ವಿಟ್ಲ ಹಾಗೂ ಸುಳ್ಯ | ನಾಳೆ ಮೇ 6 ರಿಂದ ಪಟ್ಟಣದೊಳಗೆ ವಾಹನ ಪ್ರವೇಶ ನಿರ್ಭಂಧ !

ಕೊರೋನಾ ಪ್ರಕರಣ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಟ್ಲ ಹಾಗೂ ಸುಳ್ಯ ಪಟ್ಟಣದೊಳಗಿನ ವಾಹನ ಪ್ರವೇಶವನ್ನು ಅಲ್ಲಿನ ಠಾಣಾಧಿಕಾರಿಗಳು ತಡೆ ಹಿಡಿದಿದ್ದಾರೆ. ನಾಳೆ ಮೇ 6 ರಿಂದ ಈ ಎರಡು ಪಟ್ಟಣಗಳಿಗೆ ಅನಗತ್ಯ ವಾಹನ ಪ್ರವೇಶವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಸ್ಥಳೀಯವಾಗಿ ಖರೀದಿಸಬೇಕೆನ್ನುವುದು ಸರ್ಕಾರದ ನಿಯಮ ಇದ್ದರೂ ಜನ ವಾಹನದ ಮೂಲಕ ಸುಳ್ಯ ನಗರಕ್ಕೆ ಹೆಚ್ಚಿನವರು ಬರುತ್ತಿದ್ದಾರೆ. ಜನ ವಾಹನದ ಮೂಲಕ ಬರುವ ಕಾರಣದಿಂದ ಟ್ರಾಫಿಕ್ ಕಂಟ್ರೋಲ್ ಆಗದೆ ಜನ ಸಂದಣಿ ಜಾಸ್ತಿಆಗುತ್ತಿರುವ ಹಿನ್ನಲೆಯಲ್ಲಿ ನಾಳೆಯಿಂದ ಸುಳ್ಯ ಜ್ಯೋತಿ ಸರ್ಕಲ್, ಗಾಂಧಿನಗರ ಹಾಗೂ ವಿವೇಕಾನಂದ ಸರ್ಕಲ್ ನಲ್ಲಿ ಚೆಕ್ ಪೋಸ್ಟ್ ಹಾಕಲಾಗುವುದು. ಅಗತ್ಯ ವಾಹನವನ್ನಷ್ಟೆ ವಿಚಾರಿಸಿ ಬಿಡುತ್ತೇವೆ. ವಾಹನ ಇಲ್ಲದೆ ಬರಬೇಕಾದ ಕಾರಣದಿಂದ ಜನ ಜಾಸ್ತಿ ಬರಲಾರರು ಎನ್ನುವುದು ನಮ್ಮ ಲೆಕ್ಕಾಚಾರ.
ಅನಾವಶ್ಯಕ ವಾಗಿ ಪೇಟೆಗೆ ಬಂದಲ್ಲಿ ಕೇಸ್ ದಾಖಲಿಸಿ ವಾಹನವನ್ನು ಸೀಝ್ ಮಾಡಲಾಗುತ್ತದೆ ಎಂದು ಸುಳ್ಯ ಪೊಲೀಸ್ ಮೂಲಗಳು ತಿಳಿಸಿವೆ.

ವಿಟ್ಲ ಪಟ್ಟಣದೊಳಗೆ ವಾಹನ ನಿರ್ಬಂಧ

ಸಮೀಪದಲ್ಲಿ ಅಗತ್ಯ ವಸ್ತುಗಳು ಸಿಗದೆ ಇದ್ದರೆ ಮಾತ್ರ  ವಿಟ್ಲ ಪಟ್ಟಣದೊಳಗೆ ಕಾಲಿಡಬಹುದು. ಅಂತಹಾ ವಸ್ತುಗಳಿಗಾಗಿ ಬಂದ ಜನರು ಆಧಾರ್ ಕಾರ್ಡ್ ತೋರಿಸಿದಲ್ಲಿ ಮಾತ್ರ ಅವರಿಗೆ ಪೇಟೆಯೊಳಗೆ ಪ್ರವೇಶ ಸಿಗಲಿದೆ. ಪುತ್ತೂರು ಕಡೆಯಿಂದ ಬರುವ ರಸ್ತೆಯ ಮೇಗಿನ ಪೇಟೆಯಲ್ಲಿ, ಕಾಸರಗೋಡು ರಸ್ತೆಯ ಸರ್ಕಾರಿ ಬಸ್ ನಿಲ್ದಾಣದ ಬಳಿ, ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ ಸಾಲೆತ್ತೂರು ರಸ್ತೆಯ ನಾಡ ಕಛೇರಿ ಬಳಿಯಲ್ಲಿ ಚೆಕ್ ಪೋಸ್ಟ್ ಅನ್ನು ಪೊಲೀಸ್ ಇಲಾಖೆ ಹಾಕಲಿದೆ ಎಂದು ವಿಟ್ಲದ ಎಸ್ ಐ ವಿನೋದ್ ರೆಡ್ಡಿ ಯವರು ಹೇಳಿದ್ದಾರೆ.

Leave A Reply

Your email address will not be published.