ಕರಾವಳಿಯ ವಿವಿದೆಡೆ ಭಾರೀ ಗಾಳಿ ,ಮಳೆ,ಸಿಡಿಲಿಗೆ ದನ ಸಾವು,ವಿವಿದೆಡೆ ಮುರಿದು ಬಿದ್ದ ಮರಗಳು,ಮನೆಗೆ ಹಾನಿ

ಕರಾವಳಿಯ ವಿವಿದೆಡೆ ಭಾರೀ ಗಾಳಿ ,ಮಳೆಯಾಗಿದ್ದು,ಬೆಳ್ತಂಗಡಿಯಲ್ಲಿ ಸಿಡಿಲಿಗೆ ದನವೊಂದು ಸಾವಿಗೀಡಾಗಿದೆ,ಮನೆಹೊಂದರ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ.

ತೋಟಗಳಲ್ಲಿ ತೆಂಗು,ಅಡಿಕೆ ಸೇರಿದಂತೆ ವಿವಿದ ಮರಗಳು ಮುರಿದು ಬಿದ್ದಿದೆ.

ಕಡಬ ತಾಲೂಕಿನ ಕೊಯಿಲದಲ್ಲಿ ಮನೆಯೊಂದಕ್ಕೆ ಸಿಡಿಲು ಬಡಿದು ಹಾನಿಯಾಗಿದೆ.

ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಕೊಡೆಂಕಿರಿ ಲೋಕಯ್ಯ ನಾಯ್ಕ ಎಂಬವರ ಮನೆಗೆ ಮೇ. 5ರಂದು ಸಂಜೆ ಬೀಸಿದ ಗಾಳಿ ಮಳೆಗೆ ಮರಬಿದ್ದು, ಪಕ್ಕಾಸು, ಹಂಚುಗಳಿಗೆ ಹಾನಿಯಾಗಿದೆ.

ಮಳೆ, ಗಾಳಿಗೆ ಮೂಲ್ಕಿ ಹೋಬಳಿಯ ಅತಿಕಾರಿಬೆಟ್ಟು ಗ್ರಾಪಂ ವ್ಯಾಪ್ತಿಯ ಮೈಲೊಟ್ಟು ಬಳಿ ಮೀನಾಕ್ಷಿ ಮೊಯಿಲಿ ಎಂಬವರ ಮನೆ ಮೇಲೆ ಗೇರುಮರ ಬಿದ್ದು ಜಖಂಗೊಂಡಿದೆ. ಸ್ಥಳಕ್ಕೆ ಅತಿಕಾರಿಬೆಟ್ಟು ಗ್ರಾಪಂ ಸದಸ್ಯ ದಯಾನಂದ ಮಟ್ಟು,ವಿಎ ಸುನಿಲ್ ಕುಮಾರ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

ಬೆಳ್ತಂಗಡಿ ತಾಲ್ಲೂಕಿನ ಮರೋಡಿ ಗ್ರಾಮದ ಕುಡ್ಯರಬೆಟ್ಟು ಯಶೋಧರ ಬಂಗೇರ ಅವರ ಮನೆಗೆ ಸಿಡಿಲು ಬಡಿದು, ಮನೆಯ ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಕೊಟ್ಟಿಗೆಗೂ ಇದರ ಆಘಾತವಾಗಿದ್ದು ಕೊಟ್ಟಿಗೆಯಲ್ಲಿದ್ದ ದನವೊಂದು ಸ್ಥಳದಲ್ಲಿಯೇ ಸಾವನ್ನಪ್ಪಿದೆ.

ಬೆಳ್ತಂಗಡಿ – ಉಪ್ಪಿನಂಗಡಿ ಹೆದ್ದಾರಿಯ ಉರುವಾಲು ಗ್ರಾಮದ ಹಲೇಜಿ ಬಳಿ ಸಂಜೀವ ಮೂಲ್ಯರವರ ಅಂಗಳದಲ್ಲಿದ್ದ ತೆಂಗಿನ ಮರವೊಂದು ರಸ್ತೆಗೆ ಬಿದ್ದು ಒಂದು ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಇದರಿಂದ ಕೆಲ ಹೊತ್ತು ರಸ್ತೆ ಸಂಚಾರಕ್ಕೆ ತಡೆಯಾಗಿದ್ದು, ಸ್ಥಳೀಯರು ಸೇರಿ ಮರವನ್ನು ತೆರವುಗೊಳಿಸಿದರು.

ಉರುವಾಲು ಗ್ರಾಮದ ಹಲೇಜಿ ಬಳಿಯ ಸುಧೀರ್ ಎಂಬವರ ತೋಟದಲ್ಲಿನ 10 ಅಡಿಕೆ ಮರಗಳು, ಹಲೇಜಿ ಸುಶೃತ ಭಟ್‍ ರ ಮನೆಯ 15 ಅಡಿಕೆ ಗಿಡಗಳು ಮಚ್ಚಿನ ಗ್ರಾಮದ ಕಲಾಯಿ ಪ್ರಶಾಂತ್ ರವರ ಮನೆಯ 5 ಅಡಿಕೆ ಗಿಡಗಳಿಗೆ ಹಾನಿಯಾಗಿದೆ. ಪ್ರಶಾಂತ್‍ರವರ ಪಂಪ್ ಶೆಡ್‍ಗೆ ಮರವೊಂದು ಬಿದ್ದು ಶೆಡ್ ಜಖಂಗೊಂಡಿದೆ. ಗರ್ಡಾಡಿ ಗ್ರಾಮದ ವಸಂತ ಭಂಢಾರಿ ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳಿಗೆ ಹಾನಿಯಾಗಿದೆ. ಮನೆಯ ಗೋಡೆಯೂ ಬಿರುಕು ಬಿಟ್ಟಿದೆ.

ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪುತ್ತೂರಿನಲ್ಲೂ ಉತ್ತಮ‌ ಮಳೆಯಾಗಿದೆ.

Leave A Reply

Your email address will not be published.