ಒಂದು ಕಾಲದ ಸಾರಣೆ ಕೆಲಸಗಾರ, ಹಾಸ್ಯ ನಟ ಚಿಕ್ಕಣ್ಣ ಲಾಕ್​ಡೌನ್​ನಲ್ಲಿ ಮತ್ತೆ ಗಾರೆ ಕೆಲಸಕ್ಕೆ !!

ಸಿನಿಮಾಗೆ ಬರುವ ಮೊದಲು ಹಾಸ್ಯ ನಟ ಚಿಕ್ಕಣ್ಣ ಸಾರಣೆ ಕೆಲಸ ಮಾಡುತ್ತಿದ್ದರು. ಮೇಸ್ತ್ರಿ ಕೈ ಕೆಳಗೆ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ ನಟನಾಗುವ ಕನಸು ಹೊತ್ತು ಬೆಂಗಳೂರಿಗೆ ಬಂದು ತಮ್ಮ ಶ್ರಮದಿಂದ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ಇಂತಹ ನಟ ಈಗ ಮತ್ತೆ ಗಾರೆ ಕೆಲಸ ಆರಂಭಿಸಿದ್ದಾರೆ. ಅಷ್ಟಕ್ಕೂ ಈಗ ಚಿಕ್ಕಣ್ಣ ಗಾರೆ ಕೆಲಸ ಮಾಡಲು ಕಾರಣ ಏನು ಅನ್ನೋ ಅನುಮಾನ ಕಾಡೋದು ಸಹಜ. ಅದಕ್ಕೆ ಉತ್ತರ ಮುಂದಿದೆ.

ಚಿಕ್ಕಣ್ಣ ತಮಗಾಗಿ ಒಂದು ಚಿಕ್ಕ ಮನೆ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ. ಸ್ವತಃ ಚಿಕ್ಕಣ್ಣ ಅವರೇ ಗೋಡೆಗಳಿಗೆ ಪ್ಲಾಸ್ಟಿಂಗ್ ಮಾಡುತ್ತಾ ಬೆವರು ಹರಿಸುತ್ತಿದ್ದಾರೆ. ಲಾಕ್​ಡೌನ್​ನಲ್ಲಿ ಚಿಕ್ಕಣ್ಣ ಇಡೀ ಚಿತ್ರೋದ್ಯಮ ಬಂದ್ ಆಗಿದ್ದು ಯಾವುದೇ ಶೂಟಿಂಗ್ ನಡೆಯುತ್ತಿಲ್ಲ.

ಇಂತಹ ಸಮಯದಲ್ಲಿ ಮೈಸೂರಿನ ಬಳಿ ತೋಟದ ಮನೆ ಮಾಡಿಕೊಂಡಿರುವ ಚಿಕ್ಕಣ್ಣ, ಅಲ್ಲಿ ಮನೆ ಕಟ್ಟಿಸುತ್ತಿದ್ದು, ಲಾಕ್​ಡೌನ್​ನಿಂದಾಗಿ ಅವರಿಗೆ ಗಾರೆ ಕೆಲಸದವರು ಸಿಗುತ್ತಿಲ್ಲವಂತೆ. ಈ ಕಾರಣದಿಂದಾಗಿ ಚಿಕ್ಕಣ್ಣ ತಮ್ಮ ಮನೆಯ ಕೆಲಸವನ್ನು ತಾವೇ ಮಾಡಲು ಮುಂದಾಗಿದ್ದಾರೆ.
ಗಾರೆ ಕೆಲಸದ ಮಾಡಿ ಅಭ್ಯಾಸ ಇರುವ ಈ ನಟ ಗೋಡೆಗಳಿಗೆ ಪ್ಲಾಸ್ಟಿಂಗ್ ಮಾಡುತ್ತಿರುವ ಫೋಟೋ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ. ಸ್ಟಾರ್ ಗಿರಿ ಇದ್ದರೂ ಚಿಕ್ಕಣ್ಣ ಸಾಮಾನ್ಯರಂತೆ ತಮ್ಮ ಹಿಂದಿನ ದಿನಗಳನ್ನು ಮರೆಯದೆ ಮಾಡಿದ ಈ ಕೆಲಸಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

Leave A Reply

Your email address will not be published.