡು ಔಷದಿಗಳನ್ನು ನೀಡುವಳು. ಆದರೆ ತನ್ನ ಆರೋಗ್ಯದ ಬಗ್ಗೆ ಚಿಂತೆ ಮಾಡದೇ ತನ್ನ ಮನೆಯವರ ಹಾಗೂ ಮಕ್ಕಳ ಅರೋಗ್ಯದ ಬಗ್ಗೆ ಕಾಳಜಿ ವಹಿಸುವಳು. ತಾಯಿಯು ಮಕ್ಕಳಿಗೋಸ್ಕರ ಪ್ರೀತಿಯನ್ನೇ ತ್ಯಾಗ ಮಾಡುವರು. …

ಮಮತೆಯ ಕರುಳ ಬಳ್ಳಿ ಅಮ್ಮ | ಅಮ್ಮಂದಿರ ದಿನದ ಶುಭಾಶಯಗಳು ! Read More »

ಮದ್ಯದ ಮಲ್ಲರಿಗೆ ಗುಡ್ ನ್ಯೂಸ್ | ಇನ್ನು ಮದ್ಯವನ್ನು ಸರಕಾರವೇ ಹೋಂ ಡೆಲಿವರಿ ಕೊಡಲಿದೆ !

ಮೇ 10 ರಿಂದ ಲಾಕ್ ಡೌನ್ ಘೋಷಣೆ ಮಾಡಲಾಗಿದೆ‌. ಮದ್ಯದಂಗಡಿಗಳಿಂದ ಸರಕಾರದ ಬೊಕ್ಕಸಕ್ಕೆ ದೊಡ್ಡ ಆದಾಯವನ್ನು ತರುತ್ತಿದೆ. ಈ ಕಾರಣ ಮದ್ಯ ಬಂದ್ಮಾಡುವಂತಿಲ್ಲ. ಈ ಕಾರಣದಿಂದ ಮದ್ಯದ ಆದಾಯವನ್ನು ಹೆಚ್ಚಿಸಿಕೊಳ್ಳಲು ಮದ್ಯಪ್ರಿಯರ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲು ಸರಕಾರ ಮುಂದಾಗಿದೆ ಎಂದು ಅಬಕಾರಿ ಸಚಿವ ತಿಳಿಸಿದ್ದಾರೆ. ಆದರೆ ಈ ‘ ಮನೆ ಬಾಗಿಲಿಗೆ ಮದ್ಯದ ಭಾಗ್ಯ ‘ ನೀಡುತ್ತಿರುವುದು ಕರ್ನಾಟಕದಲ್ಲಿ ಅಲ್ಲ. ಛತ್ತೀಸ್ ಗಢದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಅಲ್ಲಿನ ಅಬಕಾರಿ ಮಂತ್ರಿ ಕವಾಸಿ ಲಖ್ಮಾ …

ಮದ್ಯದ ಮಲ್ಲರಿಗೆ ಗುಡ್ ನ್ಯೂಸ್ | ಇನ್ನು ಮದ್ಯವನ್ನು ಸರಕಾರವೇ ಹೋಂ ಡೆಲಿವರಿ ಕೊಡಲಿದೆ ! Read More »

ಸೋಮೇಶ್ವರದ ಸೊಂಟ ಬಿದ್ದು ಹೋದ ಅಸಹಾಯಕ ಹುಡುಗನನ್ನು ಕಳೆದ 27 ವರ್ಷಗಳಿಂದ ಸಾಕುತ್ತಿರುವ 71 ವರ್ಷದ ಅಜ್ಜಿಗೆ ಬೇಕಿದೆ ನಿಮ್ಮ ಸಾಂತ್ವನ !

ಸೊಮೇಶ್ವರ ಪಂಚಾಯತ್ ನ ಲಕ್ಷ್ಮಿ ಗುಡ್ಡೆಯಲ್ಲಿ ಬಾಂಧವರೊಬ್ಬರು ನೀಡಿದ ಆಸರೆಯಲ್ಲಿ ಬದುಕುತ್ತಿರುವ ಮುಸ್ಲಿಂ ತಾಯಿ ಮತ್ತು ಮಗನ ದುರಂತ ಬದುಕಿಗೆ ಸಾಂತ್ವನ ಬೇಕಾಗಿದೆೆ. ಫಾರೂಕ್ ಗೆ ಈಗ ಪ್ರಾಯ 46 ವರ್ಷ. ಒಂದೆರಡಲ್ಲ, ಕಳೆದ 27 ವರ್ಷದಿಂದ ಹಾಸಿಗೆಯಲ್ಲಿ ಮಲಗಿ 71 ವರ್ಷ ಪ್ರಾಯದ ತಾಯಿಯ ಸುಶ್ರೂಷೆಯಲ್ಲಿ ಬದುಕುತ್ತಿರುವ ಈ ವ್ಯಕ್ತಿಯ ಬದುಕು ರಕ್ತ ಕಣ್ಣೀರಿನ ಕಥೆಯಂತೆ ಆಗಿ ಹೋಗಿದೆ. ತನ್ನ 19 ನೇ ವರ್ಷ ಪ್ರಾಯದಲ್ಲಿ ಫಾರೂಕ್ ಆಳವಾದ ಬಾವಿಗೆ ಬಿದ್ದು ಸೊಂಟ ಮತ್ತು ಕಾಲು ಮುರಿದುಕೊಂಡಿದ್ದ. …

ಸೋಮೇಶ್ವರದ ಸೊಂಟ ಬಿದ್ದು ಹೋದ ಅಸಹಾಯಕ ಹುಡುಗನನ್ನು ಕಳೆದ 27 ವರ್ಷಗಳಿಂದ ಸಾಕುತ್ತಿರುವ 71 ವರ್ಷದ ಅಜ್ಜಿಗೆ ಬೇಕಿದೆ ನಿಮ್ಮ ಸಾಂತ್ವನ ! Read More »

error: Content is protected !!
Scroll to Top