ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ‘ ಸೋಂಕಿತ’ ಹಣೆಪಟ್ಟಿ ಹೊತ್ತ 17 ಜನ ಮುಸ್ಲಿಂ ಸಿಬ್ಬಂದಿ ಅಮಾನತಾದರೆ ಕೆಲಸ‌‌ ನೀಡುವ ಅಭಯ ನೀಡಿ‌ದ ಜಮೀರ್ ಅಹಮದ್ !

ಬೆಡ್​​ ಬ್ಲಾಕಿಂಗ್​ ಪ್ರಕರಣದಲ್ಲಿ ಸಂಸದ ತೇಜಸ್ವಿ ಸೂರ್ಯ ಹೇಳಿದ 17 ಮಂದಿ ಮುಸ್ಲಿಂ ಸಿಬ್ಬಂದಿಗೆ ಕೆಲಸ ಕೊಡಿಸುವುದಾಗಿ ಶಾಸಕ‌ ಜಮೀರ್ ಅಹಮದ್ ಅಭಯ ನೀಡಿದ್ದಾರೆ.

ಮುಸ್ಲಿಂ ಸಿಬಂದಿಗಳ ಹೆಸರನ್ನು ಮಾತ್ರ ತೇಜಸ್ವಿ ಸೂರ್ಯ ಅವರು ಉಲ್ಲೇಖ ಮಾಡಿದಕ್ಕೆ ಕಾಂಗ್ರೆಸ್​ ಶಾಸಕ ಜಮೀರ್​ ಅಹಮದ್​ ಖಾನ್ ತೀವ್ರ​​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಜಮೀರ್ ಅಹಮದ್​, 205 ಸಿಬ್ಬಂದಿಯಲ್ಲಿ ಕೇವಲ 17 ಮಂದಿ ಮುಸ್ಲಿಮರ ಹೆಸರನ್ನು ಮಾತ್ರ ಉಲ್ಲೇಖ ಮಾಡಿರೋದು ಸರಿಯಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಿಡಿಕಾರಿದ್ದಾರೆ. ಪವಿತ್ರ ರಂಜಾನ್​ ಸಮಯದಲ್ಲಿ ಹೀಗೆಲ್ಲಾ ಮಾಡುತ್ತಿರಲ್ಲ, ನಿಮಗೆ  ಒಳ್ಳೆಯದಾಗುತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

ತೇಜಸ್ವಿ ಸೂರ್ಯ ಬೆಡ್​​ ಬ್ಲಾಕಿಂಗ್​ ದಂಧೆ ಬಯಲಿಗೆಳೆದು ಒಳ್ಳೆಯ ಕೆಲಸ ಮಾಡಿದ್ದಾರೆ. ಅದಕ್ಕೆ ನಿಮಗೆ ಧನ್ಯವಾದ ಹೇಳ್ತಿನಿ. ಆದರೆ ನಿಮ್ಮ ಸರ್ಕಾರದ ಆಡಳಿತದಲ್ಲೇ ಈ ಬೆಡ್ ಆಕ್ರಮ ನಡೆದಿದೆ. ಹಾಗಾದರೆ ನೀವು  ಸಿಎಂ ಯಡಿಯೂರಪ್ಪ ರಾಜೀನಾಮೆ ಕೇಳಬೇಕು ಅಲ್ವಾ. ಏಕೆ ತೇಜಸ್ವಿ ಅವರೇ ಸಿಎಂ  ರಾಜೀನಾಮೆ ಕೇಳುತ್ತಿಲ್ಲ ಎಂದು ಜಮೀರ್​ ಪ್ರಶ್ನಿಸಿದ್ದಾರೆ.

ನೀವು ಆಕ್ರಮಣದಲ್ಲಿ ಭಾಗಿಯಾದವರ ಹೆಸರು ಹೇಳಿದ್ರಿ. ಎಲ್ಲಾ ಮುಸ್ಲಿಂ ಯವಕರ ಹೆಸರನ್ನು ಹೇಳಿದ್ದೀರ ಏಕೆ ಬೇರೆ ಯಾರು ಹೆಸರು ಸಿಕ್ಕಿಲ್ವಾ. ಇಂತಹ ಪ್ಲಬಿಸಿಟಿ ಬೇಕಾ ತೇಜಸ್ವಿ ಅವರೇ. ಇಂತಹ ಹೀನ ಕೃತ್ಯವನ್ನು ಮೊದಲು ನಿಲ್ಲಿಸಿ ಎಂದು ಕುಟುಕಿದರು.

ಬೆಡ್​ ಬ್ಲಾಕಿಂಗ್ ದಂಧೆಯಲ್ಲಿ ಶಾಸಕ ಸತೀಶ್​ ರೆಡ್ಡಿ ಪಿಎ ಹರೀಶ್​ ಎಂಬುವರು ಶಾಮೀಲಾಗಿದ್ದಾರೆ ಎಂದು ಪೇಪರ್​ ತೋರಿಸಿದ ಜಮೀರ್​ ಇದಕ್ಕೆ ತೇಜಸ್ವಿ ಸೂರ್ಯ ಏನ್​ ಹೇಳ್ತಾರೆ ಎಂದು ಪ್ರಶ್ನಿಸಿದರು. ಸಂಸದರು ಉಲ್ಲೇಖಿಸಿರುವ 17 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದ್ರೆ ನಾನು ಅವರಿಗೆಲ್ಲಾ ಕೆಲಸ ಕೊಡುತ್ತೇನೆ ಎಂದು ಜಮೀರ್​ ಇದೇ ವೇಳೆ ಘೋಷಿಸಿದರು.

ಈ ಹಿಂದೆ ಸಂಸದರ ಕ್ಷೇತ್ರದಲ್ಲಿ ಕೋವಿಡ್ ನಿಂದ ಮೃತಪಟ್ಟವರನ್ನು ಹಿಂದೂ, ಮುಸ್ಲಿಂ ಅಂತ ನೋಡದೆ ನಾವು ಅಂತ್ಯ ಸಂಸ್ಕಾರದ ಮಾಡಿದ್ದೀವಿ. ಅವಾಗ ನೀವು ಎಲ್ಲಿ ಹೋಗಿದ್ರಿ ತೇಜಸ್ವಿ ಅವರೇ. ನಾವು ಯಾವ ಧರ್ಮ ಯಾವ ಜಾತಿ ಅಂತ ಕೇಳಿ ಅಂತ್ಯಸಂಸ್ಕಾರ ಮಾಡಿಲ್ಲ. ನೀವು ಜಾತಿ-ಧರ್ಮ ನೋಡದನ್ನು ಬಿಡಿ. ಇದೇ ಕೊನೆ ಈ ರೀತಿ ಮಾತನಾಡಬೇಡಿ ಎಂದು ಜಮೀರ್​ ಎಚ್ಚರಿಕೆ ನೀಡಿದರು. ಇದು ನಮ್ಮ ದೇಶ. ರಂಜಾನ್​ ವೇಳೆ ಹೀಗೆಲ್ಲಾ ನೋಯಿಸಬೇಡಿ ಎಂದು ಜಮೀರ್​ ಸುದ್ದಿಗೋಷ್ಠಿಯಲ್ಲಿ ಭಾವುಕರಾದರು.

ಬಹರೈನ್​​ ರಾಷ್ಟ್ರದಿಂದ ನಿನ್ನೆ ಆಕ್ಸಿಜನ್​ ಬಂದಿದೆ. ಅದು ಮುಸ್ಲಿಂ ರಾಷ್ಟ್ರ ಅಲ್ಲವೇ ಮತ್ತೇಕೆ ಅಲ್ಲಿಂದ ಆಕ್ಸಿಜನ್​ ತರಿಸಿಕೊಂಡಿದ್ದೀರ. ನಾವು ಕಳುಹಿಸಿದ ಆಕ್ಸಿಜನ್​​ನ ಮುಸ್ಲಿಮರಿಗೆ ಮಾತ್ರ ಬಳಸಿ ಎಂದು ಅಲ್ಲಿನವರು ಹೇಳಿದ್ದಾರಾ? ಪರಿಸ್ಥಿತಿ ಹೀಗಿರುವಾಗ ಸಂಸದರಾದ ತೇಜಸ್ವಿ ಸೂರ್ಯ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ ಎಂದು ಜಮೀರ್​​ ತಿರುಗೇಟು ನೀಡಿದರು.

Leave A Reply

Your email address will not be published.